ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ “ಗಣರಾಜ್ಯೋತ್ಸವ” ಆಚರಣೆ

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ "ಗಣರಾಜ್ಯೋತ್ಸವ" ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಇವರು ಸರ್ವರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ಭಾರತದಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಚಯ, ಸಂವಿಧಾನ ಜಾರಿ ಮತ್ತು ಅದರ ಮಹತ್ವ ಇವುಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಶಾಲಾ...

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಗಣರಾಜ್ಯೋತ್ಸವ

ಬೆಳ್ಳಾರೆ: ಇಲ್ಲಿನ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಹಾಗೂ ವಿದ್ಯಾರ್ಥಿಗಳಿಂದ ಹಲವು ಕಾರ್ಯಕ್ರಮಗಳು ಜರುಗಿತು. ಸ್ಕೂಲ್ ಸಂಚಾಲಕ ಬಿ.ಎ.ಬಶೀರ್ ಧ್ವಜಾರೋಹಣ ನೆರವೇರಿಸಿದರು. ಪಿ.ಟಿ.ಎ ಅಧ್ಯಕ್ಷ ಅಬ್ದುಲ್ ರಹಿಮಾನ್.ಟಿ ಹಾಗೂ ನಿರ್ದೇಶಕ ಶಾಫಿ.ಎಂ.ಎ, ಮಾತನಾಡಿದರು, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅಬೂಬಕ್ಕರ್ ಯು.ಎಚ್, ಝಖರಿಯ್ಯಾ ಜುಮಾ ಮಸೀದಿ ಆಡಳಿತಾಧಿಕಾರಿ ಸಹಾಯಕರಾದ ಆಶಿರ್ ಎ.ಬಿ,ಬಶೀರ್.ಕೆ.ಎ, ಅಬ್ದುಲ್ ರಹಿಮಾನ್.ಕೆ,...
Ad Widget

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಆರಂಭ; ವೈಭವದಿಂದ ಜರುಗಿದ ಹಸಿರುವಾಣಿ ಮೆರವಣಿಗೆ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವವು ಇಂದು ಆರಂಭಗೊಂಡಿದ್ದು, ಬಾಳಿಲ ಶ್ರೀ ಮಂಜುನಾಥೇಶ್ವರ ದ್ವಾರದ ಬಳಿಯಿಂದ ಮೂರುಕಲ್ಲಡ್ಕ ಶ್ರೀ ಉಳ್ಳಾಕುಲು ದೈವಸ್ಥಾನದವರೆಗೆ ವೈಭವದ ಮೆರವಣಿಗೆಯ ಮೂಲಕ ಹಸಿರುವಾಣಿ ಸಮರ್ಪಿಸಲಾಯಿತು. ಜಾತ್ರೋತ್ಸವದ ಅಂಗವಾಗಿ ಇಂದು(ಜ.26) ಬೆಳಗ್ಗೆ ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸಾನ್ನಿಧ್ಯದಲ್ಲಿ ಗಣಪತಿ...

ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

ಬೆಳ್ಳಾರೆ: ಇಲ್ಲಿನ ಹಿದಾಯತುಲ್ ಇಸ್ಲಾಂ ಮದರಸ, ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮದರಸ ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ದ ಕುರಿತು ಮಾತನಾಡಿದರು. ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಬಹು.ಝೈನುದ್ದೀನ್ ಮುಸ್ಲಿಯಾರ್, ಬಹು.ಹಸೈನಾರ್ ಮುಸ್ಲಿಯಾರ್, ಬಹು.ಶಮೀಮ್ ಹುದವಿ, ಝಖರಿಯ್ಯಾ ಜುಮಾ...

ಅಯ್ಯನಕಟ್ಟೆ ಜಾತ್ರೋತ್ಸವದ ಅಂಗವಾಗಿ ನಾಗರಿಕ ಸೇವಾ ಸಮಿತಿ ಬಾಳಿಲ-ಮುಪ್ಪೇರ್ಯ ವತಿಯಿಂದ ಶ್ರಮಸೇವೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವದ ಅಂಗವಾಗಿ ನಾಗರಿಕ ಸೇವಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ವತಿಯಿಂದ ಶ್ರಮಸೇವೆ ನಡೆಯಿತು. ಶ್ರಮಸೇವೆಯ ಮೂಲಕ ಸಪರಿವಾರ ಉಳ್ಳಾಕುಲು ಮೂಲಸ್ಥಾನದ ಬಳಿಯಿರುವ ನಾಗಸಾನ್ನಿಧ್ಯದ ಬಲಭಾಗದಲ್ಲಿರುವ ಕಾನಾಜೆ ಮರಕ್ಕೆ ಮುರಕಲ್ಲಿನ ಚೌಕಾಕಾರದ ಕಟ್ಟೆಯನ್ನು ನಿರ್ಮಿಸಲಾಯಿತು.

