ಕಂದ್ರಪ್ಪಾಡಿ : ಮರ ಬಿದ್ದು ರಸ್ತೆ ಬಂದ್, ತೆರವು

ಗುತ್ತಿಗಾರು ಕಂದ್ರಪ್ಪಾಡಿ ರಸ್ತೆಯಲ್ಲಿ ಗೌರಿಗುಂಡಿ ಬಳಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು.

ಪರಪ್ಪೆಯಲ್ಲಿ ಹೆದ್ದಾರಿಗೆ ವ್ಯಾಪಿಸಿದ ಪಯಸ್ವಿನಿ ನದಿ ನೀರು

ಕಾಸರಗೋಡು ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ಪರಪ್ಪೆ ಬಳಿ ಉಕ್ಕಿ ಜಲ ಹರಿಯುತ್ತಿರುವ ಪಯಸ್ವಿನಿ ನದಿ ನೀರು ಹೆದ್ದಾರಿವರೆಗೆ ವ್ಯಾಪಿಸಿದೆ. ವಿಪರೀತ ಮಳೆ ಸುರಿತ್ತಿದ್ದು ನದಿಗಳಲ್ಲಿ ಮಟ್ಟ ಹೆಚ್ಚಾಗಿ ಅಪಾಯ ಮೀರಿ ಹರಿಯುತ್ತಿದೆ. ವರದಿಅನನ್ಯ ಹೆಚ್ ಸುಬ್ರಹ್ಮಣ್ಯ
Ad Widget

ಏನೆಕಲ್ಲು : ದೇವಸ್ಥಾನದ ಆವರಣಕ್ಕೆ ನುಗ್ಗಿದ ನೀರು

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ನೀರಿನಿಂದ ಆವೃತವಾಗಿದೆ. ದೇವಸ್ಥಾನದ ಸುತ್ತಮುತ್ತ ನೀರಿನಿಂದ ಆವರಿಸಿಕೊಂಡು ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಅರ್ಚಕರ ವಸತಿಗೃಹದ ಒಳಗೂ ನೀರು ತುಂಬಿಕೊಂಡಿದೆ. ಮಳೆ ಪ್ರಮಾಣಹೆಚ್ಚಿರುವುದರಿಂದ ಹಲವು ಕಡೆಗಳಲ್ಲಿ ನೀರಿನ ಪ್ರವಾಹವನ್ನು ಹೆಚ್ಚುತ್ತಿದ್ದೆ. ನದಿ ಪಾತ್ರದಲ್ಲಿರುವ ನಿವಾಸಿಗಳು ಆತಂಕದಿಂದ ಬದುಕುವಂತಾಗಿದೆ. ವರದಿ :ಅನನ್ಯ ಹೆಚ್ ಸುಬ್ರಹ್ಮಣ್ಯ

ಕಾಣಿಯೂರಿನಲ್ಲಿ ಬಿದ್ದ ಕಾರಿನಲ್ಲಿದ್ದವರು ವಿಟ್ಲ ಮೂಲದವರು – ವಳಲಂಬೆಯಿಂದ ಈ ಹಿಂದೆ ಖರೀಸಿದ ಕಾರು

ಕಾಣಿಯೂರು ಬಳಿಯ ಬೈತಡ್ಕ ಮಸೀದಿ ಬಳಿಯ ಸೇತುವೆಯಿಂದ ಕೆಳಗೆ ಬಿದ್ದ ಕಾರು ತೆರವು ಕಾರ್ಯಾಚರಣೆ ನಡೆದಿದೆ. ಆದರೆ ಕಾರಿನಲ್ಲಿ ಯಾರೊಬ್ಬರೂ ಪತ್ತೆಯಾಗಿಲ್ಲ. ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ಮೂರು ಮಂದಿ ಇದ್ದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ವಿಟ್ಲ ಮೂಲದ ಕುಂಡಡ್ಕದವರು ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ. ಕಾರಿನಲ್ಲಿ ಮೂವರಿದ್ದಾರೆಂದು...

ಬಾಳುಗೋಡು : ಉಕ್ಕಿ ಹರಿದ ನೀರಿಗೆ ಕೊಚ್ಚಿಹೋದ ಏಕೈಕ ಮರದ ಪಾಲ – ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು

https://youtu.be/FxbBJwsGv0c ಕಳೆದ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪ ವಾಸಿಗಳಾಗಿದ್ದಾರೆ. ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ...

