- Monday
- May 4th, 2026
ಪೆರುವಾಜೆ ಗ್ರಾಮದ ಮಠತ್ತಡ್ಕ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲದ ಪೂರ್ವಭಾವಿಯಾಗಿ ನ.27ರಂದು ಕೊಳ್ಳಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರಾದ ನರಹರಿ ಭಟ್ ಮಠತ್ತಡ್ಕ ಹಾಗೂ ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ಜನಪದ ಕ್ಷೇತ್ರಗಳಲ್ಲಿ ಸೇವೆ ಮಾಡುವ ದೃಷ್ಟಿಯನ್ನಿಟ್ಟು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಎಂಬ ಟ್ರಸ್ಟ್ ಒಂದು ನೋಂದಾವಣೆಗೊಂಡಿದೆ. ಇದರ ಸಭೆಯು ಇತ್ತೀಚೆಗೆ ಕಡ್ಲಾರುವಿನಲ್ಲಿ ನಡೆಯಿತು. ಈ ಸಭೆಯಲ್ಲಿ ಟ್ರಸ್ಟಿನ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಮುಂದುವರಿಸುವುದರ ಬಗ್ಗೆ ನಿರ್ಧರಿಸಲಾಯಿತು.ಈ ಟ್ರಸ್ಟ್ ನ ಅಧ್ಯಕ್ಷರಾಗಿ ನಿರಂಜನ ಕಡ್ಲಾರು,...
ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ ದಿನದ ಮಹತ್ವವನ್ನು ವಿವರಿಸಿದರು. ಸಹ ಶಿಕ್ಷಕರಾದ ವೆಂಕಟೇಶ್ ಕುಮಾರ್ ಯು ಸಂವಿಧಾನದ ಪ್ರಸ್ತಾವನೆಯನ್ನು ಓದಿಸಿ, ಸಂದರ್ಭೋಚಿತವಾಗಿ ಮಾತನಾಡಿದರು. ಸಹಶಿಕ್ಷಕಿ ಸಹನಾ ಬಿ ಬಿ ಸ್ವಾಗತಿಸಿ, ವಂದನಾರ್ಪಣೆಗೈದರು. ಅದೇ ದಿನ ಬೆಳಿಗ್ಗೆ 11.00 ಗಂಟೆಗೆ ರಾಷ್ಟ್ರಪತಿಗಳ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಆರ್ಥಿಕ ಯೋಜನಾ ವೇದಿಕೆ ವತಿಯಿಂದ ಅರ್ಥಶಾಸ್ತ್ರ ಕೃತಿಗಳ ಅನಾವರಣ ಕಾರ್ಯಕ್ರಮ ನವೆಂಬರ್ 26 ರಂದು ಕಾಲೇಜಿನಲ್ಲಿ ನಡೆಯಿತು. ಅಂತಿಮ ಕಲಾ ಪದವಿಯ ವಿದ್ಯಾರ್ಥಿಗಳಿಗಾಗಿ ಡಾ. ಪ್ರಭಾಕರ ಶಿಶಿಲರು ಬರೆದ "ಆರ್ಥಿಕ ಚಿಂತನೆ" ಹಾಗೂ "ಅಭಿವೃದ್ಧಿ ಅರ್ಥಶಾಸ್ತ್ರ" ಎಂಬೆರಡು ಕೃತಿಗಳನ್ನು ಅನಾವರಣ ಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ವಲಯ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ನವದೆಹಲಿಯ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಕೌನ್ಸಿಲ್ ನವರು ಪ್ರತಿವರ್ಷ ಕೊಡಮಾಡುವ "ಭಾರತ ವಿದ್ಯಾ ರತ್ನ ಅವಾರ್ಡ್ 2021" ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಸಂಘಟನಾ ಕ್ಷೇತ್ರವನ್ನು ಗಮನಿಸಿ ಕೊಡಮಾಡುವ 2021 ನೇ ಸಾಲಿನ ಪ್ರಶಸ್ತಿಗೆ ದಕ್ಷಿಣ...
ಹರಿಹರ ಪಲ್ಲತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.25 ರಂದು ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿ ಆರಂಭಗೊಂಡಿತು.ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್.ಡಿ.ಎಂ.ಸಿ ಅದ್ಯಕ್ಷರಾದ ನೇಮಿಚಂದ್ರ ದೋಣಿಪಳ್ಳ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ದೇವಕಿ ನೆತ್ತಾರ ವಂದಿಸಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಾವಿತ್ರಿ,...
ನಮ್ಮ ಊರಿನ ಹಾಗೂ ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಈ ಬಾರಿಯ ಒಕ್ಕಲಿಗ ಸಮುದಾಯದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಈ ಭಾಗದಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವವರೆಗೂ ಇಲ್ಲಿನ ಸಮುದಾಯ ಬಾಂಧವರಿಗೆ ಇಂಥದೊಂದು ಚುನಾವಣೆಯಿದೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ಹೇಳಿದರು. ಸುಳ್ಯದಲ್ಲಿ ನ.೨೬ ರಂದು...
ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿ ಇಲ್ಲಿ ನ.26 ಶುಕ್ರವಾರದಂದು "ಸಂವಿಧಾನ ದಿನಾಚರಣೆ"ಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞೆಯನ್ನು ಶಾಲಾ ಮಕ್ಕಳು, ಶಾಲಾ ಶಿಕ್ಷಕರು ಹಾಗೂ ಶಾಲಾ ಅಡುಗೆ ಸಿಬ್ಬಂದಿಯವರೆಲ್ಲರು ಸೇರಿ ಸ್ವೀಕರಿಸಿದರು. ಸಂವಿಧಾನದ ಮಹತ್ವ ಮತ್ತು ಸಂವಿಧಾನ ಪ್ರಸ್ತಾವನೆಯ ಬಗ್ಗೆ ಹಾಗೂ ಸಂವಿಧಾನ ರಚನೆಯ ವಿಧಿ ವಿಧಾನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ನಂತರ 11:15ಕ್ಕೆ...
ನ.26ರಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ "ಸಂವಿಧಾನ ದಿನಾಚರಣೆ"ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಗುರುಗಳು, ಶಾಲಾಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಮೂರ್ತಿ ಇವರು ಮಕ್ಕಳಿಗೆ ನಮ್ಮ ಸಂವಿಧಾನ ಪ್ರಸ್ತಾವನೆಯ ಮಹತ್ವವನ್ನು ತಿಳಿಸಿದರು.
Loading posts...
All posts loaded
No more posts
