ಸುಳ್ಯ : ಶೋಭಾಯಾತ್ರೆಗೂ ತಟ್ಟಿದ ಗ್ರಹಣ – ಭವ್ಯವಾದ ಮೆರವಣಿಗೆ ಅಡ್ಡಿಯಾದ ಮಳೆ – ಮತ್ತೆ ಪ್ರಾರಂಭ.

ಸುಳ್ಯದಲ್ಲಿ ನವರಾತ್ರಿ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಸ್ಥಾಪಿಸಲಾದ ದೇವಿ ಶಾರದೆಯ ಆರಾಧನೆ ಮುಗಿದು ಇಂದು ಭವ್ಯವಾದ ಶೋಭಾಯಾತ್ರೆಗೆ ಸಜ್ಜುಗೊಂಡಿತ್ತು. ಸಂಜೆ ಗಂಟೆ 4 ರಿಂದ ಆರಂಭಗೊಂಡ ಶೋಭಯಾತ್ರೆ ಮಳೆಯಿಂದಾಗಿ ಭಕ್ತಾರಿಗೆ ನಿರಾಸೆಯುಂಟು ಮಾಡಿತು. ಭಾರಿ ಮಳೆಯಿಂದಾಗಿ ಭಜನಾ ತಂಡಗಳು, ಚಂಡೆ, ನಾಸಿಕ್ ಮೇಳ, ಟ್ಯಾಬ್ಲೋ ಸೇರಿದಂತೆ ಇತರೆ ಎಲ್ಲಾ ವೈವಿಧ್ಯಮಯ ಶೋಭಾಯಾತ್ರೆಗೆ ಚಂದ್ರ...

ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ: ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಹಲವು ಪ್ರಶಸ್ತಿ

ಅಕ್ಟೋಬರ್ 26 ಮತ್ತು 27 ರಂದು ಸುಳ್ಯ ಮಲ್ನಾಡು ಪ್ರೌಡ ಶಾಲೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಹಲವು ಪ್ರಶಸ್ತಿ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ತನುಷ್ 100ಮೀ ದ್ವಿತೀಯ, 200ಮೀ ಪ್ರಥಮ, ಸೂಚನ್ 400ಮೀ ದ್ವಿತೀಯ, ಶೀಝ್ 400ಮೀ ತೃತೀಯ, ಆತ್ಮಿಕ್ 600ಮೀ ತೃತೀಯ, 4×100 ರಿಲೇ ತೃತೀಯ...
Ad Widget

ಮಡಪ್ಪಾಡಿ : ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಹಾಗೂ ಯುವಕ ಮಂಡಲ (ರಿ.) ಮಡಪ್ಪಾಡಿ ಸಹಯೋಗದಲ್ಲಿ ದಿನಾಂಕ 23/10/23ರ ಸೋಮವಾರ ಸಂಜೆ ಗಂಟೆ 7.30 ಕ್ಕೆ ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ನಡೆಯಿತು. 2022-23 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದ...

ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ನಿರ್ಮಿಸಿದ ಗೋ ರಥ ಸುಳ್ಯಕ್ಕೆ ಆಗಮನ – ಧಾರ್ಮಿಕ ಸಭೆ.

ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ಗೋ ರಥವು ಸುಳ್ಯದ ವಿಷ್ಣು ವೃತ್ತದ ಬಳಿ ಪುಸ್ಪಾರ್ಚನೆ ಹಾಗೂ ಹಾರ ಹಾಕಿ ಸುಳ್ಯಕ್ಕೆ ರಥವನ್ನು ಭರಮಾಡಿಕೊಳ್ಳಲಾಯಿತು. ಗೋ ರಥವು ಸುಳ್ಯದ ವಿಷ್ಣು ವೃತ್ತದಿಂದ ಜ್ಯೋತಿ ವೃತ್ತಕ್ಕೆ ತೆರಳಿ ಅಲ್ಲಿಂದ ಸುಳ್ಯದ ಚೆನ್ನಕೇಶವ ಕಟ್ಟೆಯ ಬಳಿ ಬಂದು ಭಜನೆ ಮತ್ತು ಪೂರ್ಣ ಕುಂಭ...

ಬೆಳ್ಳಾರೆ: ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಆಯುಧಪೂಜೆ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಅ.22ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ವಸಂತ್ ಕುಮಾರ್ ನಾಲ್ಗುತ್ತು, ಗಗನ್ ನಾಲ್ಗುತ್ತು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ – ಹರಕೆಯ ಸೇವೆ ಪೂರೈಸಿದ ಬಿಹಾರದ ಡಾ.ರಾಹುಲ್ ಕುಮಾರ್ ಪಾಟ್ನಾ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬಿಹಾರ ಮೂಲದ ಡಾ. ರಾಹುಲ್ ಕುಮಾರ್ ಪಾಟ್ನಾ ಚಿನ್ನದ ಪ್ರಭಾವಳಿ ಸಮರ್ಪಿಸಿದ್ದು, ಇಂದು ಪೂಜೆ ಸಲ್ಲಿಸಿ  ಸಮರ್ಪಿಸಲಾಯಿತು. ಮದುವೆ ಬಳಿಕ ಸಂತಾನಕ್ಕಾಗಿ ಹೇಳಲಾದ ಹರಕೆ ಸೇವೆ ಇದಾಗಿದ್ದು ಪುತ್ರ ಸಂತಾನ ಆಗಿದ್ದು ಅದರಂತೆ ಹರಕೆ ತೀರಿಸಿರುವುದಾಗಿ ತಿಳಿದು ಬಂದಿದೆ.  ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುತ್ರನ ಇರುವಿಕೆಯೊಂದಿಗೆ ಅರ್ಚಕ ಸತ್ಯನಾರಾಯಣ ನೂರಿತ್ತಾಯ...

