ಸುಳ್ಯ : ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ವಯಂಸೇವಕರಾಗಿ ಸೇವೆ

ಸುಳ್ಯ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ಸಮಿತಿಯ ವತಿಯಿಂದ ಸುಬ್ರಹ್ಮಣ್ಯ, ನಾಲ್ಕೂರು, ದೊಡ್ಡತೋಟ, ಪಂಜ, ಕಲ್ಮಡ್ಕ, ಗುತ್ತಿಗಾರು, ಸಂಪಾಜೆ, ಪೇರಾಲು, ಸುಳ್ಯ, ಬೆಳ್ಳಾರೆ ಘಟಕದ ಸ್ವಯಂ ಸೇವಕರು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀ ದುರ್ಗಾ ದೇವಿಯ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಡಿ.20 ರಿಂದ ಡಿ.26 ರವರೆಗೆ ನಿರಂತರ 7...

ನಂದಕುಮಾರ್ ಮಡಿಕೇರಿ ಅವರಿಂದ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ ರೂ ಒಂದು ಲಕ್ಷ ದೇಣಿಗೆ

ಸುಳ್ಯ:‌ಮಡಿಕೇರಿ ನಗರ ಸಭೆಯ ಮಾಜಿ‌‌ ಅಧ್ಯಕ್ಷ ಹಾಗು ಕೆಪಿಸಿಸಿ ಸಂಯೋಜಕರಾದ‌ ಹೆಚ್.ಎಂ.ನಂದಕುಮಾರ್ ಮಡಿಕೇರಿ ಅವರು ಸುಳ್ಯ ಪ್ರೆಸ್‌ ಕ್ಲಬ್‌ ಕಟ್ಟಡಕ್ಕೆ ಒಂದು ಲಕ್ಷ ಸಹಾಯ ಧನ ನೀಡಿದ್ದಾರೆ. ಪ್ರೆಸ್ ಕ್ಲಬ್ ಪದಾಧಿಕಾರಿಗಳಿಗೆ ಅವರು ಒಂದು ಲಕ್ಷ ರೂ ಸಹಾಯ ಧನ ಹಸ್ತಾಂತರಿಸಿದರು. ಸುಳ್ಯದ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನ ಪ್ರೆಸ್ ಸ್ಥಳಕ್ಕೆ ಭೇಟಿ ನೀಡಿದ‌...
Ad Widget

ಬೆಂಡೋಡಿ : ರಸ್ತೆ ದುರಸ್ತಿ

ಬೆಂಡೋಡಿ ಬಿರ್ಮಡ್ಕದಿಂದ ಎಸ್.ಸಿ ಕಾಲನಿ ವರೆಗೆ ಕಚ್ಚಾ ರಸ್ತೆಗಳು ಮಳೆಗಾಲದಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಹಾಗೂ ಕೆಲವು ಕಡೆ ರಸ್ತೆಗಳು ಇಕ್ಕಟ್ಟಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಹಾಗೂ ಜನರಿಗೆ ನಡೆದಾಡಲು ಕಷ್ಟವಾಗುತ್ತಿತ್ತು. ಹಾಗಾಗಿ ಕೊಲ್ಲಮೊಗ್ರ ಗ್ರಾಮಪಂಚಾಯತ್ ಸದಸ್ಯರಾದ ಮಾಧವ ಚಾಂತಾಳ ಅವರ ನೇತೃತ್ವದಲ್ಲಿ ರಸ್ತೆಯ ಫಲಾನುಭವಿಗಳನ್ನು ಸೇರಿಸಿಕೊಂಡು ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ...

ಎಸ್.ಕೆ.ಎಸ್.ಎಸ್.ಎಫ್ ಅಡ್ಕ ಇರುವಂಬಳ್ಳ ಶಾಖಾ ಸಮಿತಿ ರಚನೆ-ಅಧ್ಯಕ್ಷರಾಗಿ ಸಿದ್ದೀಕ್ ಅಡ್ಕ

ಎಸ್.ಕೆ.ಎಸ್.ಎಸ್.ಎಫ್ ಅಡ್ಕ ಇರುವಂಬಳ್ಳ ಶಾಖಾ ಸಮಿತಿಯ 2022-24ನೇ ಸಾಲಿನ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಡಿಸೆಂಬರ್ 22 ರಂದು ರಿಟರ್ನಿಂಗ್ ಆಫಿಸರ್ ಶಹೀದ್ ಪಾರೆ ಸುಳ್ಯ & ಸಂಪನ್ಮೂಲ ವ್ಯಕ್ತಿ ಶಮೀಮ್ ಅರ್ಶದಿ ಮಂಡೆಕೋಲು ರವರ ನೇತೃತ್ವದಲ್ಲಿ ಝೈನಿಯಾ ತರಬೇತಿ ಕೇಂದ್ರದಲ್ಲಿ ನಡೆಯಿತು.ಸಭೆಯಲ್ಲಿ ಸುಳ್ಯ ಮದ್ರಸಮೇನೇಜ್ಮೆಂಟ್& ಜಮ್ಯೂಹತುಲ್ ಮುಹಲ್ಲಿಮ್ ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ ,...

