ಸುಳ್ಯ : ಶ್ರೀ ಚೆನ್ನಕೇಶವ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ – ಡಿಸೆಂಬರ್ 21ರಿಂದ 26ರ ವರೆಗೆ ಕಾರ್ಯಕ್ರಮ

ಶ್ರೀ ಚೆನ್ನಕೇಶವ ದೇವಸ್ಥಾನದ ನೂತನ ಗುಡಿಯಲ್ಲಿ ಶ್ರೀ ದುರ್ಗಾದೇವಿ ಪ್ರತಿಷ್ಠೆ ಮತ್ತು ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮಕಲಶಾಭಿಶೇಕದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಡಿ. 6 ರಂದು ದೇವಳದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಅವರು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ...

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವ- ಭಜನೆ ತರಬೇತಿ ಕಾರ್ಯಕ್ರಮ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಡಿ.05(ಇಂದು)ರಂದು ಬೆಳಗ್ಗೆ 09.30ಕ್ಕೆ ಸರಿಯಾಗಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ನೆರವೇರಿತು. ಬಾಳಿಲ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾದ ಸೀತಾರಾಮ ಗೌಡ ಕಾಯರ ಇವರು ದೀಪ ಬೆಳಗಿಸಿ ಭಜನೆ ತರಬೇತಿಯನ್ನು ಉದ್ಘಾಟಿಸಿದರು. ಸಾರ್ವಜನಿಕ ದೇವತಾರಾಧನೆ ಸಮಿತಿ...
Ad Widget

ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ನಾವೂರಿನಲ್ಲಿ ಕುಣಿತಭಜನೆ

ನಾವೂರು ಸುಬ್ರಮಣ್ಯ ದೇವಸ್ಥಾನದಲ್ಲಿ ಡಿ.04ರಂದು ನಡೆದ ಲಕ್ಷದೀಪೋತ್ಸವದಲ್ಲಿ ವಿದ್ಯಾಬೋಧೀನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ವಿದ್ಯಾರ್ಥಿಗಳು ಕುಣಿತ ಭಜನಾ ಸೇವೆ ನಡೆಸಿಕೊಟ್ಟರು. ಸಂಜೆ 8.00ರಿಂದ 10.00 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ಭಜನಾ ತಂಡದ 25 ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ ವೈ ಬಿ, ಎಸ್ಡಿಎಂಸಿ ಅಧ್ಯಕ್ಷ...

ಬೆಳ್ಳಾರೆ ಎಸ್ ಡಿಪಿಐ ವತಿಯಿಂದ ಶ್ರಮದಾನ

ಬೆಳ್ಳಾರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಬೆಳ್ಳಾರೆ 1ನೇ ವಾರ್ಡಿನ ಕೊಲಂಬಳ ಉಮಿಕ್ಕಳ ರಸ್ತೆಯ ಇಕ್ಕೆಲಗಳಲ್ಲಿ ತುಂಬಿಕೊಂಡಿದ್ದ ಪೊದೆಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಎಸ್.ಡಿ.ಪಿ.ಐ ಮುಖಂಡ ಇಕ್ಬಾಲ್ ಬೆಳ್ಳಾರೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಹಾಜಿ.ಕೆ ಮಮ್ಮಾಲಿ, ಬೆಳ್ಳಾರೆ...

ಎನ್ನೆಂಸಿ: ಭಾಷಣ ಸ್ಪರ್ಧೆಯಲ್ಲಿ ದೀಪಾಲಿ ಸಿ ಕೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಅಂತಿಮ ಬಿ ಎಸ್ಸಿ ವಿದ್ಯಾರ್ಥಿನಿ ದೀಪಾಲಿ ಸಿ ಕೆ ಮಂಗಳೂರಿನ ನೆಹರೂ ಕೇಂದ್ರದವರು ನಡೆಸಿದ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರು ಕುರಿತ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರಿನ...

ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ

ಚಿಗುರು ಯುವಕ ಮಂಡಲ ಪೆರಾಜೆ ಮತ್ತು ಜ್ಯೋತಿ ಪ್ರೌಢಶಾಲೆ ಪೆರಾಜೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ 'ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು' ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಡಿ.04ರಂದು ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ಜರುಗಿತು. ಕಾರ್ಯಕ್ರಮವನ್ನು ಎನ್.ಎ.ಜ್ಞಾನೇಶ್ ಅಧ್ಯಕ್ಷರು ಜ್ಯೋತಿ...

ಸುಳ್ಯ ತಾಲೂಕು ಅಕ್ಷರದಾಸೋಹ ಪ್ರಭಾರ ಸಹಾಯಕ ನಿರ್ದೇಶಕರಾಗಿ ಶ್ರೀಮತಿ ವೀಣಾ.ಎಂ.ಟಿ

ಸುಳ್ಯ ತಾಲೂಕು ಅಕ್ಷರದಾಸೋಹ ಪ್ರಭಾರ ಸಹಾಯಕ ನಿರ್ದೇಶಕರಾಗಿ ಶ್ರೀಮತಿ ವೀಣಾ.ಎಂ.ಟಿ ನೇಮಕಗೊಂಡಿದ್ದಾರೆ. ಚಂದ್ರಶೇಖರ ಪೇರಾಲು ಇವರ ನಿವೃತ್ತಿಯಿಂದ ತೆರವಾಗಿರುವ ಈ ಸ್ಥಾನಕ್ಕೆ ಶ್ರೀಮತಿ ವೀಣಾ.ಎಂ.ಟಿ ನೇಮಕಗೊಂಡಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.ಇವರು ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಡೆಕೋಲು: ಮುತ್ತಪ್ಪ ಗೌಡ ನಾಪತ್ತೆ- ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

ಮಂಡೆಕೋಲು ಗ್ರಾಮದ ಕುತ್ತಿಮುಂಡ ಕುಟುಂಬದ ಶಿವಾಜಿನಗರ ನಿವಾಸಿ ಮುತ್ತಪ್ಪ ಗೌಡ ಅವರು ನ.30ರಂದು ಮನೆಯಿಂದ ಕೆಲಸಕ್ಕೆಂದು ಹೊರಟವರು ಕಾಣೆಯಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 48 ವರ್ಷ ಪ್ರಾಯದ ಇವರು ಮಂಡೆಕೋಲಿನಿಂದ ಸುಳ್ಯಕ್ಕೆ ಬಂದು ಅಲ್ಲಿಂದ ಪುತ್ತೂರಿಗೆ ಸರಕಾರಿ ಬಸ್ ಮೂಲಕ ಪ್ರಯಾಣಿಸಿರುವ ಮಾಹಿತಿ ಇದ್ದು ಯಾರಿಗಾದರೂ ಕಂಡುಬಂದಲ್ಲಿ ಸುಳ್ಯ ಠಾಣೆಯನ್ನು...

ಬಾಳಿಲ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಕುಕ್ಕೆಯಲ್ಲಿ ಕುಣಿತ ಭಜನಾ ಸೇವೆ

ಬಾಳಿಲ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಡಿ.03ರಂದು ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕುಣಿತ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂದ್ರಪ್ಪಾಡಿ :- ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನರ ಪಾತ್ರ ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್ ಕಾಲೇಜು ವಿದ್ಯಾರ್ಥಿಗಳು ಭಾಗಿ

ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ, ಐಕ್ಯೂಎಸಿ ಹಾಗೂ ಕಾಮರ್ಸ್ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ನ.30 ರಂದು ಕಂದ್ರಪ್ಪಾಡಿಯ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ "ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನರ ಪಾತ್ರ" ಎಂಬ ಕಾರ್ಯಕ್ರಮ ನಡೆಯಿತು.ಈ ಭತ್ತ ನಾಟಿಯ ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವಾಣಿಜ್ಯ ಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೀತಮ್ ಮುಂಡೋಡಿ ಅವರ ಮನೆಯವರು ಈ ಕಾರ್ಯಕ್ರಮದಲ್ಲಿ...
Loading posts...

All posts loaded

No more posts

error: Content is protected !!