ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಕುಂಕುಂ ಫ್ಯಾಷನ್ ನಲ್ಲಿ ಬಹುಮಾನ ವಿತರಣೆ

ಅಮರ ಸುಳ್ಯ ಸುದ್ದಿ ವಾರಪತ್ರಿಕೆ 5 ನೇ ಬಾರಿಗೆ ಹೊರತಂದ ದೀಪಾವಳಿ ವಿಶೇಷಾಂಕದಲ್ಲಿ ಮುದ್ದು ಕಂದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅದ್ವಿಕ್ ಗೆ ಕುಂಕಂ ಫ್ಯಾಷನ್ ಮಾಲಕರಾದ ಭೀಮಾ ಪಟೇಲ್ ಹಾಗೂ ಧನು ಪಟೇಲ್ ನ.17ರಂದು ಬಹುಮಾನ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೋಷಕರಾದ ಶ್ರೀಮತಿ ಹವ್ಯಾ, ವಿಜಯಕುಮಾರ್ ಪಾಲಾರ್ ಗುಂಡ್ಯ,...

ಹರಿಹರ ಪಲ್ಲತಡ್ಕ :ಶಾಲೆಯಲ್ಲಿ ಇಂದು ಸಹ ಶೂನ್ಯ ಹಾಜರಾತಿ

ಹರಿಹರ ಪಲ್ಲತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ನಡೆಸುತ್ತಿಲ್ಲ, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ತಾವೇ ಶಾಲೆಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ(ನ.16) ನಡೆದಿದ್ದು, ಇಂದು(ನ.17) ವಿದ್ಯಾರ್ಥಿಗಳು ಶಾಲೆಗೆ ಬಾರದೆ ಶೂನ್ಯ ಹಾಜರಾತಿ ಆಗಿದೆ. ನಿನ್ನೆ ದಿನ ಕ್ಷೇತ್ರ ಶಿಕ್ಷಣಾಧಿಕಾರಿ...
Ad Widget

ಬಾಳಿಲ: ವಿದ್ಯಾರ್ಥಿ ಸರಕಾರದ ಪದಗ್ರಹಣ ಕಾರ್ಯಕ್ರಮ

ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ 2021 --22ನೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ನಡೆಯಿತು. ವಿದ್ಯಾರ್ಥಿ ಸರಕಾರದ ರಾಜ್ಯಪಾಲರಾದ ಶಾಲೆಯ ಮುಖ್ಯೋಪಾಧ್ಯಾಯರು ಸಮಾರಂಭದಲ್ಲಿ ಭಾಗವಹಿಸಿ ಸಭಾಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಂಪುಟ ದರ್ಜೆಯ ಸಚಿವರುಗಳಿಗೆ ಶಾಲಾ ಸಂವಿಧಾನದಂತೆ ಸಂಸ್ಕೃತ , ಕನ್ನಡ ,ಇಂಗ್ಲಿಷ್ ,ಹಿಂದಿ ,ತುಳು ಭಾಷೆಗಳಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ರಾಜ್ಯಪಾಲರ ನೆಲೆಯಿಂದ...

ನ.18 ರಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ನಾಮಪತ್ರ ಸಲ್ಲಿಕೆ

ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದಕ್ಷಿಣ ಕನ್ನಡ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಯ ನಿರ್ದೇಶಕ ಸ್ಥಾನಕ್ಕೆ ನ.18 ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಡಿಸೆಂಬರ್ 12ರಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಕಳಂಜ: ತಂಟೆಪ್ಪಾಡಿ ಶಾಲೆಗೆ ಹೊಸ ಅತಿಥಿ ಶಿಕ್ಷಕರನ್ನು ನೇಮಕಗೊಳಿಸುವಂತೆ ಶಿಕ್ಷಣ ಇಲಾಖೆಗೆ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿಯವರಿಂದ ಒತ್ತಾಯ

ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿಯಲ್ಲಿ ಈ ಹಿಂದೆ ಅತಿಥಿ ಶಿಕ್ಷಕಿಯಾಗಿದ್ದ ನಿರ್ಮಲಾರನ್ನು ಮರುನೇಮಕ ಮಾಡದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಗ್ರಾಮ ಪಂಚಾಯತಿನಿಂದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅಲ್ಲದೇ ಎಲ್ಲಾ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸ್ವತಃ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ತಮ್ಮ...

