- Friday
- June 26th, 2026
ಸುಳ್ಯ ಅರಂಬೂರು ಬಳಿಯ ಬಳಿಯಲ್ಲಿ ರಸ್ತೆ ಅಪಘಾತ ನಡೆದ ಕುರಿತು ವರದಿಯಾಗಿತ್ತು ಇದೀಗ ಗಂಭೀರವಾಗಿ ಗಾಯಗೊಂಡು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಮೇಶ್ವರ ಮೃತ್ಯುವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಲ್ಲಮೊಗ್ರದ ಇಬ್ಬರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಒದಗಿಬಂದಿದ್ದು ವಿಮಾನವೇರುವ ಸಂಭ್ರಮದಲ್ಲಿದ್ದಾರೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ "ಸಂಜೀವಿನೀ"ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ...
ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಕೆ.ವಿ.ಜಿ ಪ್ರೌಢಶಾಲೆಯಲ್ಲಿ ಫೆ.24 ರಂದು ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೀಲಾವತಿ ತಂಬಿನಡ್ಕ ನೂತನ ಅಧ್ಯಕ್ಷರಾಗಿ ಉದಯ ಶಿವಾಲ ಅವರನ್ನು ಆಯ್ಕೆ ಮಾಡಲಾಯಿತು....
ಕಲ್ಮಡ್ಕ ಕಾಚಿಲದಲ್ಲಿರುವ ಶ್ರೀರಾಮ ಜನರಲ್ ಸ್ಟೋರ್ ನವೀಕೃತಗೊಂಡು ಫೆ. 23 ಶುಕ್ರವಾರದಂದು ಶುಭಾರಂಭಗೊಂಡಿತು. ಹಿರಿಯ ಧಾರ್ಮಿಕ ಮುಖಂಡರಾದ ಕೆ ಎನ್ ಪರಮೇಶ್ವರಯ್ಯ ಕಾಚಿಲ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಯನ್ನು ನೆರೆವೇರಿಸಿದರು. ಬೆಳಿಗ್ಗೆ ಗಣಪತಿ ಹವನವನ್ನು ನಡೆಸುವ ಮೂಲಕ ಧಾರ್ಮಿಕ ವಿಧಿ ವಿಧಾನವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಮಾಲಕರಾದ ಶ್ರೀಮತಿ ಪುಷ್ಪಾವತಿ ವಾಸುದೇವ ಗೌಡ ಮತ್ತು ಮನೆಯವರು...
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಬೆಂಕಿ ಬಳಸಿ ಮತ್ತು ಬೆಂಕಿ ಬಳಸದೇ ಅಡುಗೆ ತಯಾರಿ ನಡೆಯಿತು. ಶಾಲೆಯ ಸ್ಕೌಟ್ಸ್ 28 ಮತ್ತು ಗೈಡ್ಸ್ 16 ವಿದ್ಯಾರ್ಥಿಗಳು ಭಾಗವಹಿಸಿದರು. ಗೌರವ ಉಪಸ್ಥಿತಿಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣ ಉಡುವೆಕೋಡಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ರುಕ್ಮಯ್ಯ ನಾಯ್ಕ, ಉಪಾಧ್ಯಕ್ಷರಾದ...
ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಫೆ 10 ರಂದು ಕೊಲ್ಲಮೊಗ್ರದಲ್ಲಿ ಜರುಗಿದ ಪತ್ರಕರ್ತರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಹಲವು ಬೇಡಿಕೆಗಳು ಅಲ್ಲಿ ಬಂದಿದ್ದು ಅದಕ್ಕೆ ಸಂಬಂಧಿಸಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಸಭಾ ಅಧ್ಯಕ್ಷರಾದ ಯು..ಟಿ ಖಾದರ್ ಅವರಿಗೆ ಶಾಸಕಿ ಭಾಗೀರಥಿ ಮುರಳ್ಯರವರ ಸಮ್ಮುಖದಲ್ಲಿ ಮನವಿ ನೀಡಲಾಯಿತು.ಈ...
ದೇಶದ ಸಮಗ್ರತೆಗೆ ಮತ್ತು ಭವಿಷ್ಯಕ್ಕೆ ಎಲ್ಲರೂ ಮಾತದಾನ ಮಾಡುವುದು ಬಹಳ ಮುಖ್ಯ ಎಂದು ಕೆ. ವಿ.ಜಿ.ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಅಭಿಪ್ರಾಯಪಟ್ಟರು. ಅವರು ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಮತ್ತು ತ್ರಿಲಿಂಗಿಗಳ ಹಕ್ಕು ರಕ್ಷಣಾ...
ಕಡಬ ಮುಖ್ಯ ರಸ್ತೆಯ ಹಳೇ ಸ್ಟೇಶನ್ ಹತ್ತಿರದ ಸುಶಾಂತಿ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಎಣ್ಮೂರು ಹಾಗೂ ಲಕ್ಷ್ಮೀಶ ಬೆಳ್ಳಾರೆ ಮಾಲಕತ್ವದಲ್ಲಿ ಶ್ರೀ ಮಹಾಲಕ್ಷ್ಮೀ ಸ್ಪೋರ್ಟ್ಸ್ ಆಂಡ್ ಸೈನ್ಸ್ ಮಳಿಗೆ ಫೆ.18ರಂದು ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ , ಪುತ್ತೂರು ವಲಯಾರಣ್ಯಾಧಿಕಾರಿ ಶ್ರೀ ಕಿರಣ್...
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿತು.ರಾತ್ರಿ ಆದಿ ಮೊಗೇರ್ಕಳರು...
ಮಡಪ್ಪಾಡಿ:ಯುವಕ ಮಂಡಲ ( ರಿ.) ಮಡಪ್ಪಾಡಿ ಆಶ್ರಯದಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 18ರವರೆಗೆ ಏಳು ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ನಡೆಯಲಿದೆ.ಶಿವಮೊಗ್ಗದ ಶ್ರೀ ಚಂದನ್. ಜಿ. ಮತ್ತು ಶ್ರೀ. ಮಂಜುನಾಥ್. ಎನ್.ರವರು ಚಿಕಿತ್ಸೆ ನೀಡಲಿದ್ದಾರೆ.ಈ ಶಿಬಿರದಲ್ಲಿ ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ,...
Loading posts...
All posts loaded
No more posts