ಕಳಂಜ ಗ್ರಾಮ ಪಂಚಾಯತಿಯ ಗ್ರಾಮ ಸಭೆ

ಕಳಂಜ ಗ್ರಾಮ ಪಂಚಾಯತಿಯ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕಿಲಂಗೋಡಿಯವರ ಅಧ್ಯಕ್ಷತೆಯಲ್ಲಿ ಇಂದು(ಜ.23) ನಡೆಯಿತು. ಸಭೆಯಲ್ಲಿ ಇಲಾಖಾಧಿಕಾರಿಗಳು ಬರದಿರುವ ಬಗ್ಗೆ, ಶಿಕ್ಷಕರ ಕೊರತೆ, ಗ್ರಾಮಕ್ಕೆ ಘನತ್ಯಾಜ್ಯ ವ್ಯವಸ್ಥೆ ಮಾಡದಿರುವ ಕುರಿತು ತೀವ್ರ ಚರ್ಚೆ ನಡೆಯಿತು. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾ ಭಾಗವಹಿಸಿದ್ದರು....

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.15ರಿಂದ ಜ.21ರ ವರೆಗೆ ವಿಜೃಂಭಣೆಯಿಂದ ನಡೆಯಿತು. ಜ.15 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ದಿ , ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಸಾದ ವಿತರಣೆ ನಡೆಯಿತು....

ಕಡಬ: ನೆಲ್ಯಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಜೀವನ್ ಮಿಷನ್ ಕಾರ್ಯಕ್ರಮ

"ಮಕ್ಕಳು ನಲವತ್ತಮೂರು… ಪ್ರತಿಭೆಗಳು ಹಲವಾರು…" "ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು…" ಎಂಬುದಕ್ಕೆ ತಾಜಾ ಉದಾಹರಣೆಯಾಗಿ ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶದ ಶಾಲೆ. ಅಲ್ಲಿ ಒಂದರಿಂದ ಏಳನೇ ತರಗತಿಯವರೆಗೂ ಇರುವುದು ಕೇವಲ 43 ಮಕ್ಕಳು. ಆದರೆ ಇರುವ ಮಕ್ಕಳೆಲ್ಲಾ ಪ್ರತಿಭಾವಂತರೇ. ಕಡಬ ತಾಲೂಕಿನ ನೆಲ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡು ಸ್ಪರ್ಧೆಗಳಲ್ಲಿ...

ಜ.26-ಜ.29:ಅಯ್ಯನಕಟ್ಟೆ ಜಾತ್ರೋತ್ಸವ ;ಬಾಳಿಲ ಮುಪ್ಪೇರ್ಯ ಮಹಿಳೆಯರಿಂದ ಶ್ರಮಸೇವೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವವು ಜ.26ರಿಂದ ಜ.29ರ ವರೆಗೆ ಜರುಗಲಿದ್ದು, ಇಂದುಬಾಳಿಲ ಮುಪ್ಪೇರ್ಯ ಮಹಿಳೆಯರಿಂದ ಶ್ರಮಸೇವೆ ನಡೆಯಿತು.

ಬಿದ್ದು ಹೋಗಿರುತ್ತದೆ

ಪಂಜ -ಏನೆಕಲ್ಲು ಹೋಗುವ ದಾರಿ ಮಧ್ಯೆ ರೂ. 15,000 (ರಿಬ್ಬನ್‌ನಲ್ಲಿ ಕಟ್ಟಿದ್ದು) ಬಿದ್ದು ಹೋಗಿರುತ್ತದೆ. ಸಿಕ್ಕಿದವರು ಕೂಡಲೇ 7022359969 ಈ ನಂಬರಿಗೆ ಸಂಪರ್ಕಿಸಬೇಕಾಗಿ ವಿನಂತಿ
Loading posts...

All posts loaded

No more posts

error: Content is protected !!