ವಳಲಂಬೆ ಸಮೀಪ ಪರ್ಸ್ ಬಿದ್ದು ಸಿಕ್ಕಿದೆ

ವಳಲಂಬೆ ಸಮೀಪ ಲೇಡಿಸ್ ಪರ್ಸೊಂದು ಇಂದು ಬಿದ್ದು ಸಿಕ್ಕಿರುತ್ತದೆ. ಕಳೆದುಕೊಂಡವರು ಅಮರ ಸುಳ್ಯ ಸುದ್ದಿ ಕಛೇರಿಯನ್ನು ಸಂಪರ್ಕಿಸಬಹುದು. ಮೊ: 9449387044

ಎ.13: ಐವರ್ನಾಡು ಬಿರ್ಮುಕಜೆ ತರವಾಡು ಮನೆಯ ಧರ್ಮ ನಡಾವಳಿ

ಐವರ್ನಾಡಿನ ಬಿರ್ಮುಕಜೆ ತರವಾಡು ಮನೆಯ ಶ್ರೀ ರುದ್ರಚಾಮುಂಡಿ, ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಎ.13 ರಂದು ಬಿರ್ಮುಕಜೆ ಕುಟುಂಬದ ತರವಾಡು ಮನೆಯಲ್ಲಿ ಜರುಗಲಿದೆ. ಎ.6 ರಂದು ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಎ.13ರ ಬೆಳಿಗ್ಗೆಯಿಂದ ಗಣಹೋಮ, ನಾಗತಂಬಿಲ, ಮುನಿಸ್ವಾಮಿಗೆ ನೈವೇದ್ಯ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಲಿದೆ....
Ad Widget

ಅರಂತೋಡು: ಖುಷಿ ಬೇಕರಿ ಶುಭಾರಂಭ

ಅರಂತೋಡಿನಲ್ಲಿ ಅನಿಲ್ ಕುಮಾರ್ ಬಿಳಿಯಾರು ಅವರ ಮಾಲೀಕತ್ವದಲ್ಲಿ ಖುಷಿ ಬೇಕರಿ ಏ.2 ರಂದು ಶುಭಾರಂಭಗೊಂಡಿತು. ಬೇಕರಿಯನ್ನು ಅರಂತೋಡು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ., ಅರಂತೋಡು ಮಲ್ಲಿಕಾರ್ಜುನ...

ಐನೆಕಿದು: ತೋಟಕ್ಕೆ ಆನೆ ದಾಳಿ

ಐನೆಕಿದು ಗ್ರಾಮದ ಕೆದಿಲ ಶಶಿಧರ್ ರವರ ತೋಟಕ್ಕೆ ಆನೆ ದಾಳಿ ನಡೆಸಿದ ಘಟನೆ ಇಂದು ಬೆಳಗಿನ ಜಾವ 5.30ಕ್ಕೆ ಸಂಭವಿಸಿದೆ. ಎರಡು ದಿವಸಗಳ ಹಿಂದೆ ಇದೇ ಗ್ರಾಮದ ರವಿ ಕೆದಿಲರವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಇದರಿಂದ ಕೃಷಿಗೆ ಸಾಕಷ್ಟು ಹಾನಿಯಾಗಿತ್ತು. ಇದೀಗ ಆನೆ ದಾಳಿ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು ಕೃಷಿಗೆ ವ್ಯಾಪಕ ಹಾನಿಯಾಗುತ್ತಿದೆ.

ಏ.2 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ

ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.2 ರಂದು ರಾಜ್ಯ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ ನೆರವೇರಲಿದೆ. ಈ ಪ್ರಯುಕ್ತ ಮುಂಜಾನೆ 6 ಗಂಟೆಯಿಂದ ಶ್ರೀ ವಿದ್ಯಾಸಾಗರ ಭಜನಾ ಸಂಗಮ ಮತ್ತಿತರ ಸ್ವಯಂಸೇವಕ ತಂಡದವರಿದ ಶ್ರೀ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಅಹಃಪೂರ್ಣ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥನೆ:ಯುಗಾದಿಯ...