ಕಂಪಿಸಿದ ಭೂಮಿ – ಅರಂತೋಡು ಕಂಪನದ ಕೇಂದ್ರ

ಸುಳ್ಯ ತಾಲೂಕು ಹಾಗುಇ ಕೊಡಗು ಗಡಿ ಭಾಗಗಳಲ್ಲಿ ಇಂದು ಬೆಳಿಗ್ಗೆ 6.22 ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಅರಂತೋಡು ಎಂದು ತಿಳಿದುಬಂದಿದೆ. ಬೆಳಿಗ್ಗೆ 6.22 ಕ್ಕೆ ಕಂಪನವಾಗಿದೆ. ಅರಂತೋಡು ಗ್ರಾಮದ 1.1 ಕಿ.ಮೀ. ಪರಿಸರದಲ್ಲಿ 10 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ. 1.8 ತೀವ್ರತೆ ಇತ್ತು ಎಂದು ರಿಕ್ಟರ್ ಮಾಪಕದ ಅಂಕಿ ಅಂಶಗಳ ಪ್ರಕಾರ...

ಜು.13ರವರೆಗೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ನಿರೀಕ್ಷೆ

ಬೆಂಗಳೂರು ಜು.8: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.13ರವರೆಗೆ ಗುಡುಗು, ಗಾಳಿ ಸಹಿತ ಅತೀ ಭಾರಿ ಹಾಗೂ ಭಾರಿ ಮಳೆ ನಿರೀಕ್ಷೆ ಇದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮೂರು ದಿನ 'ರೆಡ್ ಅಲರ್ಟ್' ಕೊಡಲಾಗಿದೆ. ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆ, ವೈಪರಿತ್ಯಗಳ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಅಕ್ಷರಶಃ ತತ್ತರಿಸಿವೆ. ಕಳೆದೊಂದು ವಾರದಿಂದ...

ಜು.15 : ಏನೆಕಲ್ ಕಲಾಮಾಯೆ ಸಾರಥ್ಯದ 1837ರ ಬ್ರಿಟಿಷ್‌ ವಸಾಹತುಶಾಹಿ ವಿರುದ್ಧದ ಹೋರಾಟ ಆಧಾರಿತ ಅರೆಭಾಷೆ ಚಲನಚಿತ್ರಕ್ಕೆ ಮುಹೂರ್ತ

ಕಲಾಮಾಯೆ ಏನೆಕಲ್ ಸಾರಥ್ಯದಲ್ಲಿ ಅರೆಭಾಷೆ ಚಲನಚಿತ್ರ ಮೂಡಿಬರಲಿದ್ದು ಜು.15 ರಂದು ಉಬರಡ್ಕದ ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಸ್ಥಾನದ ವಠಾರದಲ್ಲಿ ಪ್ರಾರ್ಥನಾ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಬಂಟಮಲೆ ಪ್ರಕಾಶನ ಪ್ರಕಟಿತ ವಿದ್ಯಾಧರ ಕುಡೆಕಲ್ಲು ಅವರ ಕೃತಿ ಆಧಾರಿತವಾಗಿ ಈ ಅರೆಭಾಷೆ...

ಹರಿಹರ ಪಲ್ಲತ್ತಡ್ಕ :- ಸೇತುವೆ ತಡೆಗೋಡೆ ಕುಸಿದ ಸ್ಥಳಕ್ಕೆ ಅಧಿಕಾರಿಗಳ ಭೇಟಿ – ಪರಿಶೀಲನೆ

ಜು.06 ರಂದು ಸುರಿದ ಭಾರಿ ಮಳೆಗೆ ಹರಿಹರ ಪಲ್ಲತ್ತಡ್ಕ ಗ್ರಾಮದ ಕೊಪ್ಪತ್ತಡ್ಕ ಎಂಬಲ್ಲಿ ಸೇತುವೆಯ ಒಂದು ಬದಿಯ ತಡೆಗೋಡೆ ಕುಸಿತವಾಗಿದ್ದು, ಹಾಗೂ ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ಮರದ ಕಾಲು ಸೇತುವೆ ಕೊಚ್ಚಿ ಹೋಗಿದ್ದು, ಜು.07 ರಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ...

ಶ್ರದ್ಧಾ ಕೇಂದ್ರಗಳ ದಾಖಲೆಗಳ ಶೀಘ್ರ ಮಂಜೂರಾತಿ ಮಾಡುವಂತೆ ಸಚಿವರಿಗೆ ವಿಹಿಂಪ ಮನವಿ

ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳ ಭೂಮಿಯ ದಾಖಲೆಗಳನ್ನು ಶೀಘ್ರವಾಗಿ ಮಂಜೂರಾತಿ ಗೊಳಿಸುವಂತೆ ಕರ್ನಾಟಕ ಸರಕಾರದ ಕಂದಾಯ ಸಚಿವರಾದ ಆರ್ ಅಶೋಕ್ ರವರಿಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಂಜಿತ್ ಸುಳ್ಯ, ವಿ ಹಿಂ ಪ ಪ್ರಧಾನ ಕಾರ್ಯದರ್ಶಿ, ಲತೀಶ್ ಗುಂಡ್ಯ, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ನವೀನ್,...
Loading posts...

All posts loaded

No more posts

error: Content is protected !!