Ad Widget

ಕೊಲ್ಲಮೊಗ್ರು : ಬಂಗ್ಲೆಗುಡ್ಡೆ ಶಾಲೆಯಲ್ಲೊಂದು ಸ್ವಾಮಿನಿಷ್ಠೆಯ ಶ್ವಾನ…

✍️ಉಲ್ಲಾಸ್ ಕಜ್ಜೋಡಿ“ಶ್ವಾನ” ಅಂದರೆ ನಾಯಿಗಳಿಗೆ ಇರುವಷ್ಟು ಬುದ್ಧಿಶಕ್ತಿ ಹಾಗೂ ಸ್ವಾಮಿನಿಷ್ಠೆ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ ಎಂದು ಹೇಳಬಹುದು. ಏಕೆಂದರೆ ನಾಯಿಗಳಿಗೆ ನಾವು ಒಂದು ಹೊತ್ತು ಆಹಾರ ನೀಡಿದರೂ ಕೂಡ ಅವುಗಳು ನಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತವೆ. ಪ್ರತೀ ಬಾರಿ ಅವುಗಳು ನಮ್ಮನ್ನು ಕಂಡಾಗಲೂ ಅವರದ್ದೇ ಆದ ರೀತಿಯಲ್ಲಿ ಪ್ರೀತಿಯನ್ನು ತೋರುತ್ತವೆ. ಆದ್ದರಿಂದ ಸ್ವಾಮಿನಿಷ್ಠೆ ಅಥವಾ ನಿಯತ್ತಿಗೆ...

ಸೇವಾಜೆ : ವ್ಯಕ್ತಿ ಕಾಣೆ – ದೂರು ದಾಖಲು

ದೇವಚಳ್ಳ ಗ್ರಾಮದ ಸೇವಾಜೆ ಬೆಳ್ಯಪ್ಪ (75)ಎಂಬವರು ಸೆ.9 ರಂದು ಸಂಜೆ 3 ಗಂಟೆಯಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಸುಬ್ರಹ್ಮಣ್ಯ ರವರು ತಿಳಿಸಿದ್ದಾರೆ. ಯಾರಿಗಾದರೂ ಇವರ ಮಾಹಿತಿ ಸಿಕ್ಕಿದ್ದಲ್ಲಿ ದೂರವಾಣಿ 9036147826 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
Ad Widget

ನಾಳೆ ಸುಳ್ಯದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ  ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪ್ಪೋ, ತೊಡಿಕಾನ, ಕೊಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಸೆ.11 ಬುಧವಾರದಂದು ಬೆಳಿಗ್ಗೆ 10.00 ರಿಂದ ಸಾಯಂಕಾಲ...

ಅ.12: ನಿಂತಿಕಲ್ಲು ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯಿಂದ ಲಕ್ಕೀ ಡ್ರಾ ಸ್ಕೀಮ್ ಆರಂಭ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯು ವಿನೂತನ ಆಫರ್ ಮೂಲಕ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದ್ದು, ಇದೀಗ ಸತತ 6ನೇ ಬಾರಿಗೆ 'ಲಕ್ಕೀ ಡ್ರಾ' ಎಂಬ ವಿನೂತನ ಸ್ಕೀಮ್ ಆರಂಭಿಸುತ್ತಿದೆ. ಈ ಯೋಜನೆಯು ಅ.12ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಟಿ.ವಿ.ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್...

ಒಂದೇ ಒಂದು ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡದ ಸರಕಾರ ಅಂದರೆ ಸಿದ್ಧರಾಮಯ್ಯ ಸರಕಾರ – ಬ್ರಿಜೇಶ್ ಚೌಟ

ಅಧಿಕಾರಿಗಳ ಸಭೆ ನಡೆಸುವುದರಲ್ಲೆ ಕಾಲ ಕಳೆಯುತ್ತಿರುವ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಜನತೆ, ಕಾರ್ಯಕರ್ತರು - ಚೌಟ ಲೋಕಸಭಾ ಚುನಾವಣೆಯಲ್ಲಿ ನೋಟ ಅಭಿಯಾನದಾರರಿಗೆ ಟಕ್ಕರ್ ಯಾವುದೇ ಅನುದಾನ ನೀಡದೇ ಗುದ್ದಲಿ ಪೂಜೆ ಮಾಡದ ಸರಕಾರ ಎಂದರೇ ಅದು ಸಿದ್ಧರಾಮಯ್ಯ ಸರಕಾರ ಎಂದು ಕಾಂಗ್ರೆಸ್ ವಿರುದ್ದ ಸಂಸದ ಕ್ಯಾ ಬ್ರಿಜೇಶ್ ಚೌಟ ಕಿಡಿಕಾರಿದರು.ಅವರು ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾರ್ಯಕರ್ತರನ್ನು...

