ಎಸ್.ಕೆ.ಡಿ.ಆರ್.ಡಿ.ಪಿ. ವತಿಯಿಂದ ಕೇರ್ಪಡ ಮಹಿಷ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 5 ಲಕ್ಷ ಧನಸಹಾಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೇರ್ಪಡ ಶ್ರೀಮಹಿಷ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುರಾದ 5,00,000 ಮೊತ್ತದ ಡಿಡಿ ಹಸ್ತಾಂತರ ಮಾಡಲಾಯಿತು.. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡುವ ಬೇರೆ ಬೇರೆ ಕಾರ್ಯಕ್ರಮಗಳಿಗೆ ನೀಡುವ ಅನುದಾನಗಳ ಬಗ್ಗೆ.. ಯೋಜನೆಯಿಂದ ಸದಸ್ಯರಿಗೆ...

ಬೆಳ್ಳಾರೆ : ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಗುವನ್ನು ಓದಿಸಿ ಹೆಣ್ಣು ಮಗುವನ್ನು ರಕ್ಷಿಸಿ ಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಅಂಗನವಾಡಿ ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಯೋಜನೆ ಅನುಷ್ಠಾನದಲ್ಲಿ ಮಹಿಳೆಯರು ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಫೆ. 24ರಂದು ನಡೆಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಶ್ರೀಮತಿ ಉಷಾ ಪ್ರಸಾದ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಸರ್ಕಾರದ...
Ad Widget

ಅರಂಬೂರು : ವ್ಯಕ್ತಿ ಆತ್ಮಹತ್ಯೆ

ಅರಂಬೂರು ನಿವಾಸಿ ವೆಂಕಟೇಶ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ವಿಷಯ ಗೊತ್ತಾಗಿ ತಕ್ಷಣ ಇವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟರೆನ್ನಲಾಗಿದೆ.

ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್‌ಕುಮಾರ್‌ ಬಾನಡ್ಕ ಆಯ್ಕೆ

ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿದೆ. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಬಾನಡ್ಕ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರುಗಳಾಗಿ ವಿನಯ್ ನೆಕ್ರಾಜೆ, ವಿಶ್ವನಾಥ ಪೂಜಾರಿಮನೆ, ಪ್ರಶಾಂತ್ ಕೋಡಿಬೈಲು, ಮಹೇಶ್ ಎನ್.ಕೆ. ನಾಳ, ಲಕ್ಷ್ಮೀ ಜಯರಾಮ ಗೌಡ ಸಂಕಡ್ಕ, ಕುಸುಮಾವತಿ ಪದ್ಮನಾಭ ಪರಮಲೆ...

ಆನೆಗುಂಡಿ : 33 ಕೆ.ವಿ.ವಿದ್ಯುತ್ ಲೈನ್ ಗೆ ಮರ ಬಿದ್ದು ವ್ಯತ್ಯಯ – ವಿದ್ಯುತ್ ವಿಳಂಬ ಸಾಧ್ಯತೆ

ಮಾಡವು ಸುಳ್ಯ 33/11 ವಿದ್ಯುತ್ ಲೈನ್ ಗೆ ಆನೆಗುಂಡಿ ಬಳಿ ಮರ ಬಿದ್ದು ವಿದ್ಯುತ್ ಲೈನ್ ಗೆ ಹಾನಿಯಾದ ಘಟನೆ ಇಂದುಮಧ್ಯಾಹ್ಮ ನಡೆದಿದೆ. ಬೈನೆ ಮರವನ್ನು ಆನೆ ಬೀಳಿಸಿದ್ದರಿಂದ ‌ಲೈನ್ ಗೆ ಹಾನಿಯಾಗಿದೆ ಎನ್ನಲಾಗಿದೆ.

ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಂದ ಜಾಗೃತಿ ಕಾರ್ಯ – ಮಹಾಶಿವರಾತ್ರಿ ಪಾದಯಾತ್ರಿಗಳಿಗೆ ಪೂರಕ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ

ಸುಬ್ರಹ್ಮಣ್ಯ: ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಧರ್ಮಸ್ಥಳಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಸ್ಲೆ ಘಾಟ್ - ಮರ್ಧಾಳ ಮೂಲಕ ಪಾದಯಾತ್ರೆ ಕೈಗೊಂಡಿರುವ ಪಾದಯಾತ್ರಿಗಳಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸ್ವಚ್ಚತೆ ಹಾಗೂ ಪೂರಕ ವ್ಯವಸ್ಥೆ ಮೂಲಕ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ.ಬಿಸ್ಲೆ ಘಾಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪಾದಯಾತ್ರಿಗಳು ಸುಬ್ರಹ್ಮಣ್ಯದ ಕುಲ್ಕುಂದ - ಕೈಕಂಬ ಮೂಲಕ...

