ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಕುರಿತು ಇಬ್ರಾಹಿಂ ಕಲೀಲ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಪೋಟಕ ಬರಹ – ಇಬ್ಬರು ವ್ಯಕ್ತಿಗಳ ಹಾಗೂ ಮಸೀದಿಯ ಹೆಸರು ಬಂದದ್ದೇಕೆ ?

ಆಗಸ್ಟ್ 2022 ರಲ್ಲಿ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿ ಇಡೀ ಸರಕಾರವನ್ನು ಮತ್ತು ಕೇಂದ್ರ ನಾಯಕರನ್ನು ತಿರುಗಿ ನೋಡುವಂತೆ ಮಾಡಿದ ಅತೀ ಭೀಕರ ಕೊಲೆಯ ಬಗ್ಗೆ ಇದೀಗ ವ್ಯಕ್ತಿಯೋರ್ವರ ಪೋಸ್ಟ್ ಭಯ ಬೀಳಿಸುವಂತೆ ಮಾಡಿದೆ. ಇಬ್ರಾಹಿಂ ಕಲೀಲ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮಸೀದಿಯ ಸಮಿತಿಯು ಬೆಳ್ಳಾರೆ ಪೋಲಿಸರಿಗೆ ದೂರು ನೀಡಿದ್ದು ಇದೀಗ...

ಮರ್ಕಂಜ: ಮಿತ್ತಡ್ಕ ನಾಪತ್ತೆಯಾಗಿದ್ದ ಶೋಭಾಲತಾರವರ ಮೃತದೇಹ ಬಾವಿಯಲ್ಲಿ ಪತ್ತೆ

ಮರ್ಕಂಜ ಗ್ರಾಮ ಮಿತ್ತಡ್ಕ ನಿವಾಸಿ ಮೋಹನರವರ ಪತ್ನಿ ಶೋಭಾಲತಾ ಎಂಬವರು ಸೆ.೨೪ರಂದು ನಾಪತ್ತೆಯಾದ ಹಿನ್ನಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿಯನ್ನು ಅಗೆದು ನೋಡುವ ಕಾರ್ಯಾಚರಣೆ ಸೆ.೨೭ರಂದು ಆರಂಭವಾಗಿದ್ದು, ಇದೀಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಶೋಭಾಲತಾರವರು ಸೆ.೨೪ರ ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನದಿಂದ ಅವರ ಮನೆಯ ಬಳಿಯ ಬಾವಿಯಲ್ಲಿ ಹುಡುಕಲಾಗಿತ್ತು....
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿಶ್ವ ಹೃದಯ ದಿನಾಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಯೂತ್ ರೆಡ್ ಕ್ರಾಸ್ ಘಟಕವು ದಿನಾಂಕ 28/9/2024 ರಂದು 'ವಿಶ್ವ ಹೃದಯ ದಿನಾಚರಣೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಿನೇಶ್ ಪಿ ಟಿ ವಹಿಸಿದರು, ಮುಖ್ಯ ಅತಿಥಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯದ ವೈದ್ಯಾಧಿಕಾರಿ ಡಾ ತ್ರಿಮೂರ್ತಿ ಅವರು...

ಬೆಳ್ಳಾರೆ: ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ )ಸುಳ್ಯ ತಾಲೂಕು ಬೆಳ್ಳಾರೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ( ರಿ )ಬೆಳ್ಳಾರೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಡಾ. ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ದಿನಾಂಕ 27. 9 .2024ರಂದು ಡಾ. ಶಿವರಾಮ ಕಾರಂತ ಕಾಲೇಜು ಬೆಳ್ಳಾರೆ...

ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟ- ಗುತ್ತಿಗಾರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ದ್ವಿತೀಯ ಸ್ಥಾನ

ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ದ.ಕ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ಹಾಗೂ ಬಾಲಕಿಯರ ತಂಡವು ಭಾಗವಹಿಸಿ ಎರಡು ತಂಡಗಳು ದ್ವಿತೀಯ ಸ್ಥಾನವನ್ನು...

ಕೆ.ವಿ.ಜಿ ಇಂಜಿನಿಯರಿoಗ್‌ ಕಾಲೇಜಿನಲ್ಲಿ ‘ಟೆಕ್ನೋವೀಕ್ 2024’-ಸಿವಿಲ್ ಇಂಜಿನಿಯರಿoಗ್‌ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ

ಕೆ.ವಿ.ಜಿ. ಇಂಜಿನಿಯರಿoಗ್‌ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿoಗ್ ವಿಭಾಗದ ವಿದ್ಯಾರ್ಥಿಗಳು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಉಪನ್ಯಾಸವು ದಿನಾಂಕ: 27-09-2024ರಂದು ಕೆ.ವಿ.ಜಿ.ಸಿ.ಇ. ಸಭಾಂಗಣದಲ್ಲಿ ನಡೆಯಿತು. ಎ.ಸಿ.ಸಿ.ಇ(ಐ) ಮಂಗಳೂರಿನ “ಟೆಕ್ನೋವೀಕ್ 2024” ಕಾರ್ಯಕ್ರಮದ ಅಡಿಯಲ್ಲಿ ಎ.ಸಿ.ಇ, ಸಿವಿಲ್ ಇಂಜಿನಿಯರಿoಗ್ ವಿಭಾಗ, ಕೆ.ವಿ.ಜಿ.ಸಿ.ಇ. ಇದರ ಸಹಯೋಗದಲ್ಲಿ ಸಿವಿಲ್ ಇಂಜಿನಿಯರ್‌ಡಾ. ಹೆಚ್. ಅಜಿತ್ ಹೆಬ್ಬಾರ್, ಇವರು “SustainableHorizons in Civil Engineering”ಎಂಬ ವಿಷಯದಲ್ಲಿಉಪನ್ಯಾಸ...

