- Friday
- November 22nd, 2024
ಸುಬ್ರಹ್ಮಣ್ಯ ನ.14: ಮಕ್ಕಳ ದಿನಾಚರಣೆ ಪ್ರಯುಕ್ತ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಪುಸ್ತಕ ಕ್ರಯನ್ಸ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲಿಜನ್ ನ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ ನೀಡಿದ ಕೊಡುಗೆಯನ್ನು ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು, ಕಾರ್ಯದರ್ಶಿ...
ಪೆರಾಜೆ ಬಿಳಿಯಾರು ನಿವಾಸಿ ಸೀತಾರಾಮ ಎಂಬವರ ಪುತ್ರ ಪುನೀತ್ (ಗಣೇಶ್) (25)ಎಂಬ ಯವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.13 ರಂದು ರಾತ್ರಿ ವರದಿಯಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ,ತಾಯಿ ಹಾಗೂ ಸಹೋದರ ದಿನೇಶ ರನ್ನು ಅಗಲಿದ್ದಾರೆ.
ಪೆರಾಜೆ ಬಿಳಿಯಾರು ಬಳಿ 26 ವರುಷದ ಪುನೀತ್ (ಗಣೇಶ್) ಎಂಬ ಯವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ
ಗುತ್ತಿಗಾರಿನ ಭಾರತ್ ಪೆಟ್ರೋಲಿಯಂ ಪಂಪ್ ಎದುರುಗಡೆ ಚಿಕನ್ ಪ್ಯಾರಡೈಸ್ ಹೋಲ್ ಸೇಲ್ ಸೆಂಟರ್ ಇಂದು ಶುಭಾರಂಭಗೊಂಡಿತು. ಬ್ರಾಯ್ಡರ್ ಕೋಳಿ ಹಾಗೂ ಮಾಂಸ ಮಿತದರದಲ್ಲಿ ಲಭ್ಯ. ಟೈಸನ್, ಗಿರಿರಾಜ, ಊರುಕೋಳಿ ಹಾಗೂ ಹಂದಿ ಮಾಂಸ ದೊರೆಯುತ್ತದೆ. ಶುಭಾರಂಭದ ಪ್ರಯುಕ್ತ ಇಡಿ ಕೋಳಿ ಕೆ.ಜಿ.ಗೆ 125 ಹಾಗೂ ಮಾಂಸ ಕೆ.ಜಿ. ಗೆ ರೂ 175 ದರದಲ್ಲಿ ಲಭ್ಯ ಎಂದು...
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಜಯಶ್ರೀ ಶಿವರಾಮ ಚಾಂತಾಳ ನ.11 ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ನಿರ್ಧಾರದಂತೆ ಅಧ್ಯಕ್ಷ ಸ್ಥಾನಕ್ಕೆ ಒಂದು ಕಾಲು ವರ್ಷ ಜಯಶ್ರೀ ಚಾಂತಾಳ ಹಾಗೂ ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನ ಮೋಹಿನಿ ಯವರಿಗೆ ನೀಡುವುದೆಂದು ತೀರ್ಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಜಯಶ್ರೀ ಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೊರಂಗಲ್ಲು ಬಸ್ ನಿಲ್ದಾಣದ ಅವ್ಯವಸ್ಥೆ ಅಮರ ಸುದ್ದಿ ವೆಬ್ಸೈಟ್ ನಲ್ಲಿ ವಾರದ ಹಿಂದೆ ವರದಿ ಪ್ರಕಟಿಸಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಬಸ್ ನಿಲ್ದಾಣದ ಸುತ್ತಲಿನ ಪೊದೆ ಕಡಿದು ಸ್ವಚ್ಚಗೊಳಿಸಲಾಗಿದೆ. ಬಸ್ ನಿಲ್ದಾಣದ ಒಳಗೆ ಕಟ್ಟಿಗೆ ದಾಸ್ತಾನು ಮಾಡಲಾಗಿದ್ದನ್ನು ಸ್ಥಳೀಯಾಡಳಿತ ತೆರವುಗೊಳಿಸಿದೆ.
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ(ರಿ.) ಸುಳ್ಯ 2024, ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ(ರಿ.) ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು ಮತ್ತು ಸುಬ್ರಹ್ಮಣ್ಯ ಇವುಗಳ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ...
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ರಾಜ್ಯೊತ್ಸವ- ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಸಮಾರಂಭ ನ.12 ರಂದು ಸುಳ್ಯದ ಹಳೆಗೇಟಿನ ಶಿವಕೃಪಾ ನಿಲಯದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ...
ಕಸ್ತೂರಿ ರಂಗನ್ ವರದಿ ವಿರೋಧಿಸಿ, ಗಡಿ ಗುರುತು ಹಾಗೂ ಜಂಟಿ ಸರ್ವೇ ನಡೆಸಬೇಕು ಎನ್ನುವ 7 ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಗುಂಡ್ಯ ದಲ್ಲಿ ನ.15 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಡೆಯಲಿರುವ ಪ್ರತಿಭಟನೆಗೆ ಈಗಾಗಲೇ ಹಲವಾರು ಸಂಘಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಇದೀಗ ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ...
ಕಸ್ತೂರಿ ರಂಗನ್ ವರದಿ ವಿರೋಧಿಸಿ, ಗಡಿ ಗುರುತು ಹಾಗೂ ಜಂಟಿ ಸರ್ವೇ ನಡೆಸಬೇಕು ಎನ್ನುವ 7 ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಗುಂಡ್ಯ ದಲ್ಲಿ ನ.15 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಡೆಯಲಿರುವ ಪ್ರತಿಭಟನೆಗೆ ಈಗಾಗಲೇ ಹಲವಾರು ಸಂಘಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಇದೀಗ ಈ ಪ್ರತಿಭಟನೆಗೆ ಸುಬ್ರಹ್ಮಣ್ಯ ವಲಯ ಜನಜಾಗೃತಿ ವೇದಿಕೆಯ ಸಂಪೂರ್ಣ ಬೆಂಬಲ...
Loading posts...
All posts loaded
No more posts