- Thursday
- July 9th, 2026
ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಮಾ5 ರಂದು ಎಲಿಮಲೆಯ ದೇವಚಳ್ಳ ಮಾ.ಹಿ. ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿದರು. ಪ್ರಾಥಮಿಕ ಹಾಗೂ ಪ್ರೌಡಶಾಲೆಯಲ್ಲಿ ನಡೆಯುತ್ತಿರುವ ಉತ್ತಮ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆ ಶತಮಾನೋತ್ಸವದ ಸಂಭ್ರಮ ನಡೆಯಲಿರುವುದರಿಂದ ವಿಶೇಷ ಅನುದಾನ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು. ಖಂಡಿತವಾಗಿ ಕೊಡುತ್ತೇನೆ...
ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ಸನ್ನಿಧಿಯಲ್ಲಿ ಏಕಾಹ ಭಜನೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಮಾ. 5ರ ಶುಕ್ರವಾರ ಸೂರ್ಯೋದಯದಿಂದ ಮಾ.6ರ ಶನಿವಾರ ಸೂರ್ಯೋದಯದ ತನಕ ನಡೆಯಲಿದ್ದುಇಂದು ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯವರಿಂದ...
ನಿಂತಿಕಲ್ಲು ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ ನಿಂತಿಕಲ್ಲಿನಲ್ಲೇ ಪ್ರಪ್ರಥಮ ಬಾರಿಗೆ 'ಲಕ್ಕೀ ಡ್ರಾ' ಎಂಬ ಹೊಸ ಯೋಜನೆಯೊಂದನ್ನು ಆರಂಭಿಸುತ್ತಿದೆ. ಈ ಯೋಜನೆಯು ಮಾ. 14ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲಬಹುದಾಗಿದೆ. ಈ...
ಕೊಲ್ಲಮೊಗ್ರದ ಗ್ರಾಮದ ಮಲ್ಲಾಜೆ ಎಂಬಲ್ಲಿ ದೊಡ್ಡಣ್ಣ ಶೆಟ್ಟಿ ಕೆರೆಯ ನಿರ್ಮಾಣ ಮಾಡಲಿದ್ದು ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಆಶಾ ತಿಮ್ಮಪ್ಪ ಹಾಗೂ ಪುಷ್ಪಾವತಿ ಬಾಳಿಲ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಗ್ರಾ.ಪಂ ಅಧ್ಯಕ್ಷ ಉದಯ ಕೊಪ್ಪಡ್ಕ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ ಹಾಗೂ ಪಿ.ಡಿ.ಓ ರವಿಚಂದ್ರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ...
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಜನ ಔಷಧಿ ಕೇಂದ್ರದ ಆಶ್ರಯದಲ್ಲಿ ಜನ ಔಷಧಿ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ.3 ರಂದು ಜನ ಔಷಧಿ ಮಾಹಿತಿ ಕಾರ್ಯಗಾರ ನಡೆಯಿತುಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ, ಪಂಜ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ,...
ಪಂಜದಲ್ಲಿ ಹಲವು ವರ್ಷಗಳಿಂದ ರಿಕ್ಷಾ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್ ಕಮಿಲ ಇವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರು ತೀರ ಬಡತನದಲ್ಲಿರುವುದನ್ನು ಗಮನಿಸಿ ಬಿಎಂಎಸ್ ಸಂಘದ ಸದಸ್ಯರೆಲ್ಲರೂ ಸೇರಿ ಸಂಗ್ರಹಿಸಿದ 7,410 ರೂಪಾಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ -ಪಂಜ ಇದರ ನೂತನ ಅಧ್ಯಕ್ಷರಾಗಿ ಕವನ್ ಪಲ್ಲೋಡಿ, ಕಾರ್ಯದರ್ಶಿ ಯಾಗಿ ಪ್ರದೀಪ್ ಪಲ್ಲೋಡಿ, ಗೌರವಾಧ್ಯಕ್ಷರಾಗಿ ನೇಮಿರಾಜ್ ಪಲ್ಲೋಡಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪಲ್ಲೋಡಿ, ಕೋಶಾಧ್ಯಕ್ಷರಾಗಿ ಮಹೇಶ್ ಪಲ್ಲೋಡಿ, ಜತೆ ಕಾರ್ಯದರ್ಶಿ ಅಶೋಕ್ ದೇರಾಜೆ ಆಯ್ಕೆಯಾಗಿದ್ದಾರೆ.
ಕೊಲ್ಲಮೊಗ್ರದಲ್ಲಿ ಲಾಸ್ಯ ಕಲಾಶಾಲೆಯ ನೇತೃತ್ವದಲ್ಲಿ ಮಾ.7 ರಿಂದ ನೃತ್ಯ ತರಬೇತಿ ಆರಂಭವಾಗಲಿದೆ. ಪ್ರತಿ ಆದಿತ್ಯವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಮಯೂರ ಕಲಾ ಮಂದಿರದಲ್ಲಿ ತರಬೇತಿ ನಡೆಯಲಿದೆ ಎಂದು ಸಂಯೋಜಕಿ ರೇಷ್ಮಾ ಕಡ್ಯ ತಿಳಿಸಿದ್ದಾರೆ.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.11 ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ. ಸಂಜೆ ಗಂಟೆ 5.00 ರಿಂದ ಶತರುದ್ರಾಭಿಷೇಕ, ರಾತ್ರಿ ಗಂಟೆ 9.30 ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರಿ ಗಂಟೆ 10.00 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ " ಬೂಡುದ ಭಂಡಾರ ” ತುಳು ಯಕ್ಷಗಾನ ಬಯಲಾಟ...
Loading posts...
All posts loaded
No more posts
