ಕುಲ್ಕುಂದ :- ಬಸವನಮೂಲೆ ಬಸವೇಶ್ವರ ದೇವಸ್ಥಾನದಲ್ಲಿ ಗೋಪೂಜೆ

ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಐತಿಹಾಸಿಕ ಕುಲ್ಕುಂದದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ನ.19ರ ಶುಕ್ರವಾರದಂದು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಗೋವುಗಳಿಗೆ ಪುಷ್ಪಾಲಂಕಾರ ಮಾಡಿ ಕರೆತರಲಾಯಿತು. ಬಳಿಕ ಈ ಮೊದಲು ಶ್ರೀ ಬಸವೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ...

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ ಹಾಗೂ ನೂತನ ಲಾಲ್ಕಿಯಲ್ಲಿ ಶ್ರೀ ದೇವರ ಮೆರವಣಿಗೆ

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯುತ್ತಿದ್ದು ಇಂದು ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ ನಡೆಯಿತು. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವರ ಪೂಜೆ ನಡೆದು ಬಳಿಕ ಅಚಲಾಪುರ ಕಟ್ಟೆಯವರೆಗೆ ದೇವಸ್ಥಾನದ ವತಿಯಿಂದ ನಿರ್ಮಿಸಲಾದ ನೂತನ ಲಾಲ್ಕಿಯಲ್ಲಿ ಶ್ರೀ ದೇವರ ವೈಭವದ ಉತ್ಸವ ಮೆರವಣಿಗೆ ನಡೆಯಿತು. ಬಳಿಕ ಅಚಲಾಪುರ ಕಟ್ಟೆಯಲ್ಲಿ...
Ad Widget

ದ. ಕ. ಸಂಪಾಜೆ ಸಹಕಾರಿ ಸಂಘದಲ್ಲಿ ಜಿಲ್ಲಾಮಟ್ಟದ 68ನೇ ಅಖಿಲ ಭಾರತ ಸಹಕಾರ ಸಪ್ತಾಹ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ನಿ. ಮಂಗಳೂರು, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಹಾಗೂ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸಂಪಾಜೆ, ಸುಳ್ಯ ತಾಲೂಕು ದ. ಕ. ಇವುಗಳ...

ಇಂದು ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯುತ್ತಿದ್ದು ಇಂದು ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ, ರಾತ್ರಿ ನಂತರ ಲಾಲ್ಕಿಯಲ್ಲಿ ಉತ್ಸವ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ತಿಳಿಸಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ: ವಾರ್ಷಿಕ ಮಹಾಸಭೆ, ಪುನರ್ಚೇತನ ಶಿಬಿರ ಹಾಗೂ ಅಭಿನಂದನಾ ಕಾರ್ಯಕ್ರಮ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇದರ ವಾರ್ಷಿಕ ಮಹಾಸಭೆಯು ನ.12ರಂದು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಂ.ಜೆ ಇವರ ಅಧ್ಯಕ್ಷತೆಯಲ್ಲಿ ಸ್ಕೌಟ್ಸ್ ಭವನ ಸುಳ್ಯ ಇಲ್ಲಿ ನಡೆಯಿತು.ಸಭೆಯಲ್ಲಿ ಕಳೆದ ವರ್ಷದ ವರದಿಯನ್ನು ಕಾರ್ಯದರ್ಶಿ ಶ್ರೀ ಲಿಂಗಪ್ಪ ಬೆಳ್ಳಾರೆ ವಾಚಿಸಿದರು. ವಾರ್ಷಿಕ ಹಣಕಾಸಿನ ಆಯವ್ಯಯವನ್ನು ಖಜಾಂಜಿ ಶ್ರೀಮತಿ ರೇವತಿ.ಕೆ ಮಂಡಿಸಿ ಅನುಮೋದನೆ...

ಕೂತ್ಕುಂಜ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣಾ ಕಾರ್ಯಕ್ರಮ

ಜೇಸಿಐ ಪಂಜ ಪಂಚಶ್ರೀ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂತ್ಕುಂಜ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನ.17ರಂದು ಕೂತ್ಕುಂಜ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ...

