ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಚಂದ್ರಾಕ್ಷಿ ಜೆ ರೈ ಆಯ್ಕೆ

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ ರೈ ಯವರು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷೆಯಾಗಿ ಶ್ರೀಮತಿ ಹರಿಣಿ ಸದಾಶಿವ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಳ್ಯ ತಾಲೂಕಿನಿಂದ ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಶ್ರೀಮತಿ ಹರ್ಷಾ ಕರುಣಾಕರ, ಶ್ರೀಮತಿ ತ್ರಿವೇಣಿ ದಾಮ್ಲೆ ಮತ್ತು ಶ್ರೀಮತಿ ಸುಮನಾ ಕ್ರಪಾಶಂಕರ್ ಆಯ್ಕೆಯಾಗಿರುತ್ತಾರೆ.

ಸ್ನೇಹ ಶಾಲೆಯಲ್ಲಿ ಸಾಧಕರಿಗೆ ಸನ್ಮಾನ

ಸ್ನೇಹ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.16 ರಂದು ನಡೆಯಿತು. 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 14 ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ತುಷಾರ್ ಡಿ.ಕೆ, ಶಿವಶರಣ ಹೊಳ್ಳ ಎನ್,...
Ad Widget

ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದು ಸಂಘಟನೆಗಳಿಂದ ನಾಳೆ ಠಾಣೆಯ ಎದುರು ಪ್ರತಿಭಟನೆ

ಕಬಕದಲ್ಲಿ ಸ್ವಾತಂತ್ರ್ಯ ದಿನ ರಥಯಾತ್ರೆಯನ್ನು ತಡೆದು ನಿಲ್ಲಿಸಿ ಬಂಧಿತರಾಗಿರುವ ಎಸ್ ಡಿ ಪಿ ಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಕೇಸು ದಾಖಲಿಸಿವಂತೆ ಹಾಗೂ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆಯ ವತಿಯಿಂದ ಪ್ರತಿಭಟನೆ ಹಾಗೂ ಮನವಿ...

ನಾರ್ಣಕಜೆ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

ನೆಲ್ಲೂರುಕೆಮಾಜೆ ಯುವಕ ಮಂಡಲದ ಸದಸ್ಯರು ಹಾಗೂ ಪಂಚಾಯತ್ ಸದಸ್ಯ ರಿಂದ ನಾರ್ಣಕಜೆ,ಜಬಳೆ ಪರಿಸರದ ರಸ್ತೆ ಬದಿಯಲ್ಲಿ ಸ್ವಚ್ಚತೆ ಹಾಗೂ ಕಾಡು ಕಡಿಯುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಯಪ್ರಸಾದ್ ಸುಳ್ಳಿ, ದೇವಿಪ್ರಸಾದ್ ಸುಳ್ಳಿ, ರಾಮಚಂದ್ರ ಪ್ರಭು, ಹರೀಶ್ ಸುಳ್ಳಿ, ತೇಜಕುಮಾರ್ ನಾರ್ಣಕಜೆ, ಚಂದ್ರಶೇಖರ ನಾರ್ಣಕಜೆ, ಜಯಮಣಿಕಂಠ ನಾರ್ಣಕಜೆ, ರಾಮಚಂದ್ರ ನಾರ್ಣಕಜೆ, ನಿರ್ದೇಶ್ ಸುಳ್ಳಿ,...

ಐವರ್ನಾಡು : ಯು.ಡಿ.ಶೇಖರ್ ಗೆ ಸನ್ಮಾನ – ನೂತನ ಪಿ.ಡಿ.ಒ.ಶ್ಯಾಮ್ ಪ್ರಸಾದ್ ಗೆ ಸ್ವಾಗತ

ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯು.ಡಿ.ಶೇಖರ್ ರವರಿಗೆ ಸನ್ಮಾನ ಕಾರ್ಯಕ್ರಮವು ಆ.16 ರಂದು ಐವರ್ನಾಡು ಗ್ರಾಮ ವಿಕಾಸ ಸಭಾ ಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಯು.ಡಿ.ಶೇಖರ್...