ಕಲ್ಲುಗುಂಡಿ ಶ್ರೀ ಅಮ್ಮನ್ ಕ್ರೆಡಿಟ್ ಕೋ – ಓಪರೇಟಿವ್‌ ಸೊಸೈಟಿ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ

ಕಲ್ಲುಗುಂಡಿ ಶ್ರೀ ಅಮ್ಮನ್ ಕ್ರೆಡಿಟ್ ಕೋ ಓಪರೇಟಿವ್ (ರಿ)ಸೊಸೈಟಿ ವಾರ್ಷಿಕ ಮಹಾಸಭೆಯು ಸೆ 22 ರಂದು ನಿರ್ದೇಶಕರಾದ ರಾಜೇಶ್ವರಿ ಕೃಷ್ಣ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಹಿಂದಿನದ ವರ್ಷದ ಖರ್ಚು – ವೆಚ್ಚ ಮತ್ತು ಆದಾಯದ ಬಗ್ಗೆ ಸೊಸೈಟಿಯ ವ್ಯವಸ್ಥಾಪಕರಾದ ಶಿವ ಪೆರುಮಾಳ್ ಮಂಡನೆ ಮಾಡಿದರು .ಬಳಿಕ ಸಂಘವು ಒಟ್ಟು 89 ರೂ ಲಕ್ಷ ವ್ಯವಹಾರ ನಡೆಸಿ,...

ಸುಳ್ಯಕ್ಕೆ ನೂತನ ತಹಶೀಲ್ದಾರ್ ಆಗಮನ

ಸುಳ್ಯ ತಾಲೂಕು ನೂತನ ತಹಶೀಲ್ದಾರ್ ಆಗಿ ಕೆ ಎ ಎಸ್ ಅಧಿಕಾರಿ ಅರವಿಂದ್ ಕೆ ಎಂ ಆಗಮಿಸಿದ್ದಾರೆ . ಇವರು ಸುಳ್ಯ ತಹಶೀಲ್ದಾರ್ ಆಗಿ ಪ್ರಭಾರ ಕರ್ತವ್ಯ ನಿರ್ವಹಿಸಲಿದ್ದು, ಈ ಹಿಂದೆ ಮಂಗಳೂರು ಎ ಸಿ ಕಛೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು ಮೂಲತಃ ಚಿತ್ರದುರ್ಗದವರಾಗಿದ್ದಾರೆ.

ಗುತ್ತಿಗಾರು : ಸೆ.28 ರಂದು ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ

ಲಯನ್ಸ್ ಕ್ಲಬ್ ಗುತ್ತಿಗಾರು ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಸಹಯೋಗದಲ್ಲಿ ಸೆ.28 ಶನಿವಾರದಂದು ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಗುತ್ತಿಗಾರಿನ ಲಯನ್ಸ್ ಸಭಾಭವನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ ನಡೆಯಲಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾಗುವ ಎಲ್ಲಾ ದಾಖಲೆಗಳ ಮೂಲ...

ಹರಿಹರ ಪಳ್ಳತ್ತಡ್ಕ : ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ನೇಜಿ ನೆಟ್ಟ ಸ್ಥಳೀಯರು- ಸ್ಥಳೀಯರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಳ್ಳತ್ತಡ್ಕ ಗ್ರಾಮದ ಕಿರಿಭಾಗದ ಯೋಗೀಶ್ ಕಿರಿಭಾಗ ಎಂಬುವವರ ಗದ್ದೆಯಲ್ಲಿ ಇತ್ತೀಚೆಗೆ ಧ್ವನಿ, ಬೆಳಕು ಮತ್ತು ಶಾಮಿಯಾನ ಸಂಘದವರು ಹಾಗೂ ಬಾಳುಗೋಡು ವಿಶ್ವ ಯುವಕ ಮಂಡಲದವರು ಪ್ರತ್ಯೇಕವಾಗಿ ಕೆಸರುಗದ್ದೆ ಕ್ರೀಡಾಕೂಟಗಳನ್ನು ನಡೆಸಿದ್ದರು.ಇದೀಗ ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನೇಜಿ ನೆಡಲಾಗಿದ್ದು, ಈ ಮಾದರಿ ಕಾರ್ಯಕ್ಕೆ ವ್ಯಾಪಕ...
Loading posts...

All posts loaded

No more posts

error: Content is protected !!