ಯೇನೆಕಲ್ಲು : ಅಖಂಡ ಭಾರತ ಸಂಕಲ್ಪ ದಿನ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮಾಡಲಾಯಿತು.ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಮಾತಾಡಿದರು. ನಂತರ ದೇಶ ಸೇವೆ ಮಾಡಿದ...

ಅಮರ ಸ್ವಾತಂತ್ರ್ಯ ಹೋರಾಟದ ಸ್ಮಾರಕ ನಿರ್ಮಿಸಲು ಕಟಿಬದ್ಧ: ಸಚಿವ ಅಂಗಾರ

ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಅದೆಷ್ಟೋ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಈ ಜಿಲ್ಲೆಗೆ 13 ದಿನಗಳ ಸ್ವಾತಂತ್ರ್ಯದ ಸವಿಯನ್ನು ನೀಡಿದ ಕೀರ್ತಿ ನಮ್ಮ ಸುಳ್ಯದ ಹಿರಿಯರಿಗೆ ಸಲ್ಲುತ್ತದೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಅವರ ತ್ಯಾಗ, ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವುದಕ್ಕಾಗಿ ಬೆಳ್ಳಾರೆಯಲ್ಲಿ ಮತ್ತು ಉಬರಡ್ಕದ ಕೆದಂಬಾಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಸ್ಮಾರಕಗಳನ್ನು ನಿರ್ಮಿಸಲು ಕಟಿಬದ್ಧನಾಗಿದ್ದೇನೆ...
Ad Widget

ಪ್ರಬಂಧ ಸ್ಪರ್ಧೆ: ಕು|ಸಂಜನಾ.ಬಿ.ಎಸ್ ಪ್ರಥಮ ಸ್ಥಾನ

2021 ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕು|ಸಂಜನಾ.ಬಿ.ಎಸ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಸುಳ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಂಜೀವ ಗೌಡ.ಬಿ ಹಾಗೂ ಶಿಕ್ಷಕಿ ಶ್ರೀಮತಿ ನಿರ್ಮಲಾರವರ ಪುತ್ರಿ.

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳಿಗೆ ಸೂಚಿಸಿದಂತೆ ಸರ್ವೇ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ಶೀಘ್ರವಾಗಿ ನಡೆಸಬೇಕು ಹಾಗೂ ಕಡಬ ತಾಲೂಕಿನ ಅಕ್ರಮ ಸಕ್ರಮ ಕಡತಗಳನ್ನು...

ಎನ್ ಎಂ ಸಿ: ಯುವ ರೆಡ್ ಕ್ರಾಸ್ ಘಟಕದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತರಕ್ತದಾನ ಶಿಬಿರವು 15- 8-- 2021ರಂದು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ ಇಲ್ಲಿಯ ರಕ್ತನಿಧಿ ಕೇಂದ್ರದಲ್ಲಿ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ)...

ಕಳಂಜ: ಅಸಮರ್ಪಕ ರಸ್ತೆ – ನಡೆದುಕೊಂಡು ಹೋಗಿ ಕೋವಿಡ್ ಪರೀಕ್ಷೆ ನಡೆಸಿದ ಆರೋಗ್ಯ ಕಾರ್ಯಕರ್ತರು

ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕಳಂಜ ಗ್ರಾಮದ ತಂಟೆಪ್ಪಾಡಿ-ನಾಲ್ಗುತ್ತು ಭಾಗಕ್ಕೆ ಕೋವಿಡ್ ಪರೀಕ್ಷೆಗೆ ತೆರಳಿದ್ದು ತಂಟೆಪ್ಪಾಡಿ-ನಾಲ್ಗುತ್ತು ರಸ್ತೆ ತೀರಾ ಹದಗೆಟ್ಟ ಕಾರಣ ವಾಹನ ಹೋಗದೆ ಸ್ವಾಬ್ ಪರೀಕ್ಷೆಗೆ ನಡೆದುಕೊಂಡು ಹೋಗುವಂತಾಯಿತು. ಈ ರಸ್ತೆಯ ದುಸ್ಥಿತಿಯಿಂದ ಈ ಭಾಗದ ಜನರು ಹಲವಾರು ವರ್ಷಗಳಿಂದ ಇದೇ ಗೋಳು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರಾದ ಲೋಕೇಶ್ ತಂಟೆಪ್ಪಾಡಿಯವರು...

ದಬ್ಬಡ್ಕ : ಅಕ್ರಮ ಮರ ಕಡಿದ ಪ್ರಕರಣ – ಮೂವರ ಬಂಧನ

ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ದಬ್ಬಡ್ಕ ಶಾಖಾ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಎರಡು ಬೃಹತ್ ಗಾತ್ರದ ಬೂರುಗು ಹಾಗೂ ಹುಲುವೆ ಮರಗಳನ್ನು ಕಡಿಯಲು ಪ್ರಯತ್ನಿಸಿದ್ದು ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸಂಪಾಜೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ದಬ್ಬಡ್ಕ ನಿವಾಸಿಗಳಾದ ಹೆಚ್ ಹೇಮಾಧರ, ಪ್ರದೀಪ್.ಕೆ.ವಿ, ಹರಿಕೃಷ್ಣ.ಡಿ.ಆರ್. ಇವರುಗಳನ್ನು ಬಂಧಿಸಿ ನ್ಯಾಯಾಂಗ...

ಅರಂತೋಡು : ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಸಂಸ್ಥೆಯಲ್ಲಿ 2020_2021ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕು. ಫಮೀದಾ 547 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಇವಳು ಅರಂತೋಡು ಗ್ರಾಮದ ಉದಯನಗರ ನಿವೃತ್ತ ಸೈನಿಕ ಫಸೀಲು ಮತ್ತು ನೇಬಿಸಾ ಕನ್ಯಾನ ರವರ ಪುತ್ರಿ.

ನಾಗರ ಪಂಚಮಿ

ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ.ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು...

ದೃಷ್ಟಿ ಕಳೆದುಕೊಂಡ ಮಧುಸೂದನ್ ದಂಡೆಕಜೆ ಚಿಕಿತ್ಸೆಗೆ ನೆರವಾಗಲು ಮನವಿ

ಸಂಪಾಜೆ ಗ್ರಾಮದ ದಂಡೆಕಜೆ ನಿವಾಸಿ ಮಧುಸೂದನ್ ಕೂಲಿ ಕಾರ್ಮಿಕರಾಗಿದ್ದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಈಗಾಗಲೇ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುತ್ತಾರೆ ಮನೆಯವರಿಗೆ ಇವರೇ ಆಧಾರ ಸ್ತಂಭವಾಗಿರುತ್ತಾರೆ ಈಗ ಇವರಿಗೆ ಕಣ್ಣಿನ ದಾನಿಗಳು ಸಿಕ್ಕಿರುತ್ತಾರೆ.ಆಗಸ್ಟ್ 14 ಶನಿವಾರದಂದು ಚಿಕಿತ್ಸೆ ನಡೆಯಲಿದ್ದು ಚಿಕಿತ್ಸಾ ವೆಚ್ಚ 2 ಲಕ್ಷ ರೂಗಳ ತುರ್ತು ಅವಶ್ಯಕತೆ ಇರುತ್ತದೆ. ಬಡತನದಲ್ಲಿರುವ ಅವರಿಗೆ ಸಹೃದಯ ದಾನಿಗಳು...
Loading posts...

All posts loaded

No more posts

error: Content is protected !!