ಸುಳ್ಯ : ಬಿಜೆಪಿ ವಿಶೇಷ ಕಾರ್ಯಕಾರಣಿ ಉದ್ಘಾಟನೆ – ಶಾಸಕರು, ಸಂಸದರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಭಾಗಿ

ಸುಳ್ಯ : ಸುಳ್ಯ ಬಿಜೆಪಿ ಮಂಡಲ ಸಮಿತಿ ವಿಶೇಷ ಕಾರ್ಯಕಾರಿಣಿ ಸಭೆಯು ಸುಳ್ಯ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು. ವಿಶೇಷ ಕಾರ್ಯಕಾರಿ ಸಭೆಯನ್ನು ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ದೀಪ ಬೆಳಗಿ ಉದ್ಘಾಟಿಸಿದರು.   ಸಭಾ ವೇದಿಕೆಯಲ್ಲಿ ಸಂಸದರಾದ ಕ್ಯಾ ಬ್ರಿಜೇಶ್ ಚೌಟ , ಶಾಸಕಿ ಭಾಗೀರಥಿ ಮುರುಳ್ಯ , ರವೀಂದ್ರ...

ಪೇರಡ್ಕ :  ಜುಮಾ ಮಸ್ಜಿದ್ ಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಕುಡಿಯುವ ನೀರಿನ ಪಿಲ್ಟರ್ ಕೊಡುಗೆ

ಪೇರಡ್ಕ ಜುಮಾ ಮಸೀದಿಗೆ ಪೇರಡ್ಕ ಜಮಾಯತ್ ದುಬೈ ಸಮಿತಿಯ ಅಧ್ಯಕ್ಷರು ಅನಿವಾಸಿ ಉದ್ಯಮಿಗಳಾದ ಪಿ.ಎಂ.ರಹೀಮ್ ಪೇರಡ್ಕ ಕೊಡುಗೆಯಾಗಿ ನೀಡಿದ ಕಂಪ್ಯೂಟರ್,ಪ್ರಿಂಟರ್,ಕುಡಿಯುವ ನೀರಿನ ವ್ಯವಸ್ಥೆಯನ್ನು ಅಲ್ ಹಾಜ್ ಸಯ್ಯದ್ ಜೈನುಲ್ ಅಭಿದೀನ್ ತಂಗಳ್ ಕುಂನ್ನುಂಗೈ ದುಗ್ಗಲಡ್ಕ ಉದ್ಘಾಟನೆ ಮಾಡಿ,ಕೊಡುಗೆ ನೀಡಿದ ರಹೀಮ್ ಪೇರಡ್ಕರವರ ಕುಟುಂಬಕ್ಕೆ ವಿಶೇಷ ಪ್ರಾರ್ಥನೆ ಮಾಡಿ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಜುಮಾ ಮಸೀದಿ...

ವಳಲಂಬೆ : ಅದ್ದೂರಿಯಾಗಿ ನಡೆದ ಗಣೇಶೋತ್ಸವ – ಕುಣಿತ ಭಜನೆ ಹಾಗೂ ಡಿಜೆ ಸದ್ದಿನ ಸಂಭ್ರಮದೊಂದಿಗೆ ಸಾಗಿದ ಶೋಭಾಯಾತ್ರೆ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವು ಎರಡು ದಿನಗಳ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ನಡೆದು ಸೆ.08 ರಂದು ಅದ್ದೂರಿ ಶೋಭಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಸೆ. 07 ರಂದು ಗಣಪತಿ ಪ್ರತಿಷ್ಠೆಯೊಂದಿಗೆ ಆರಂಭಗೊಂಡು ಸಾಮೂಹಿಕ ಗಣಪತಿ ಹವನ, ಅಕ್ಷರಾಭ್ಯಾಸ...

ಕುಮಾರಧಾರ ನದಿ ಬದಿ ಹಾಗೂ ಕುಲ್ಕುಂದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ, ಸೆ. 7 : ಸುಬ್ರಹ್ಮಣ್ಯ ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜಂಟಿಯಾಗಿ ಇಂದು ರವಿವಾರ ಕುಮಾರಧಾರ ಹಾಗೂ ಕುಲ್ಕುಂದ ರಸ್ತೆ ಬದಿಗಳಲ್ಲಿ ಇದ್ದ ತ್ಯಾಜ್ಯ ವಸ್ತುಗಳು, ಕಸ-ಕಡ್ಡಿಗಳು, ಪ್ಲಾಸ್ಟಿಕ್ ಇತ್ಯಾದಿಗಳನ್ನು ಶೇಖರಿಸಿ ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಸೀನಿಯರ್...

ನಾಲ್ಕೂರು : ಅನಾರೋಗ್ಯದಿಂದ ಮಹಿಳೆ ಮೃತ್ಯು

ನಾಲ್ಕೂರು ಗ್ರಾಮದ ಬಳ್ಳಡ್ಕ ಪ್ರಶಾಂತ್ ಎಂಬವರ ಪತ್ನಿ ಸಂಧ್ಯಾ(29) ಅಲ್ಪ ಕಾಲದ ಅಸೌಖ್ಯದಿಂದ ಸೆ.7ರಂದು ನಿಧನರಾದರು. ಮೃತರು ಪತಿ, ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!