ಗುತ್ತಿಗಾರು : ಮುತ್ತಪ್ಪ ದೈವದ ನೇಮೋತ್ಸವ- ಸಚಿವ ಎಸ್ ಅಂಗಾರ ಭೇಟಿ

ಗುತ್ತಿಗಾರಿನ ಶ್ರೀ ಮುತ್ತಪ್ಪ ದೈವಸ್ಥಾನ ದಲ್ಲಿ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಆರಂಭಗೊಂಡಿದ್ದು ಮಾ.5 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಸಂಜೆ ಶ್ರೀ ದೈವಕ್ಕೆ ಪೈಂಗುತ್ತಿ, ಶ್ರೀ ಮುತ್ತಪ್ಪ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಭೇಟಿ ನೀಡಿ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಏಕಾಹ ಭಜನೆ ಆರಂಭ

ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ , ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಾ.04 ರಂದುಶ್ರೀ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ 20ನೇ ವರ್ಷದ ಏಕಾಹ ಭಜನೆ ಆರಂಭಗೊಂಡಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪ್ರಾರ್ಥನೆಯೊಂದಿಗೆ ಸಹ ಅರ್ಚಕ ರಾಮಚಂದ್ರ ಶಬರಾಯ ದೀಪ ಬೆಳಗಿಸಿದರು....
Ad Widget

ಅಡ್ಯಡ್ಕ: ಡಿಜಿಟಲ್ ಸೇವಾಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯದ ತೊಡಿಕಾನ ಕಾರ್ಯಕ್ಷೇತ್ರದ ಅಡ್ಯಡ್ಕದಲ್ಲಿ ಸಿ ಎಸ್ ಸಿ ಡಿಜಿಟಲ್ ಸೇವಾಕೇಂದ್ರವನ್ನು ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರಾದ ಉಷಾ, ಸಂಪಾಜೆ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ, ನೋಡೆಲ್...

ಪೈಚಾರು : “ಎ” ವನ್ ಸ್ಟೀಲ್ ವರ್ಕ್ಸ್ & ಫರ್ನಿಚರ್ ಶುಭಾರಂಭ

ಪೈಚಾರಿನ ಎನ್ ಎಂ.ಪಿ‌. ಕಾಂಪ್ಲೆಕ್ಸ್ ನಲ್ಲಿ ಎ ವನ್ ಸ್ಟೀಲ್ ವರ್ಕ್ಸ್ & ಫರ್ನಿಚರ್ ಮಾ.3ರಂದು ಶುಭಾರಂಭಗೊಂಡಿತು. ನಾವೂರಿನ ಯು.ಎಸ್.ಕುಂಞಿಕೋಯ ತಂಗಳ್ ಸಆದಿ ದುಃವಾ ನೆರವೇರಿಸಿದರು.

ಕುಲ್ಕುಂದ: ಕೊರತಿ ದೈವದ ನೇಮೋತ್ಸವ

ಸುಬ್ರಹ್ಮಣ್ಯದ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ಕೊರತಿ ದೈವದ ನೇಮೋತ್ಸವ ನಡೆಯಿತು.ಆರಂಭದಲ್ಲಿ ಭಂಡಾರ ತೆಗೆದ ಬಳಿಕ ಶ್ರೀ ದೈವದ ನರ್ತನ ಸೇವೆ ನೆರವೇರಿತು.ನಂತರ ಪ್ರಸಾದ ವಿತರಣೆ ನಡೆಯಿತು.ನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.ಈ ಸಂದರ್ಭ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ,ಅಭಿವೃದ್ಧಿ ಸಮಿತಿ ಅಧ್ಯಕ್ಷ...

ಕಲ್ಲುಗುಂಡಿ: ಜುಡನ್ ಗ್ರೂಪ್ಸ್ ಶುಭಾರಂಭ – ಗಾರ್ಮೆಂಟ್ಸ್, ಗೋಲ್ಡನ್ ಕೀ ಕನ್ಸ್ಟ್ರಕ್ಷನ್ ಹಾಗೂ ಯೂನಿವರ್ಸಲ್ ಮಾರ್ಕೆಟಿಂಗ್‌ ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್‌ ಉದ್ಘಾಟನೆ

