ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಕಡಬ ತಾಲೂಕಿನ ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ಬಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡೆಪ್ಪಾಜೆ ಫಾರ್ಮ್ ಹೌಸ್ ಮತ್ತು ನರ್ಸರಿ ಮರ್ದಾಳ ಇವರ ಸಹಯೋಗದಲ್ಲಿ...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣ ರಾವ್, ಶಾಲಾ ಸಂಚಾಲಕರಾದ ಶ್ರೀ ಪಿ ಜಿ ಎಸ್ ಎನ್ ಪ್ರಸಾದ್, ಶಾಲಾ ಮುಖ್ಯ ಗುರು ಉದಯ ಕುಮಾರ್ ರೈ ಎಸ್, ಶಾಲಾ ಎಸ್ಡಿಎಂಸಿ ,ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Ad Widget

ಕೋಟ ಶ್ರೀನಿವಾಸ್ ಪೂಜಾರಿ ಗೆಲುವು

ಉಡುಪಿ :ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ರವರು ಒಂದು ಲಕ್ಷದ ನಲುವತ್ತೆಲು ಸಾವಿರದ ಎಳುನೂರ ಅರುವತ್ತಾರು ಮತಗಳ ಅಂತರವನ್ನು ಕಾಯ್ದುಕೊಂಡು ಗೆಲುವಿನ ನಗೆ ಬೀರಿದು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ವಿರುದ್ದ ತಮ್ಮ ಗೆಲುವನ್ನು ಪಡೆದುಕೊಂಡರು .

ಕೊಂಬಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಿದಾನಂದ ಗೌಡ ನಿವೃತ್ತಿ

ಕಡಬ ತಾಲೂಕಿನ ಕೊಂಬಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಚಿದಾನಂದ ಗೌಡರವರು ಮೇ.31ರಂದು ನಿವೃತ್ತರಾದರು. ಕಡಬ ತಾಲೂಕಿನ ಕೊಂಬಾರು ಗ್ರಾಮದ ಶ್ರೀಯುತ ಶಿವಣ್ಣ ಗೌಡ ಹಾಗೂ ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿ...

ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಉದಯಕುಮಾರ ರೈ ಎಸ್

ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಮೂರ್ತಿಯವರ ವಯೋ ನಿವೃತ್ತಿಯಿಂದ ತೆರವಾದ ಸ್ಥಾನದ ಪ್ರಭಾರವನ್ನು, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನ ಹಾಗೂ ಆಡಳಿತ ಮಂಡಳಿಯ ಸೂಚನೆಯಂತೆ ವಿದ್ಯಾಬೋಧಿನೀ ಪ್ರೌಢಶಾಲೆಯ ಸಹಶಿಕ್ಷಕರಾದ ಉದಯಕುಮಾರ ರೈ ಎಸ್ ರವರು ವಹಿಸಿಕೊಂಡರು. ಈ ಸಂದರ್ಭ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕ ಪಿ ಜಿ ಎಸ್ ಎನ್ ಪ್ರಸಾದ್, ವಿದ್ಯಾಬೋಧಿನೀ...

ಅರಂತೋಡು : ಬೈಕ್ – ಕಾರು ಡಿಕ್ಕಿ – ಸವಾರ ಆಸ್ಪತ್ರೆಗೆ ದಾಖಲು

ಅರಂತೋಡು : ಸುಳ್ಯದ ಅರಂತೋಡು ಸೊಸೈಟಿ ಮುಂಭಾಗದಲ್ಲಿ ಇದೀಗ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ. ಬೈಕ್ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಆಗಮಿಸುತ್ತಿದ್ದು ಕಾರು ಸುಳ್ಯದಿಂದ ಮಡಿಕೇರಿ ಕಡೆಗೆ ಚಲಾಯಿಸಲಾಗುತ್ತಿತ್ತು ಗಾಯಗೊಂಡವರನ್ನು ಚೆಂಬು ಮೂಲದ ವ್ಯಕ್ತಿ ಎಂದು ತಿಳಿದುಬಂದಿದ್ದು ಇದೀಗ ಗಾಯಗೊಂಡ ವ್ಯಕ್ತಿಯನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಅಯ್ಯನಕಟ್ಟೆಯಲ್ಲಿ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಶುಭಾರಂಭ

ಅಯ್ಯನಕಟ್ಟೆಯಲ್ಲಿ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಮೇ.30ರಂದು ಶುಭಾರಂಭಗೊಂಡಿತು. ಬೆಳ್ಳಾರೆ ಕೆಪಿಎಸ್ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀನಾಥ್ ರೈ ದೋಳ್ತೋಡಿ ದೀಪ ಬೆಳಗುವ ಮೂಲಕ ಟ್ಯೂಷನ್ ಸೆಂಟರ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಸಂಕಪ್ಪ ರೈ ಕಳಂಜ, ಕಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವಿಪ್ರಸಾದ್ ರೈ ಕಳಂಜ, ಟ್ಯೂಷನ್ ಸೆಂಟರ್ ನ...

ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಮಕ್ಕಳಿಗೆ ಉಚಿತ ಡಾಕ್ಟರ್ ಕಿಟ್ ವಿತರಣೆ

ಅಯ್ಯನಕಟ್ಟೆಯ ಗೋಕುಲ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತವಾಗಿ 'ಡಾಕ್ಟರ್ ಕಿಟ್' ಗಳನ್ನು ಮೇ.26ರಂದು ವಿತರಿಸಲಾಯಿತು. ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಲು ಹಾಗೂ ಸಮಾಜಸೇವೆಯನ್ನು ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಲು...

ಪ್ರತಿಭಾ ಪುರಸ್ಕಾರ ಅರ್ಜಿಗೆ ಸುಳ್ಯ ಎನ್.ಎಸ್.ಯು.ಐ ವತಿಯಿಂದ ಚಾಲನೆ

2024 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ  75% ಗಿಂತ ಹೆಚ್ಚಿನ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಎನ್.ಎಸ್.ಯು.ಐ ಸುಳ್ಯ ವಿಧಾನಸಭಾ ಕ್ಷೇತ್ರ ವತಿಯಿಂದ ಪ್ರತಿಭಾ ಪುರಸ್ಕಾರ ಸನ್ಮಾನ ಹಾಗು ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ನಡೆಯಲಿಕ್ಕಿದೆ. ವಿಧ್ಯಾರ್ಥಿಗಳು ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರಬೇಕು. ಅರ್ಜಿ ಸಲಿಸುವ ಕೊನೆಯ ದಿನಾಂಕ ಜೂನ್ 15 2024...

ಅಜ್ಜಾವರ:ರಂಗೋಲಿ ಮಕ್ಕಳ ಬೇಸಿಗೆ ಶಿಬಿರಕ್ಕೆ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ.

ಅಜ್ಜಾವರ:ಚೈತ್ರ ಯುವತಿ ಮಂಡಲ,ಪ್ರತಾಪ ಯುವಕ ಮಂಡಲ ಅಜ್ಜಾವರ ಮತ್ತು ಜೇಸಿಐ ಸುಳ್ಯ ಪಯಸ್ವಿನಿ ಇವುಗಳ ಸoಯುಕ್ತ ಆಶ್ರಯದಲ್ಲಿ 2ನೇ ವರ್ಷದ "ರಂಗೋಲಿ" ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನವಾದ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ ನೀಡಿ ಶುಭ ಹಾರೈಸಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಚೈತ್ರ ಯುವತಿ...
Loading posts...

All posts loaded

No more posts

error: Content is protected !!