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದಿಂದ ಧನಸಹಾಯ ವಿತರಣೆ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದಿಂದ ಈ ವರ್ಷ ಸಮಾಜ ಸೇವಾ ಯೋಜನೆಯಡಿ ನೀಡುವ 1 ಲಕ್ಷ ರೂ. ಧನಸಹಾಯವನ್ನು ಕಲ್ಲುಮುಟ್ಲು ನಿವಾಸಿ ಜಯರಾಮನ್ ನಾಯರ್ ಅವರಿಗೆ ಮನೆ ಕಟ್ಟಲು ನೀಡುವುದೆಂದು ತೀರ್ಮಾನಿಸಲಾಗಿತ್ತು. ಅದರಂತೆ ನ.17 ರಂದು ಮಂಜೂರಾತಿ ಪತ್ರ ಮತ್ತು ಪ್ರಥಮ ಕಂತು ರೂ 50,000 ವನ್ನು ಅವರಿಗೆ ಸುಳ್ಯ ಹಬ್ಬ ಸಮಿತಿ...

ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದಿಂದ ಸಕಲೇಶಪುರದಲ್ಲಿ ಚೆಂಡೆ ಪ್ರದರ್ಶನ

ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಾಕ ಕಲಾವಿದರ ತಂಡವುಸಕಲೇಶಪುರದ ಮರೆನಹಳ್ಳಿಯ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಶ್ರೀ ಮರವ್ವ ಜಾತ್ರೆಯಲ್ಲಿ ಭಾಗವಹಿಸಿದ್ದು, ಚೆಂಡೆ ಪ್ರದರ್ಶನ ನೀಡಿದೆ. ಕಡಬ ತಾಲೂಕಿನ ಚಾರ್ವಾಕದ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳವು 2 ದಿನಗಳಿಂದ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ಮೇಳದ ವ್ಯವಸ್ಥಾಪಕ ಕಾರ್ಯದರ್ಶಿ ಶಿವಪ್ರಸಾದ್ ಜಿ., ಅಧ್ಯಕ್ಷರಾದ...

ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ಪೂದೆ ಶ್ರೀ ವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ ಕುಣಿತ ಭಜನಾ ಸೇವೆ

ಪೂದೆ ಶ್ರೀ ವಿಷ್ಣು ಮಹಾಗಣಪತಿ ದೇವಸ್ಥಾನ ಮುರುಳ್ಯ ಇಲ್ಲಿ ಇಂದು ನಡೆದ ನಿಧಿ ಕುಂಭ ಶಢಾದರ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ವಿದ್ಯಾರ್ಥಿಗಳು ಕುಣಿತ ಭಜನೆ ಸೇವೆ ನಡೆಸಿಕೊಟ್ಟರು. ತಂಡವನ್ನು ಶಿಕ್ಷಕ ಶಿವಪ್ರಸಾದ್.ಜಿ ಹಾಗೂ ಭಜನಾ ತರಬೇತುದಾರ ಸದಾನಂದ ಆಚಾರ್ಯ ಕಾಣಿಯೂರು ಇವರು ನಿರ್ದೇಶಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ.ವೈ.ಬಿ,...

ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಸ್ಪರ್ಧೆಯ ಬಹುಮಾನ ದೀಕ್ಷಾ ಟ್ರೇಡರ್ಸ್ ನಲ್ಲಿ ವಿತರಣೆ

ಅಮರ ಸುಳ್ಯ ಸುದ್ದಿ ವಾರಪತ್ರಿಕೆ 5 ನೇ ಬಾರಿಗೆ ಹೊರತಂದ ದೀಪಾವಳಿ ವಿಶೇಷಾಂಕದಲ್ಲಿ ಮುದ್ದು ಕಂದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಿಧೀಶ್ ಕುದ್ಪಾಜೆಗೆ ದೀಕ್ಷಾ ಡ್ರೇಡರ್ಸ್ ಮಾಲಕರಾದ ಮಾಧವ ರಾವ್ ಕೆ. ಬಹುಮಾನ ವಿತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪೋಷಕರಾದ ಶ್ರೀಮತಿ ಮಮತಾ ಬ್ರಿಜೇಶ್, ಬ್ರಿಜೇಶ್ ಕುದ್ಪಾಜೆ ಹಾಗೂ ಪತ್ರಿಕಾ...
Loading posts...

All posts loaded

No more posts

error: Content is protected !!