ಬೆಳ್ಳಾರೆ : ಅಂಗನವಾಡಿ ಕೇಂದ್ರದಲ್ಲಿ ಚಿಣ್ಣರ ಹಬ್ಬ

ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಸಂಸ್ಥೆಯ ದಶ ಸಂಭ್ರಮಾಚರಣೆಯ, ದಶ ಕಾರ್ಯಕ್ರಮಗಳ ಅಂಗವಾಗಿ ಚಿಣ್ಣರ ಹಬ್ಬ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಫೆ. 24ರಂದು ನಡೆಯಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಉದ್ಘಾಟಿಸಿ ಮಾತನಾಡಿ ಪುಟಾಣಿಗಳ ಮನಸ್ಸನ್ನು ಅರಳಿಸುವುದೇ ಚಿಣ್ಣರ ಹಬ್ಬ ಕಾರ್ಯಕ್ರಮ ಮುಖ್ಯ ಆಶಯ ವಾಗಲಿ ಎಂದರು. ಕರ್ನಾಟಕ...

ಅರಂಬೂರು (ಆಲೆಟ್ಟಿ ಗ್ರಾಮ ಕುದ್ಕುಳಿ) ಮನೆತನದ ದೈವಸ್ಥಾನದಲ್ಲಿ ಶ್ರೀ ದೈವಗಳ ನಡಾವಳಿ ನೇಮೋತ್ಸವ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿರುವ ಅರಂಬೂರು ಮನೆತನದ ಕುದ್ಕುಳಿ ಎಂಬಲ್ಲಿ ಶ್ರೀ ವಿಷ್ಣುಮೂರ್ತಿ ಶ್ರೀ ಧರ್ಮದೈವ ಹಾಗೂ ಶ್ರೀ ಕುಕ್ಕೆತ್ತಿಬಲ್ಲು ಸಪರಿವಾರ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ, ಶ್ರೀ ರುದ್ರ ಚಾಮುಂಡಿ, ಕುಕ್ಕೆತ್ತಿ ಬಲ್ಲು ಹಾಗೂ ಉಪದೈವಗಳ ನಡಾವಳಿ ನೇಮೋತ್ಸವ ಫೆ.22 ಹಾಗೂ 23 ರಂದು ನಡೆಯಿತು. ಫೆ.22 ರಂದು ಬೆಳಿಗ್ಗೆ ಚಾವಡಿಯಲ್ಲಿ ಶ್ರೀ ವೆಂಕಟೇಶ ಶಾಸ್ತ್ರೀ...

ಸುಳ್ಯ ನಗರಕ್ಕೆ ಯೋಜನಾ ಪ್ರಾಧಿಕಾರ ರಚಿಸಿ ಸರಕಾರದ ಆದೇಶ

ಸುಳ್ಯ ಪಟ್ಟಣಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. 2011 ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿಯಲ್ಲಿ ಸುಳ್ಯ ಪಟ್ಟಣ ಪಂಚಾಯತ್‌ ವ್ಯಾಪ್ತಿಯನ್ನು ಸ್ಥಳೀಯ ಯೋಜನಾ ಪ್ರದೇಶವನ್ನಾಗಿ ಘೋಷಿಸಿ ಸುಳ್ಯ ಪಟ್ಟಣ ಪಂಚಾಯತ್ ಯೋಜನಾ ಪ್ರಾಧಿಕಾರ ಎಂದು ಆದೇಶಿಸಲಾಗಿತ್ತು. ಅದರಂತೆ ಇದನ್ನು ಇದೀಗ ಪ್ರತ್ಯೇಕ ಯೋಜನಾ...

ಕಲ್ಲುಗುಂಡಿ : ಕಾಫಿ ಬೆಳೆಯ ಬಗ್ಗೆ ಮಾಹಿತಿ ಕಾರ್ಯಗಾರ

ಸುಳ್ಯ ರೈತ ಉತ್ಪಾದಕರ ಕಂಪನಿ ವತಿಯಿಂದ ಕಾಫಿ ಮಂಡಳಿ ಕೊಡಗು ತೋಟಗಾರಿಕೆ ಇಲಾಖೆ ಸುಳ್ಯ ಗ್ರಾಮ ಪಂಚಾಯತ್ ಸಂಪಾಜೆ ದ. ಕ .ಜಂಟಿ ಆಶ್ರಯದಲ್ಲಿ ಕಾಫಿ ಬೆಳೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಮಾಜಿ ಅಧ್ಯಕ್ಷರಾದ ಜಗದೀಶ್ ಕೆ....
Loading posts...

All posts loaded

No more posts

error: Content is protected !!