ಕಲ್ಲುಗುಂಡಿಯಲ್ಲಿ ಜುಡನ್ ಗ್ರೂಪ್ಸ್ ನವರ ಗಾರ್ಮೆಂಟ್ಸ್, ಗೋಲ್ಡನ್ ಕೀ ಕನ್ಸ್ಟ್ರಕ್ಷನ್ ಹಾಗೂ ಯೂನಿವಸರ್ಲ್ ಮಾರ್ಕೆಟಿಂಗ್‌ ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್‌ ಉದ್ಘಾಟನಾ ಸಮಾರಂಭವು ಮಾ.3ರಂದು ನಡೆಯಿತು. ಜುಡನ್ ಗಾರ್ಮೇಂಟ್ಸ್, ಗೋಲ್ಡನ್ ಕೀ ಕನ್ಟ್ರಕ್ಷನ್ ಹಾಗೂ ಯೂನಿವರ್ಸಲ್ ಮಾರ್ಕೆಟಿಂಗ್‌ನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕುಝಿರವರು ರಿಬ್ಬನ್ ಕಟ್ಟಿಂಗ್ ಮೂಲಕ ಶುಭಾರಂಭಗೊಳಿಸಿದರು. ಹಾಗೂ ಎಸ್.ಬಿ.ಜೆ ಸ್ಲಿಪ್ಪರ್ ಪ್ರೊಡಕ್ಷನ್‌ನನ್ನು...

ಬಾಳಿಲ: ತೆಂಗಿನ ಮರ ಏರುವ ಬಗ್ಗೆ ಪ್ರಾತ್ಯಕ್ಷಿಕೆ

ಮಾ.02ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ತೆಂಗಿನ ಮರ ಏರುವ ಕುರಿತು ಶ್ರೀ ವಿಠಲ ಗೌಡ ಕಡೀರ ಇವರು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ರಾಮನ್ ಇಕೋ ಕ್ಲಬ್ ಕಾರ್ಯಕ್ರಮ ನಡೆಸಿಕೊಟ್ಟಿತು.

ಬಾಳಿಲ: ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ ಮಾ.02ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ವಿಠಲ ಗೌಡ ಕಡೀರ ಭಾಗವಹಿಸಿದ್ದರು. ಅವರು ಸಮಗ್ರ ಕೃಷಿ ವಿಧಾನಗಳು, ಕೃಷಿಯಲ್ಲಿ ಸ್ವಾವಲಂಬಿ ಬದುಕು ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಖ್ಯಗುರುಗಳಾದ ಯಶೋಧರ ನಾರಾಲು ಸ್ವಾಗತಿಸಿದರು. ಗಣಿತ ಶಿಕ್ಷಕರಾದ ಉದಯಕುಮಾರ್ ರೈ ಎಸ್ ವಂದಿಸಿದರು. ಇಕೋ ಕ್ಲಬ್...

ದಾಖಲೆಗಳು ಬಿದ್ದುಸಿಕ್ಕಿರುತ್ತದೆ….

ಮಡಪ್ಪಾಡಿ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಯವರಿಗೆ ಗುತ್ತಿಗಾರು ಸಮೀಪ ಪಾನ್ ಕಾರ್ಡ್, ಎಟಿಎಂ ಹಾಗೂ ಡ್ರೈವಿಂಗ್ ಲೈಸೆನ್ಸ್ ದಾಖಲೆಗಳು ಬಿದ್ದು ಸಿಕ್ಕಿದ್ದು ಕಳೆದುಕೊಂಡವರು 9483923043 ಸಂಖ್ಯೆಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

ಕುಲ್ಕುಂದ : ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾ.01 ರಂದು ವರ್ಷಂಪ್ರತಿಯಂತೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಮೃತ್ಯುಂಜಯ ಯಾಗ, ಶ್ರೀ ಬಸವೇಶ್ವರ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ನಡೆಯಿತು.ಬೆಳಿಗ್ಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭಗೊಂಡಿತು. ಬಳಿಕ ಶ್ರೀ ಬಸವೇಶ್ವರ ದೇವರಿಗೆ ಬೆಳಿಗ್ಗಿನ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಶ್ರೀ ದೇವಸ್ಥಾನದ ಸಾಲ ತೀರುಸುವರೆ ನಿಧಿಕುಂಭ ಸಮರ್ಪಣೆ ನಡೆದು...
Loading posts...

All posts loaded

No more posts

error: Content is protected !!