Ad Widget

ಸುಳ್ಯದಲ್ಲಿ ತೀಯ ಸಮಾಜದ ವತಿಯಿಂದ 3ನೇ ವರ್ಷದ ಓಣಂ ಆಚರಣೆ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಹೆಣ್ಣು ಮಕ್ಕಳ ಪಾತ್ರ ಹೆಚ್ಚಿದೆ – ಅರವಿಂದ್ ಬೋಳಾರ್

https://youtu.be/McQn4fMHvx8?si=Gt39zNmMv76MjAhx ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಹಾಗೂ ವಿವಿಧ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಅದ್ದೂರಿಯಾಗಿ ಮೂರನೇ ವರ್ಷದ ಓಣಂ ಆಚರಣೆಯು ಸೆಪ್ಟೆಂಬರ್ 16 ರಂದು ಗಿರಿದರ್ಶಿನಿ ಮರಾಠಿ ಸಮಾಜ ಮಂದಿರ ಅಂಬೆಟಡ್ಕ ದಲ್ಲಿ ನಡೆಯಿತು. ಓಣಂ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಞ್ಞರಾಮನ್ ಉದ್ಘಾಟಿಸಿದರು ಬಳಿಕ ಮಕ್ಕಳು, ಪುರುಷ, ಮಹಿಳೆಯರಿಗೆ ಪ್ರತ್ಯೇಕವಾಗಿ ಆಟೋಟ ಸ್ಪರ್ಧೆಗಳು...

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಪುಟಾಣಿಗಳು, ಶಿಕ್ಷಕರು ಹಾಗೂ ಪೋಷಕರು ಸೇರಿ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮನ್ನು ದೀಪ ಬೆಳಗುವುದರ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಾದ ಸವಿತಾ ಉದ್ಘಾಟಿಸಿದರು. ಪುಟಾಣಿಗಳು ಶಿಕ್ಷಕರ ಕೈಚಳಕದಿಂದ ಸುಂದರವಾದ ಪೂಕಳಂ ಮೂಡಿಬಂದಿತ್ತು. ಬಳಿಕ ಶಾಲಾ ಸಂಚಾಲಕಿಯಾದ ಗೀತಾಂಜಲಿ ಟಿ ಜಿ ವಿದ್ಯಾರ್ಥಿಗಳಿಗೆ ಓಣಂ...
Ad Widget

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧನಂಜಯ ಕತ್ಲಡ್ಕರಿಗೆ ಬೇಕಿದೆ ಸಹಾಯ ಹಸ್ತ

ಐವರ್ನಾಡು ಗ್ರಾಮದ ಕತ್ಲಡ್ಕ ನಿವಾಸಿಯಾದ ಧನಂಜಯ ಕೆ. ಎಂಬ 60 ವರ್ಷದ ವ್ಯಕ್ತಿ ಮಕಾರ್ಮಿಸಿಸ್ ವಿದ್ ರೈಟ್ ಆರ್ಬಿಟಲ್ ಆಂಡ್ ಇಂಟ್ರಕ್ರಾನಿಯಲ್ ಎಕ್ಸ್ಟನ್ಷ್ಯನ್ಸ್ ಎಂಬ ಭಯಾನಕ ಕಾಯಿಲೆಯಿಂದ ನರಳುತ್ತಿದ್ದು ಈಗಾಗಲೇ ಏನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು(1.5 ಲಕ್ಷದ ಬಿಲ್ ಪಾವತಿಸಿದ್ದಾರೆ), ಇದೀಗ ಕೆವಿಜಿ ಹಾಸ್ಪಿಟಲ್ ಸುಳ್ಯ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಚಿಕಿತ್ಸೆಯ...

ಗುತ್ತಿಗಾರು : ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ನೆರವಿನ ಹಸ್ತ ಚಾಚಿದ ನಿವೇದಿತಾ ಸಂಚಲನ ಸಮಿತಿ

ನಿವೇದಿತ ಸಂಚಲನ ಸಮಿತಿ ಗುತ್ತಿಗಾರು ಇದರ ವತಿಯಿಂದ ಸೇವಾ ಕಾರ್ಯದ ಮೂಲಕ ಕಡು ಬಡತನದ ಕುಟುಂಬ ಪೈಕ ನಿವಾಸಿ ರಾಘವೇಂದ್ರ (ಕುಮಾರ)ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಆದಾಯದ ಮೂಲ ಇಲ್ಲದ ಕಾರಣ ಒಂದು ತಿಂಗಳ ದಿನಸಿ ಸಾಮಗ್ರಿ ಹಾಗೂ ಆರ್ಥಿಕ ಸಹಕಾರವನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು.ಈ ಸೇವಾ ಕಾರ್ಯಕ್ಕೆ ಸವಿತಾ ಚಂದ್ರಶೇಖರ ಕಂದಡ್ಕ, ದಿವ್ಯ ಪುರಂದರ ಬಾಕಿಲ,...

ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳಿಗೆ ಬಹುಮಾನ

ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರು ವಿದ್ಯಾರ್ಥಿಗಳಿಗೆ ಬಹುಮಾನ ಲಭಿಸಿದೆ. ಬಿ. ಕೆ. ಯಸ್. ಐಯ್ಯಂಗಾರ್ ಸ್ಮರಣಾರ್ಥ ಅಗಸ್ಟ್ 23, 24, 25 ರಂದು ಅನ್ಲೈನ್ ನಲ್ಲಿ ಯೋಗಾಸನ ಸ್ಪರ್ಧೆಯಲ್ಲಿ08 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಶೈನಿ ಕೊರಂಬಡ್ಕ ತೃತೀಯ ಸ್ಥಾನ08 ರಿಂದ 12 ವರ್ಷದ ಒಳಗಿನ...

ಕೆ.ಎಸ್.ಎಸ್. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಾರಾಂತ್ಯ ಶಿಬಿರ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ದಿನಾಂಕ 15.09.2025 ರಂದು  ನಿಡ್ವಾಳ ಮಹಾವಿಷ್ಣು  ದೇವಸ್ಥಾನ ಕರಿಕಳ ಇಲ್ಲಿ ದೇವಳದ ಜೀರ್ಣೋದ್ಧಾರದ ಪ್ರಯುಕ್ತ ವಾರಂತ್ಯ ಶಿಬಿರವನ್ನು ಏರ್ಪಡಿಸಿತು. ಶಿಬಿರದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಸದಸ್ಯರು ಊರವರು ಭಾಗವಹಿಸಿದ್ದರು. ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ  ಆರತಿ ಕೆ ಹಾಗೂ ಸುಮಿತ್ರ  ಉಪಸ್ಥಿತರಿದ್ದರು....

ಕಪ್ಪು ಪಟ್ಟಿ ಧರಿಸಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ ಕಲ್ಚರ್ಪೆ ನಿವಾಸಿಗಳು

ಆಲೆಟ್ಟಿ ಗ್ರಾಮದ ಸಿರಿಕುರಳ್ ನಗರದಲ್ಲಿ ಸುಳ್ಯ ನಗರ ಪಂಚಾಯತ್ ಹಲವಾರು ವರ್ಷಗಳಿಂದ ಸುಳ್ಯ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ತಂದು ಘಟಕದಲ್ಲಿ ಶೇಖರಣೆ ಮಾಡಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಮತ್ತು ದುರ್ವಾಸನೆಯಿಂದ ಪರಿಸರದ ಜನರಿಗೆ ಮತ್ತು ಮಕ್ಕಳಿಗೆ ವಾಸಮಾಡಲು ಕಷ್ಟಕರವಾದ ವಾತಾವರಣವನ್ನು ನಿರ್ಮಾಣ ಮಾಡಿದ ಕಾರಣ ಹಲವಾರು ಬಾರಿ ಸಂಬಂಧ ಪಟ್ಟ...

ಅಯ್ಯನಕಟ್ಟೆ : ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಮಹಾಸಭೆ

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಇದರ ಸದಸ್ಯ ಕೃಷಿಕರ ವಾರ್ಷಿಕ ಮಹಾಸಭೆಯು  ಸೆಪ್ಟೆಂಬರ್ 14 ರಂದು ಸಂಸ್ಥೆಯ ಅಧ್ಯಕ್ಷರಾದ  ಮೂಲಚಂದ್ರ ಕುಕ್ಕಾಡಿ ಇವರ ಅಧ್ಯಕ್ಷತೆಯಲ್ಲಿ ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ವರದಿ ಹಾಗೂ ಲೆಕ್ಕಾಚಾರಗಳನ್ನು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಸಭೆಗೆ ಮಂಡಿಸಿದರು. ಸಂಸ್ಥೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಜೇನು...

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ರುಕೋಡಿ ಬೇಕರಿ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಣೆ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸುಳ್ಯದ ಪ್ರಮುಖ ರಸ್ತೆಯಲ್ಲಿ ಮಾನವ ಸರಪಳಿ ನಡೆಯಿತು. ಈ ಪ್ರಯುಕ್ತ ಒಡಬಾಯಿಯಲ್ಲಿರುವ ಪಟ್ರುಕೋಡಿ ಬೇಕರಿ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಸುಮಾರು 500 ಜನರಿಗೆ  ಮಾಲ್ಟ್, ಲಾಡು ಹಾಗೂ ಅವಲಕ್ಕಿ ವಿತರಿಸಿದರು.

ಸುಳ್ಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ – ಕನಕಮಜಲಿನಿಂದ ಸಂಪಾಜೆ ವರೆಗೆ ಮಾನವ ಸರಪಳಿ ರಚಿಸಿ ಸಂವಿಧಾನದ ಮಹತ್ವ ಸಾರಿದ ಜನತೆ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯದ ಉದ್ದಕ್ಕೂ ಮಾನವ ಸರಪಳಿ ನಡೆಯಲಿದ್ದು ಸುಳ್ಯ ತಾಲೂಕಿನಲ್ಲಿ ಕನಕಮಜಲಿನ ಸಂಪಾಜೆ ವರೆಗೆ ಜನತೆ ಕೈ ಜೋಡಿಸುವ ಮೂಲಕ ಸಂವಿಧಾನದ ಮಹತ್ವ ಸಾರಿದರು. ಸುಳ್ಯದ ಜ್ಯೋತಿ ಸರ್ಕಲ್ ಬಳಿ ನಡೆದ ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್...
Loading posts...

All posts loaded

No more posts

error: Content is protected !!