ಕಟ್ಟ :- ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಆ.14 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋವಿಂದನಗರ ಹಾಗೂ ಅಂಗನವಾಡಿ ಕೇಂದ್ರ ಗೋವಿಂದನಗರ ಕಟ್ಟ ಇಲ್ಲಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಅಂಗನವಾಡಿ ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ಸಹಕಾರದಿಂದ ಶಾಲಾ ಸ್ವಚ್ಚತಾ ಕಾರ್ಯ ನಡೆಯಿತು. ಸ್ವಚ್ಚತಾ ಕಾರ್ಯಕ್ರಮದ ಜೊತೆಗೆ...

ನಾಳೆ ಹಿಂದು ಜಾಗರಣ ವೇದಿಕೆಯ ವತಿಯಿಂದ ಜನಾಂದೋಲನ ಸಭೆ

ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆ ಮತ್ತು ಹಿಂದು ಯುವತಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಅವರನ್ನು ಭಯೋತ್ಪಾದನಾ ಚಟುವಟಿಕೆಗೆ ಬಳಸುವ ಭಯೋತ್ಪಾದಕರ ಷಡ್ಯಂತ್ರದ ವಿರುದ್ಧ ಮತ್ತು ಮಂಗಳೂರಿನಲ್ಲಿ ಎನ್ ಐ ಎ ಕಛೇರಿ ತೆರೆದು ಭಯೋತ್ಪಾದನಾ ಚಟುವಟಿಕೆಯನ್ನು ನಿಯಂತ್ರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯ ವತಿಯಿಂದ ಆ.17 ರಂದು ಬೆಳಗ್ಗೆ 11...

ಸ್ವತಂತ್ರ ಭಾರತದ ಎಪ್ಪತ್ತೈದು ವರ್ಷಗಳ ಸಾಧನೆ ಶ್ಲಾಘನೀಯ : ಡಾ. ಕೆ ವಿ ಚಿದಾನಂದ

ಭಾರತ ಸ್ವತಂತ್ರಗೊಂಡು ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಈ ದಿನದಲ್ಲಿ ಭಾರತದ ಇದುವರೆಗಿನ ಸಾಧನೆ ಅಪಾರ. ಶೈಕ್ಷಣಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ರಕ್ಷಣಾ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರ ಹೀಗೆ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಮುಂದಿನ ದಿನಗಳಲ್ಲಿ ಯುವಜನತೆ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ದೇಶವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು...

ಎನ್ನೆಂಸಿ: ರಕ್ತದಾನ ಶಿಬಿರದ ಮೂಲಕ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ

ರಕ್ತದಾನ ಜೀವ ಉಳಿಸುವುದರ ಜೊತೆಗೆ ರಕ್ತದಾನಿಗಳ ಆರೋಗ್ಯವನ್ನು ಕಾಪಾಡುತ್ತದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಅವಿಸ್ಮರಣೀಯವಾಗಿದೆಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ...

ಇಂದಿನಿಂದ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನ

ಅರೋಗ್ಯ ಇಲಾಖೆಯಿಂದ ಜನವರಿ 2021ರಿಂದ ಜೂನ್ 2021ರ ವರೆಗೆ ಕೋವಿಡ್ ಪಾಸಿಟಿವ್ ಬಂದು ಕೋವಿಡ್ ಗುಣಮುಖರಾದ ಜನರಿಗೆ ಮತ್ತು ಮನೆಯ ಸದಸ್ಯರಿಗೆ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನವನ್ನು ಆ.16 ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದ್ದು ಇಲಾಖೆಯ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತರು ಜನವರಿ 2021 ರಿಂದ ಜೂನ್ 2021 ರವರೆಗೆ ಕೋವಿಡ್ ಪಾಸಿಟಿವ್...
Loading posts...

All posts loaded

No more posts

error: Content is protected !!