ಲಾಕ್ ಡೌನ್ ವಿಸ್ತರಣೆ ಉತ್ತಮ ನಿರ್ಧಾರವಾಗಿದೆ : ಸುಪ್ರೀತ್ ಮೊಂಟಡ್ಕ

ಮುಖ್ಯಮಂತ್ರಿ ಯಡಿಯೂರಪ್ಪ ರವರು ಮತ್ತೆ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಕೈಗೊಂಡಿರುವುದು ಉತ್ತಮವಾಗಿದೆ. ಕೋವಿಡ್ ನಿಯಂತ್ರಣದಲ್ಲಿದ್ದರೂ ಸಂಪೂರ್ಣ ಹತೋಟಿಗೆ ತರುವಂತದ್ದು ಅನಿವಾರ್ಯವಾಗಿದೆ. ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಅನಿವಾರ್ಯವಾಗಿದೆ. ಸರಕಾರಕ್ಕೆ ಲಾಕ್ ಡೌನ್ ನಿಂದ ನಷ್ಟ ಸಂಭವಿಸಿದ್ದರೂ, ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಚಿಂತಿಸುತ್ತಿದೆ. ಯಡಿಯೂರಪ್ಪನವರು ಯಾವಾಗಲೂ ರಾಜ್ಯದ...

ಮತ್ತೆ 14 ದಿನ ಲಾಕ್‌ಡೌನ್ : ಜೂನ್ 7 ರವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೋಲೀಸರಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತ್ತೆ 14 ದಿನಗಳ ಲಾಕ್‌ಡೌನ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದೇವೆ....
Ad Widget

ವಿವಾಹ ನಿಶ್ಚಿತಾರ್ಥ : ಜ್ಞಾನೇಶ್ – ಪೃಥ್ವಿ

ಕೊಲ್ಲಮೊಗ್ರ ಗ್ರಾಮದ ಚಾಂತಾಳ ಶ್ರೀಧರ ಗೌಡರ ಪುತ್ರ ಜ್ಞಾನೇಶ್ ರ ವಿವಾಹ ನಿಶ್ಚಿತಾರ್ಥವು ವೆಳ್ಳರಿಕುಂಡು ತಾಲೂಕು ಪನತ್ತಡಿ ಗ್ರಾಮದ ಕಲ್ಲಪ್ಪಳ್ಳಿ ಆಲುಗುಂಜ ಉಡಿಯಾರ ಐತಪ್ಪ ಗೌಡರ ಪುತ್ರಿ ಪೃಥ್ವಿ ಯೊಂದಿಗೆ ಮೇ.20 ರಂದು ವಧುವಿನ ಮನೆಯಲ್ಲಿ ಜರುಗಿತು.

ಕೊಲ್ಲಮೊಗ್ರ : ಬೈಕ್ ಸವಾರ ಬಿದ್ದು ಗಾಯ – ಅಕ್ರಮ ಮದ್ಯ ಸಾಗಾಟ ಶಂಕೆ

ಲಾಕ್ ಡೌನ್ ವೇಳೆಯಲ್ಲಿ ಕೊಲ್ಲಮೊಗ್ರ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ರೇಟ್ ಆಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಲೋಕನಾಥ ರೈ ಶಿವಾಲ ಅವರ ಬೈಕ್ ಬಾಕ್ಸ್ ನ ತುಂಬ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಅಬಕಾರಿ ಇಲಾಖೆಗೆ ದೂರು...

ಕೊಲ್ಲಮೊಗ್ರ : ರಸ್ತೆಗೆ ಬಿದ್ದ ಮರ ಸ್ಥಳೀಯರಿಂದ ತೆರವು

ಕೊಲ್ಲಮೊಗ್ರ ಹರಿಹರ ರಸ್ತೆಯ ನಿಲ್ಕೂರು ಬಳಿ ರಸ್ತೆಗೆ ಇಂದು ಮುಂಜಾನೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಸ್ಪಂದಿಸಿದ ಲವಿತ್ ಪಡ್ಪು, ಚಂದ್ರ ನಂಗಾರು, ಶಶಿ ತೋಟದಮಜಲು ಸ್ಥಳಿಯರ ಸಹಕಾರದಿಂದ ತೆರವುಗೊಳಿಸಿದರು.

ಕೊರೊನಾ ಬಾಧಿತರ ನಿರಂತರ ಭೇಟಿ ಮಾಡಿ ಧೈರ್ಯ ತುಂಬುತ್ತಿರುವ ವಿಪತ್ತು ನಿರ್ವಹಣಾ ಘಟಕ

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕೊಲ್ಲಮೊಗ್ರದಲ್ಲಿ ಎರಡು ಕೊರೋನಾ ಬಾಧಿತರ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ,  ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಹರ್ಷ ಅಡ್ನೂರುಮಜಲು...