ಬಳ್ಪ : ಕೊನ್ನಡ್ಕ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶಾಶ್ವತ ಚಪ್ಪರದ ನಿರ್ಮಾಣದ ಮನವಿ ಪತ್ರ ಬಿಡುಗಡೆ

ಬಳ್ಪ ಗ್ರಾಮದ ಕೊನ್ನಡ್ಕ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಹೊರಾಂಗಣದ ಶಾಶ್ವತ ಚಪ್ಪರ ನಿರ್ಮಾಣದ ಬಗೆಗಿನ ಸಾರ್ವಜನಿಕ ಮನವಿ ಬಿಡುಗಡೆ ಕಾರ್ಯಕ್ರಮ ನ.16 ರಂದು ನಡೆಯಿತು. ಈ ಮನವಿ ಪತ್ರವನ್ನು ಪ್ರಗತಿಪರ ಕೃಷಿಕರು ಹಾಗು ಕೊಡುಗೈ ದಾನಿ ಲಿಂಗಪ್ಪ ರೈ ಅರ್ಗುಡಿ ಬಿಡುಗಡೆಗೊಳಿಸಿ ರೂ.10,000 ಧನಸಹಾಯ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ...

ಗುತ್ತಿಗಾರು : ಪರ್ಸ್ ಕಳೆದುಹೋಗಿದೆ

ಗುತ್ತಿಗಾರಿನ ಕಂದ್ರಪ್ಪಾಡಿ ಕ್ರಾಸ್ ಬಳಿ ನ.14 ರಂದು ರಾತ್ರಿ ಅಮೂಲ್ಯ ದಾಖಲೆಗಳಿರುವ ಪರ್ಸ್ ಕಳೆದುಹೋಗಿದೆ. ಅದರಲ್ಲಿ ಹಣ ಹಾಗೂ ಅಮೂಲ್ಯ ದಾಖಲೆಗಳಿದ್ದು ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಬೇಕಾಗಿ ಗುರುಪ್ರಸಾದ್ ಪೂಜಾರಿಕೋಡಿ (99728 62725) ವಿನಂತಿಸಿದ್ದಾರೆ.

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಪುತ್ತೂರು ಸಹಾಯ ಆಯುಕ್ತರಾದ ಯತೀಶ್ ಉಳ್ಳಾಲ್ ಅವರ ಅದ್ಯಕ್ಷತೆಯಲ್ಲಿ ನ.15 ರಂದು ನಡೆಯಿತು.ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ ಹಾಗೂ ವ್ಯವಸ್ಥಾಪನಾ ಸಮಿತಿಯ...

ಪೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್.

ದ.ಕ.ಜಿಲ್ಲಾ ಪೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್. ಇಂದು ನಡೆದ ಜಿಲ್ಲಾ ಸಭೆಯಲ್ಲಿ ಆಯ್ಕೆಯಾದರು. ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಾಂತಲಾ ಸ್ಟುಡಿಯೋ ನಡೆಸುತ್ತಿದ್ದಾರೆ. ಇವರು ಸುಬ್ರಮಣ್ಯ ರೋಟರಿ, ಜೇಸಿಐ, ಹಳೆವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. (ವರದಿ : ಶ್ರೀದೇವಿ ವಿ ಹೆಗ್ಡೆ)

ಶುಭವಿವಾಹ : ಸುಮಿತ್ರಾ – ಯೋಗೀಶ್

ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಗಡಿಕಲ್ಲು ಶ್ರೀ ಕೃಷ್ಣ ನಾಯ್ಕ ಅವರ ಪುತ್ರಿ ಸುಮಿತ್ರಾ ರವರ ವಿವಾಹವು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿಯ ದಿ. ಕೊರಗಪ್ಪ ನಾಯ್ಕರ ಪ್ರಥಮ ಪುತ್ರ ಯೋಗೀಶ್ ರವರೊಂದಿಗೆ ನ.11 ರಂದು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು ಇಲ್ಲಿ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
Loading posts...

All posts loaded

No more posts

error: Content is protected !!