ಜಯನಗರ : ಸ್ಮಶಾನ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡ ರೋಟರಿ ಕ್ಲಬ್ ಸುಳ್ಯ- ಸುಸಜ್ಜಿತ ಸ್ಮಶಾನ ರಚಿಸಿ ನಗರಾಡಳಿತಕ್ಕೆ ಹಸ್ತಾಂತರ : ಪ್ರಭಾಕರ ನಾಯರ್

ಶೋಚನೀಯ ಸ್ಥಿತಿಯಲ್ಲಿರುವ ಜಯನಗರದ ಸ್ಮಶಾನವನ್ನು ರೋಟರಿ ಕ್ಲಬ್ ವತಿಯಿಂದ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದೇವೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಸಾಗುತ್ತಿದ್ದು ರುದ್ರಭೂಮಿ ಛಾವಣಿ ಕೆಲಸ, ಸಿಲಿಕಾನ್ ಛೇಂಬರ್ ಅಳವಡಿಕೆ, ಶೌಚಾಲಯ, ಸ್ನಾನಗೃಹ, ಶಿವನ ಮೂರ್ತಿ ಹಾಗೂ ಪಾರ್ಕ್ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಿ ಕಾರ್ಯ ಆರಂಭಿಸಲಾಗಿದೆ ಎಂದು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ಪ್ರಭಾಕರ ನಾಯರ್...

ಗುತ್ತಿಗಾರು : ಜಿ.ಟಿ.ಆರ್. ಹಬ್ ರೆಸ್ಟೋರೆಂಟ್ ಶುಭಾರಂಭ

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಧನ್ಯಕುಮಾರ್ ದೇರುಮಜಲು ಹಾಗೂ ರಕ್ಷಿತ್ ಶೀರಡ್ಕ ಮಾಲಕತ್ವದ ಜಿ.ಟಿ.ಆರ್ ಹಬ್ (GTR Hub) ರೆಸ್ಟೋರೆಂಟ್ ಡಿ.26 ರಂದು ಉದ್ಘಾಟನೆಗೊಂಡಿತು. ಇಲ್ಲಿ ಗ್ರಾಹಕರಿಗೆ ಚಿಕ್ಕನ್ ಟಿಕ್ಕ, ಶವರ್ಮ,ಅಲ್-ಫಾಹಮ್, ಊಟ, ಉಪಹಾರ, ಪೋರ್ಕ್, ಬಿರಿಯಾನಿ,ಸೂಪ್, ಐಸ್ ಕ್ರೀಮ್, ಟೀ ಹಾಗೂ ಪಾರ್ಸೆಲ್ ವ್ಯವಸ್ಥೆಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಸೋಣಂಗೇರಿ ಸಮೀಪ ಅಪರಿಚಿತ ಶವ ಪತ್ತೆ

ಸೋಣಂಗೇರಿ ಸಮೀಪ ಹೊಸಗದ್ದೆ ರಸ್ತೆ ಬದಿಯ ಪೊದೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಐದನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ- ಕಾಲೇಜಿಗೆ ವಿದ್ಯಾರ್ಥಿ ಆರೋಗ್ಯ ನಿಧಿಯ ಹಸ್ತಾಂತರ

ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯದ 2015-2016ನೇ ಸಾಲಿನ ಬಿ.ಎ ಬಳಗದ ಹಿರಿಯ ವಿದ್ಯಾರ್ಥಿವೃಂದದ 5ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಡಿ.26 ರಂದು ಕೆ.ಎಸ್.ಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಧ್ಯಾಹ್ನದ ಭೋಜನದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬಿ.ಎ...

ಮರ್ಕಂಜ: ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ ‘ಚೈತನ್ಯ ಟ್ರೋಪಿ’ ಕ್ರಿಕೆಟ್ ಪಂದ್ಯಾಟ

ಡಿ. 25 ಶನಿವಾರ ಹಾಗೂ ಡಿ. 26 ಆದಿತ್ಯವಾರದಂದು ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ, clienteleRCM ಪ್ರಾಯೋಜಕತ್ವದ/ಅರ್ಪಿಸಿದ ಲೀಗ್ ಮಾದರಿಯ 12 ತಂಡಗಳ "ಚೈತನ್ಯ ಟ್ರೋಪಿ" ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸಭಾಧ್ಯಕ್ಷರಾಗಿ ಗೋವಿಂದ ಅಳವುಪಾರೆ, ಅಧ್ಯಕ್ಷರಾಗಿ ಕಿರಣ್ ಕುಮಾರ್ ಕರಂಗಲಡ್ಕ ಹಾಗೂ ಅತಿಥಿಗಳಾಗಿ ಬಾಲಕೃಷ್ಣ ಕಂಜಿಪಿಲಿ, ಆನಂದ ಬಾಣೂರು,...

ನಾವೂರು : ನಗರ ಪಂಚಾಯತ್ ನಿರ್ಲಕ್ಷ್ಯದಿಂದ ಆಸ್ಪತ್ರೆ ಸೇರಿದ ಕಾಲೊನಿ ನಿವಾಸಿ

ಸುಳ್ಯ ನಗರದ ಗಾಂಧಿನಗರ ನಾವೂರು ಕಾಲೋನಿಗೆ ಚರಂಡಿ ವ್ಯವಸ್ಥೆ ಇದ್ದು ಕೆಲವು ದಿನಗಳಿಂದ ಕಾಲುದಾರಿಯ ಸ್ಲಾಬ್ ಮುರಿದು ಬಿದ್ದಿತ್ತು. ಡಿ.25ರ ರಾತ್ರಿ ಈ ದಾರಿಯಲ್ಲಿ ನಡೆದು ಬರುತ್ತಿದ್ದ ವ್ಯಕ್ತಿ ಮುರಿದ ಹೊದಿಕೆಯ ಮೇಲೆ ಕಾಲಿರಿಸಿದ್ದರಿಂದ ಬಿದ್ದು ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾರೆ. ಈ ಘಟನೆಗೆ ಸುಳ್ಯ ನಗರ ಪಂಚಾಯತ್ ನಿರ್ಲಕ್ಷ್ಯವೇ ಕಾರಣವೆಂದ ನಿವಾಸಿಗಳು, ಆದಷ್ಟು ಬೇಗ...
Loading posts...

All posts loaded

No more posts

error: Content is protected !!