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಯುವ ದಸರಕ್ಕೆ ಆಯ್ಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಆಡಳಿತಕ್ಕೆ ಒಳಪಟ್ಟಂತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಇದರ ಸಾಂಸ್ಕೃತಿಕ ತಂಡ ಮೈಸೂರಿನಲ್ಲಿ ನಡೆಯುವ ಯುವ ದಸರ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿದೆ.ದಿನಾಂಕ 7 /18/2023 ಶನಿವಾರ ಮೈಸೂರಿನಲ್ಲಿ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಈ ಕಾಲೇಜಿನ ತಂಡ ಪ್ರದರ್ಶನವನ್ನು ನೀಡಿತ್ತು. ಈ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯದ 400 ಕಾಲೇಜುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು...

ಡೆಂಜಿಗುರಿಯಿಂದ ಮನೆಯಲ್ಲಿ ಜಗಳವಾಡಿ ಅಜ್ಜಾವರದ ಬಸ್ಸು ನಿಲ್ದಾಣದಲ್ಲಿ ಕುಳಿತ ಬಾಲಕರು , ಪೋಷಕರ ಜೊತೆ ಕಳುಹಿಸಿಕೊಟ್ಟ ಪೋಲಿಸರು.

ತಂದೆ – ತಾಯಿ‌ಯೊಂದಿಗಿದ್ದ ಮಕ್ಕಳಿಬ್ಬರು ಅವರೊಂದಿಗೆ ಜಗಳವಾಡಿ ಏನನ್ನು ಹೇಳದೇ ಮನೆ ತೊರೆದು ಬಂದ ಘಟನೆ ವರದಿಯಾಗಿದೆ. ಈಶ್ವರಮಂಗಳ ಮೂಲದ ದಂಪತಿಗಳ ಇಬ್ಬರು ಮಕ್ಕಳು ಇಂದು ಸಂಜೆ ವೇಳೆಗೆ ಅಜ್ಜಾವರದ ಅಡ್ಪಂಗಾಯ ಬಸ್ ನಿಲ್ದಾಣದಲ್ಲಿ ಇರುವುದನ್ನು ಕಂಡ ಊರವರು ಆ ಮಕ್ಕಳನ್ನು ವಿಚಾರಿಸಿದಾಗ ನಾವು ಈಶ್ವರಮಂಗಲದವರು ಸದ್ಯ ಮಂಡೆಕೋಲು ಗ್ರಾಮದ ಡೆಂಜಿಗುರಿಯಲ್ಲಿ ವಾಸ್ತವ್ಯವಾಗಿದ್ದೆವೆ.‌ ಮನೆಯಲ್ಲಿ ಜಗಳವಾಡಿ...

ವೃತ್ತಿಯಲ್ಲೂ ಸಮಾಜ ಸೇವೆ-ತನ್ನ ಮಕ್ಕಳ ಹುಟ್ಟುಹಬ್ಬಕ್ಕೆ ಬಡವರಿಗೆ ನೆರವಾಗುವ ಅಪರೂಪದ ವ್ಯಕ್ತಿ ರಾಜೇಶ್ ಚಾರ್ವಾಕ

ಪ್ರತಿಯೊಬ್ಬರೂ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಆದರೆ ಮೋಜು ಮಸ್ತಿಯಲ್ಲಿ ದಿನ ಕಳೆದು ಬಿಡ್ತಾರೆ. ಆದ್ರೆ ಅದಕ್ಕೆ ಅಪವಾದ ಎಂಬಂತೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ಚಾರ್ವಾಕದ ದುರ್ಗಾ ಅರ್ಥ್ ಮೂವರ್ಸ್ ಮಾಲಕ ರಾಜೇಶ್ ವಾಲ್ತಾಜೆ ತನ್ನ ಹುಟ್ಟುಹಬ್ಬಕ್ಕೆ ಪ್ರತೀ ವರ್ಷ ಬಡವರ ಮನೆ ಗುರುತಿಸಿ ಅಲ್ಲಿ 250ಕ್ಕೂ ಮಿಕ್ಕಿ ಅಡಿಕೆ ಗಿಡದ ಗುಂಡಿ ತೆಗೆದು ಆ...

ಬಾಳಿಲ: ಶೈಕ್ಷಣಿಕ ಅಧ್ಯಯನ ಪ್ರವಾಸ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ 42 ವಿದ್ಯಾರ್ಥಿಗಳು ಮತ್ತು 7 ಮಂದಿ ಶಿಕ್ಷಕರ ತಂಡವು ದಿನಾಂಕ 12.10.2023 ಗುರುವಾರದಿಂದ 16.10.2023 ಸೋಮವಾರದವರೆಗೆ ರೈಲು ಪ್ರಯಾಣದ ಮೂಲಕ ಮುಂಬೈ ಮಹಾನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ನೆಹರೂ ವಿಜ್ಞಾನ ಕೇಂದ್ರ, ಎಲಿಫೆಂಟಾ ಕೇವ್ಸ್, ಹ್ಯಾಂಗಿಂಗ್ ಗಾರ್ಡನ್, ಗೇಟ್ ವೇ ಆಫ್ ಇಂಡಿಯಾ, ಛತ್ರಪತಿ ಶಿವಾಜಿ ಮಹಾರಾಜ್...
Loading posts...

All posts loaded

No more posts

error: Content is protected !!