- Thursday
- June 25th, 2026
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರಂತೋಡು ಎಲ್ಪುಕಜೆ ಎಂಬಲ್ಲಿ ರಾತ್ರಿ ಸುಮಾರು 3 ಗಂಟೆ ವೇಳೆಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. 5 ಗಂಟೆವರೆಗೆ ಒಂದು ಕಿಲೋಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದು ಸ್ಥಳಕ್ಕೆ ಬಂದ ದೀಪಕ್ ಎಲೆಕ್ಟ್ರಿಕಲ್ ನವರು ಕ್ರೇನ್ ಬಳಸಿ ಮರ ತೆರವು ಮಾಡಿ ಸಂಚಾರ ಸುಗಮಗೊಳಿಸಿದರು....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ 2024-25ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಇತ್ತೀಚೆಗೆ ನಡೆಯಿತು. ಸ್ಪರ್ಧಾ ಕಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು, ಉಪಮುಖ್ಯಮಂತ್ರಿ ಸ್ಥಾನಕ್ಕೆ ಆರು ಮಂದಿ ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಶ್ರೀ ಮಹೇಶ್ ಕೆ ಕೆ, ಶ್ರೀಮತಿ ಸುಮನ, ಶ್ರೀಮತಿ ಮೋಕ್ಷ ಸಹಕರಿಸಿದರು. ಅಂತಿಮವಾಗಿ ಮುಖ್ಯಮಂತ್ರಿಯಾಗಿ...
ಸುಳ್ಯ: ಕುರುಂಜಿ ಗುಡ್ಡೆ ನಿವಾಸಿ ಕುಮಾರ ಎಂಬುವವರು ಜೂನ್ ೨೩ ರಂದು ನಾಪತ್ತೆಯಾಗಿದ್ದು ಅವರ ಚಪ್ಪಳಿಯು ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾಗಿತ್ತು ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ನಿನ್ನೆ ಹುಡುಕಾಟ ಆರಂಬಿಸಿದ್ದರು ಆದರೆ ಇಂದು ಮುಂಜಾನೆ ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಅಚ್ಚು ಪ್ರಗತಿ ತಂಡವು ಮತ್ತೆ ಹುಡುಕಾಟ ಆರಂಬಿಸಿದ್ದರು ಇದೀಗ ಪೋಲೀಸ್ , ಅಗ್ನಿಶಾಮಕದಳ...
ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆಶ್ರೀ ವಿಶ್ವನಾಥ ಅತ್ಯಾಡಿ ಮತ್ತು ಸಹೋದರರು ಲೇಖನಿ ಸಾಮಗ್ರಿ ಹಾಗೂ ಬರವಣಿಗೆ ಪುಸ್ತಕಗಳನ್ನು ಎಲ್ಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಆಗಿರುವ ಇವರು ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆ ಉತ್ತಮವಾಗಬೇಕು ಎಂಬ ಸದುದ್ದೇಶದಿಂದ ಹಲವಾರು ವರ್ಷಗಳಿಂದ ಇಂತಹ ಕೊಡುಗೆಗಳನ್ನು ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಶಾಲೆಯಲ್ಲಿ ನಡೆಯುವ ವಿಶೇಷ...
ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿನ 2024-25 ನೇ ಸಾಲಿನ ಮಂತ್ರಿಮಂಡಲವನ್ನು ಇತ್ತಿಚೆಗೆ ರಚಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಶಾಲಾ ಮುಖ್ಯಮಂತ್ರಿಯಾಗಿ 10ನೇ ತರಗತಿಯ ಮನ್ವಿತ್ ಎ.ಜೆ ಮತ್ತು ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಅನ್ವಿತಾ ಆಯ್ಕೆಯಾದರು. ಉಳಿದಂತೆ ಮನಿಷಾ.ಪಿ, ಮನೀಶ್ ಕೆ.ಜೆ ,ಮೇಘಾ.ಎ, ಉಜ್ವಲ್,ರೋಹನ್.ಪಿ.ಸಾಕ್ಷಿ.ಕೆ, ,ಹಾರ್ದಿಕ್, ಮನ್ವಿತಾ, ಗಗನ್.ಎ,ಪೂಜಾ, ಮಾನ್ಯ ,ಯಜ್ಜೇಶ್, ಅಭಿಷೇಕ್,ಹರ್ಷಿಣಿ, ಸಂತೋಷ್,ರಶ್ಮಿ.ಎ.ಆರ್.,...
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ 32 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೃಷ್ಣಮೂರ್ತಿ ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಎಸ್ಡಿಎಂಸಿ ವತಿಯಿಂದ ಅಭಿನಂದನೆ-ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ರಾವ್ ಯು ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ವಿದ್ವಾನ್ ಮೌನೇಶ್...
ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಒಂದು ದಿನದ ಶಿಕ್ಷಕರ ಕಾರ್ಯಗಾರವು ಜೂನ್ 23 ರಂದು ನಡೆಯಿತು. "ಫ್ರೆಶ್ ಅಪ್ - ಬಿಲ್ಡ್ ಆಸ್ ಎ ಸ್ಮಾರ್ಟ್ ಟೀಚರ್" ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಅಧ್ಯಕ್ಷರಾದ ಯು ಹೆಚ್ ಅಬೂಬಕರ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ತರಬೇತುದಾರರಾದ...
ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ "ಸಂಕಲ್ಪ" ತಂಡ ಹಾಗೂ ಡಾ.ಕಿಶನ್ ರಾವ್ ಬಾಳಿಲ ಇವರು ಜೊತೆಯಾಗಿ ಶಾಲೆಯ ಅಗತ್ಯ ಸಾಮಾಗ್ರಿಗಳನ್ನು ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಚಿಕ್ಕಬಳ್ಳಾಪುರದ ಸಂಕಲ್ಪ ಬಳಗವು ಚಿಕ್ಕಬಳ್ಳಾಪುರದ ಹತ್ತಾರು ಗ್ರಾಮೀಣ ಶಾಲೆಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದೆ. ಈ ತಂಡದಲ್ಲಿ ವೈದ್ಯರುಗಳಾದ ಡಾ.ಭಾಸ್ಕರ ಬೆಂಗಳೂರು,...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಗ್ರಾಮ ಪಂಚಾಯತ್ ಗುತ್ತಿಗಾರು ಅನುಮತಿಯೊಂದಿಗೆ, ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಚಾರ್ಮಾತ ಇವರ ಮೇಲುಸ್ತುವಾರಿಯೊಂದಿಗೆ ಮಾಡಲಾಯಿತು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಮೊದಲಿಗೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಸ್ ಡಿ ಎಂ ಸಿ ರಚನೆ...
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಕರಾಟೆ ತರಬೇತಿ ಉದ್ಘಾಟನೆಗೊಂಡಿತು. ವಿದ್ಯಾಸಂಸ್ಥೆಯ ಅದ್ಯಕ್ಷರಾದ ರಾಧಾಕೃಷ್ಣ ರಾವ್ ಯು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್ ದೀಪ ಬೆಳಗಿಸಿ ತರಬೇತಿಯನ್ನು ಉದ್ಘಾಟಿಸಿದರು. ಪ್ರೌಢ ಶಾಲಾ ಮುಖ್ಯಗುರು ಯಶೋಧರ ಎನ್ ಪ್ರಾಸ್ತಾವಿಕ ಮಾತನ್ನಾಡಿದರು. ಶಾಲಾ ಮುಖ್ಯಗುರು ಉದಯ ಕುಮಾರ್ ರೈ ಎಸ್...
Loading posts...
All posts loaded
No more posts
