ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವವು ಡಿ.20 ರಂದು ನಡೆಯಿತು.ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪುತ್ತೂರು ಫಿಲೋಮಿನ ಕಾಲೇಜು ಕ್ಯಾಂಪಸ್ ನಿರ್ದೇಶಕ ರೆ.ಪಾ ಸ್ಟಾನಿಪಿಂಟೋ ಉದ್ಘಾಟಿಸಿ ಮಾತನಾಡಿದರು.ಸುಳ್ಯ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಮಕ್ಕಳ ಅರೋಗ್ಯ ಮತ್ತು ಮಕ್ಕಳ ಸುರಕ್ಷತೆ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಪಾ...

ಬೆಳ್ಳಾರೆ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

ಝಖರಿಯ ಜುಮಾ ಮಸೀದಿ ಬೆಳ್ಳಾರೆ ಉರೂಸ್ ಸಮಾರಂಭದ ಪೋಸ್ಟರ್ ಅನ್ನು ಮಸೀದಿಯ ಖತೀಬರಾದ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ ಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಉರೂಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಕಾದರ್ ಹಾಜಿ ಬಯಂಬಾಡಿ ಹಾಗೂ ಕಮಿಟಿಯ ಸದಸ್ಯರುಗಳು ಬೆಳ್ಳಾರೆ ಜಮಾಅತಿನ ಸದಸ್ಯರುಗಳು ಮತ್ತು ಉಸ್ತಾದರುಗಳು ಉಪಸ್ಥಿತರಿದ್ದರು.
Ad Widget

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ವಿಶ್ವ ಅವಳಿ ಜವಳಿ ದಿನಾಚರಣೆ

ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಆರು ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸೋಮವಾರ ವಿಶ್ವ ಅವಳಿ ಜವಳಿ ದಿನಾಚರಣೆಯ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಅವಳಿ ಜವಳಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಪ್ರಶಂಶಿಸಲಾಯಿತು. ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಸುನೈನ ಬಿ ಅವರು...

ನಾಲ್ಕೂರು: ಡ್ಯಾಮ್ ಸ್ವಚ್ಛತೆ ಮಾಡಿದ ಶೌರ್ಯ ವಿಪತ್ತು ಸ್ವಯಂ ಸೇವಕರು

ನಾಲ್ಕೂರು ಗ್ರಾಮದ ಮರಕತ ಕುಡಿಯುವ ನೀರಿನ ಡ್ಯಾಮ್ ನಲ್ಲಿ ಮಳೆಗಾಲದಲ್ಲಿ ಬೃಹತ್ತಾದ ಮರಗಳು ಬಂದು ತುಂಬಿಕೊಂಡಿದ್ದು, ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ತೆರವುಗೊಳಿಸಿದ್ದು, ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ, ಪ್ರತಿನಿಧಿ ಸತೀಶ್, ಸ್ವಯಂಸೇವಕರಾದ ಕಾರ್ತಿಕ್, ಲೋಹಿತ್, ಅಶ್ವಥ್, ಪ್ರಜ್ವಲ್, ದೀಪಕ್, ಶೇಷಪ್ಪ ನಾಯ್ಕ್, ಚಂದ್ರಶೇಖರ, ಭರತ್, ಕರುಣಾಕರ್ ಭಾಗವಹಿಸಿದ್ದರು....

ಪಂಜ: ಸ್ಕೌಟ್ ಗೈಡ್ ವಾರ್ಷಿಕ ಮೇಳ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇವುಗಳ ಸಹಯೋಗದಲ್ಲಿ ದಿನಾಂಕ 24 ಮತ್ತು 25 ನವಂಬರ್ 2023 ರಂದು ಎರಡು ದಿನಗಳ ಕಾಲ ಸ್ಕೌಟ್ ಗೈಡ್ ,ಕಬ್ ಬುಲ್ ಬುಲ್ ಹಾಗೂ ರೋವರ್ ರೇಂಜರ್ ವಿದ್ಯಾರ್ಥಿಗಳ ವಾರ್ಷಿಕ ಮೇಳವನ್ನು...

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡೋತ್ಸವ

ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು, ಹಿರಿಯ ವಿದ್ಯಾರ್ಥಿ ಸಂಘ, ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ದಿನಾಂಕ 19/11/2023ರಂದು ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕ್ರೀಡೋತ್ಸವದ ಧ್ವಜಾರೋಹಣವನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಮಾವಿನಕಟ್ಟೆ ನಡೆಸಿಕೊಟ್ಟರು. ನಂತರ ಸಭಾ ಕಾರ್ಯಕ್ರಮ ನಡೆಯಿತು....

ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ.

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಸುಳ್ಯ ಉಪ ವಿಭಾಗ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗದ ಜನ ಸಂಪರ್ಕ ಸಭೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಮಂಗಳೂರು ವೃತ್ತದ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ರವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್....

ಉಬರಡ್ಕ : ಸೌಜನ್ಯ ಪರ ನ್ಯಾಯಕ್ಕಾಗಿ ಪ್ರತಿಭಟನಾ ಸಭೆಗೆ ಚಾಲನೆ

ಸೌಜನ್ಯ ಪರ ನ್ಯಾಯಕ್ಕಾಗಿ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಇದೀಗ ಚಾಲನೆ ದೊರೆತಿದ್ದು ಸಭೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ನಿವೃತ್ತ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ , ನ್ಯಾಯವಾದಿ ಮೋಹಿತ್ ಕುಮಾರ್ , ಸೌಜನ್ಯಳ ತಾಯಿ ಕುಸುಮಾವತಿ, ಚಂದ್ರ ಕೋಲ್ಚಾರು, ಕೆದಂಬಾಡಿ ವೆಂಕಟ್ರಮಣ ಗೌಡ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ....

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಅಕ್ಕಿ ಊಟ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಮಕ್ಕಳೇ ಶಾಲಾ ಅಂಗಳದಲ್ಲಿ ಬೆಳೆಸಿದ ಭತ್ತ ನಾಟಿ ಕೊಯ್ಲು ಮಾಡಿ ತುಳು ನಾಡಿನ ಸಂಸ್ಕೃತಿಯಲ್ಲಿ ಬಾಳೆಎಲೆಯಲ್ಲಿ 10 ಬಗೆಯ ಪದಾರ್ಥಗಳ ಜೊತೆ ಹೊಸ ಅಕ್ಕಿ ಉಂಡು ಸಂತಸಪಟ್ಟರು. ಶಾಲೆಯ ಬಾಗಿಲುಗಳಿಗೆ ಬೆಳಗ್ಗೆ ಮಾವಿನ ಎಲೆ ಕಟ್ಟಿ ನಂತರ ಮಧ್ಯಾಹ್ನ ಪೋಷಕರ ಜೊತೆಯಲ್ಲಿ ಪುದ್ವಾರ್ ಊಟ ಮಾಡಿ ನಮ್ಮ ಸಂಸ್ಕೃತಿ...

ಗುತ್ತಿಗಾರು : ಮಹಿಳೆ ಆತ್ಮಹತ್ಯೆ

ಗುತ್ತಿಗಾರು ಗ್ರಾಮದ ಕಮಿಲ ಬಳಿ ಮಹಿಳೆಯೊಬ್ಬರು ನೇಣು ಬಿಗಿದು ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ವರದಿಯಾಗಿದೆ.ಕಮಿಲದ ಸತೀಶ್ ಕೊಚ್ಚಿ ಎಂಬವರ ಪತ್ನಿ ಗೀತಾ ಎನ್ನುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
Loading posts...

All posts loaded

No more posts

error: Content is protected !!