ಅರಂತೋಡು : ಗ್ರಾಮ ಪಂಚಾಯತ್ ಘನತ್ಯಾಜ್ಯ ನಿರ್ವಹಣಾ ತಂಡಕ್ಕೆ ಜಿಲ್ಲಾ ಪ್ರಶಸ್ತಿ

ಅರಂತೋಡು ಗ್ರಾಮ ಪಂಚಾಯತ್ ಘನತ್ಯಾಜ್ಯ ನಿರ್ವಹಣೆಯನ್ನು ಮಾಡುತ್ತಿರುವ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘದ ಮಹಿಳಾ ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಮಹಿಳಾ ಘನತ್ಯಾಜ್ಯ ನಿರ್ವಹಣಾ ತಂಡವಾಗಿರುತ್ತದೆ. ಏ.3 ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ರವರು ಮಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಿದ್ದಾರೆ. ಘನ...

ಬೆಳ್ಳಾರೆ : ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಆಂಜನೇಯ ರೆಡ್ಡಿಯವರಿಗೆ ಸನ್ಮಾನ

ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಏ.1 ರಂದು ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾಗಿದ್ದು ಕಡಬ ಠಾಣೆಗೆ ವರ್ಗಾವಣೆಗೊಂಡ ಆಂಜನೇಯ ರೆಡ್ಡಿ ಅವರನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ, ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ರಂಗತ್ತಮಲೆ, ಆನಂದ, ಮಾಸ್ಟರ್ ಸ್ಟುಡಿಯೋ ಮಾಲಕರಾದ ಚೆನ್ನಕೇಶವ ಸುಳ್ಯ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಅಂಬೇಡ್ಕರ್...

ಕೆ.ವಿ.ಜಿ ಆಯುರ್ವೇದ ಕಾಲೇಜಿಗೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಚಿನ್ನದ ಪದಕ

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಇವರು ನಡೆಸಿದ ಆಯುರ್ವೇದ ಪದವಿ ಪರೀಕ್ಷೆಯಲ್ಲಿ ಸುಳ್ಯದ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ. ಮೇಘನ ಸಿ., ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾಳೆ.ವಿದ್ಯಾರ್ಥಿನಿಯನ್ನು, ಎ.ಒ.ಎಲ್.ಇ(ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್. ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ...

ಮುರುಳ್ಯ – ಎಣ್ಮೂರು ಸಹಕಾರಿ ಸಂಘದ ಹೊಸ ಕಟ್ಟಡಕ್ಕಾಗಿ ತಂದಿಟ್ಟಿದ್ದ ರೂ1.52 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ಸಾಧನ ಕಳವು

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮುರುಳ್ಯ – ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡದಲ್ಲಿ ಸಂಘದ ವ್ಯವಹಾರಗಳನ್ನು ಲೆಕ್ಕ ಇರಿಸಿಕೊಳ್ಳಲು ತಂದಿಟ್ಟಿದ್ದ ಅಪಾರ ಮೌಲ್ಯದ ವಸ್ತುವನ್ನು ಕಳವು ಮಾಡಿರುವ ಘಟನೆ ಸುಳ್ಯದ ಮುರುಳ್ಯ ಗ್ರಾಮದಲ್ಲಿ ನಡೆದಿದೆ. ಮುರುಳ್ಯ ಗ್ರಾಮದ ಮುರುಳ್ಯ -ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಅಲೆಕ್ಕಾಡಿ ಕಟ್ಟಡದಲ್ಲಿ...

ಉಳುವಾರು : ವಿಷ್ಣುಮೂರ್ತಿ ದೈವದ ಬೈಲಕೋಲ

ಅರಂತೋಡು ಗ್ರಾಮದ ಉಳುವಾರು ತರವಾಡು ಮನೆಯಲ್ಲಿ ವಿಷ್ಣುಮೂರ್ತಿ ಬೈಲುಕೋಲ ದಿ.30 ರಂದು ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಪ್ರಮುಖರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!