ಕಂದ್ರಪ್ಪಾಡಿ : ಕೊರೊನಾ ವಾರಿಯರ್ಸ್ ಹಾಗೂ ಗ್ರಾ.ಪಂ.ಸದಸ್ಯರ ನೇತೃತ್ವದಲ್ಲಿ ಪಡಿತರ ವಿತರಣೆ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಪಡಿತರ ವಿತರಣಾ ಕೇಂದ್ರದಲ್ಲಿ ಕೊರೋನಾ ವಾರಿಯರ್ಸ್ ಗಳಾದ ಶಶಿಧರ್ ಬಾಳೆಗುಡ್ಡೆ,ಮುಖೇಶ್ ಪಡ್ಪು, ಚಂದ್ರಶೇಖರ್ ಕಡೋಡಿ, ರಾಜೇಶ್ ಅಂಬೆಕಲ್ಲು, ಪುನೀತ್ ಮುಂಡೋಡಿ, ಶಿವಪ್ರಕಾಶ್ ಕಡಪಳ, ಪಂಚಾಯತ್ ಸದಸ್ಯ ರಮೇಶ್ ಪಡ್ಪು, ಶೈಲೇಶ್ ಅಂಬೆಕಲ್ಲು ಹಾಗೂ ಸಹಕಾರ ಸಂಘದ ಸಿಬ್ಬಂದಿ ಪಡಿತರ ವಿತರಣೆಗೆ ಸಹಕಾರ ನೀಡಿದರು.

ವಾಲ್ತಾಜೆ : ಅನಾರೋಗ್ಯ ಪೀಡಿತರ ಮನೆ ಭೇಟಿ ಮಾಡಿದ ಸ್ಥಳೀಯಾಡಳಿತ

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ತಾಜೆ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತರ ಮನೆ ಭೇಟಿ ಮಾಡಿದ ಗ್ರಾ.ಪಂ.ಸದಸ್ಯರು ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದರು. ಈ ವೇಳೆ ಗ್ರಾ.ಪಂ‌. ಸದಸ್ಯ ಶೈಲೇಶ್ ಅಂಬೆಕಲ್ಲು, ರಮೇಶ್ ಪಡ್ಪು, ಪಿಡಿಓ ಗುರುಪ್ರಸಾದ್ ಉಪಸ್ಥಿತರಿದ್ದರು.

ಅರೆಬಾಸೆ ಪದ್ಯ ಕವನಗಳ ಗಮ್ಮತ್ – ಆನ್ಲೈನ್ ಸ್ಪರ್ಧಾ ಕಾರ್ಯಕ್ರಮ

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ಮತ್ತು ಕಲಾಮಾಯೆ ಏನೆಕಲ್ಲು ಪ್ರಸ್ತುತ ಪಡಿಸುವ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ನಲ್ಲಿ ನಡೆಯಲಿದೆ. ಕವಿಗಳಿಗೆ, ಕವನ ವಾಚಕರಿಗೆ ಉಚಿತ ಅವಕಾಶವಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರೆಬಾಸೆ ಘನತೆ ಗೌರವ ಹೆಚ್ಚಿಸುವಂತೆ ಹಾಗೂ ಅತೀ ಹೆಚ್ಚು ವ್ಹೀವ್ಸ್ ಪಡೆದವರಿಗೆ ಕಿರಣ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು...

ಬೇಸಿಗೆಯಲ್ಲಿ ಧೂಳುಮಯ – ಮಳೆಗೆ ಜನಪ್ರತಿನಿಧಿಗಳಿಂದ ಕೆಸರೆರೆಚಾಟ – ಇದು ಸೇವಾಜೆ ಮಡಪ್ಪಾಡಿ ರಸ್ತೆಯ ಅವ್ಯವಸ್ಥೆ

ಪ್ರತಿಷ್ಠಿತ ಗ್ರಾಮ ಮಡಪ್ಪಾಡಿ ಆದರೇ ರಸ್ತೆ ಬಗ್ಗೆ ಮಾತ್ರ ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ಸೇವಾಜೆಯಿಂದ ಮಡಪ್ಪಾಡಿಗೆ ಸಾಗುವ ರಸ್ತೆ ಕೆಲವೆ ವರ್ಷಗಳ ಹಿಂದೆ ಮರುಡಾಮರೀಕರಣ ನಡೆದಿದ್ದರೂ ಡಾಮರು ಕಿತ್ತು ಹೋಗಿ ರಸ್ತೆ ಮತ್ತೆ ಅಸ್ತವ್ಯಸ್ತವಾಗಿದೆ ಸೇವಾಜೆಯಿಂದ ಕಜೆವರೆಗಿನ ರಸ್ತೆ ಗುಂಡಿಗಳಿಗೆ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಈ ಮಣ್ಣು ಬೇಸಿಗೆ ಕಾಲವಿಡೀ...
Loading posts...

All posts loaded

No more posts

error: Content is protected !!