Ad Widget

ಯುವ ಜನಾಂಗಗಳು ಮೊಬೈಲ್ ವ್ಯಾಮೋಹ ತ್ಯಜಿಸಿ ಕ್ರೀಡಾ ಕ್ಷೇತ್ರದತ್ತ ಆಕರ್ಷಿತರಾಗಬೇಕಿದೆ – ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಅರವಿಂದ ಅಯ್ಯಪ್ಪ

ಸುಬ್ರಹ್ಮಣ್ಯ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಗೆ ಪೂರಕ.ಆದರೆ ಇವುಗಳನ್ನು ಮರೆತು ಇದೀಗ ಮೊಬೈಲ್ ವ್ಯಾಮೋಹವನ್ನು ಬೆಳೆಸಿಕೊಂಡಿರುವುದು ಬೇಸರದ ಸಂಗತಿ. ಆದುದರಿಂದ ಮೊಬೈಲ್ ಬಿಟ್ಟು ಪುಸ್ತಕ ಓದುವತ್ತ ಗಮನ ಹರಿಸುವುದು ಸೂಕ್ತ ಎಂದು ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.   ಅವರು ಎಸ್ ಎಸ್ ಪಿಯು ಕಾಲೇಜಿನಲ್ಲಿ...

ಅಜ್ಜಾವರ : ಮಿಲಾದ್ ಸಮಿತಿ ವತಿಯಿಂದ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ

ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಸಾರ್ವಜನಿಕ ಚಹಾಕೂಟವು ಸೆ.17 ರಂದು ಅಜ್ಜಾವರದಲ್ಲಿ ನಡೆಯಿತು.ಮುಹಿಯುದ್ದೀನ್ ಜುಮಾ ಮಸೀದಿ ಅಜ್ಜಾವರ ವಠಾರದಲ್ಲಿ ಬೆಳಿಗ್ಗೆ  ತಖ್ ವಿಯ್ಯತ್ತಲ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ಲ್ ಖಾದರ್ ಹಾಜಿ,ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿರವರು ಧ್ವಜಾರೋಹಣ ನೆರವೇರಿಸಿದರು.ತದನಂತರ ನೂರುಲ್ ಇಸ್ಲಾಂ ಮದ್ರಾಸ...
Ad Widget

ಪೆರಾಜೆ ಸಹಕಾರಿ ಸಂಘದ ಮಹಾಸಭೆ – 193 ಕೋಟಿ ವಾರ್ಷಿಕ ವ್ಯವಹಾರ – 38.47 ಲಕ್ಷ ಲಾಭ- ಶೇ 8 ಡಿವಿಡೆಂಡ್

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 7ನೇ ವಾರ್ಷಿಕ ಮಹಾಸಭೆಯು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಸೆಪ್ಟೆಂಬರ್ 17ರಂದು ನಡೆಯಿತು. ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯಿಂದ ಸಭೆಪ್ರಾರಂಭವಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್ ಕೆ ಇವರು ಸರ್ವರನ್ನು ಸ್ವಾಗತಿಸಿ, ವರದಿ ಮಂಡಿಸಿದರು....

ನಾಳೆ ( ಸೆ.18) ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಸುಳ್ಯದ 33 /11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ. ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ಕೆಲಸ ಹಮ್ಮಿಕೊಂಡಿರುವುದರಿಂದ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ದೇವರಗುಂಡ,ಅಜ್ಜಾವರ ಡಿಪೋ, ಜಬಳೆ, ಉಬರಡ್ಕ, ಮಂಡೆಕೋಲು, ತೊಡಿಕಾನ, ಕಲ್ಲುಗುಂಡಿ, ಕೋಲ್ಚಾರ್ ಪೀಡರುಗಳಲ್ಲಿ ಸೆ.18 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರ ತನಕ ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು...

ಸುಳ್ಯ : ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕನಿಗೆ ಶಾಕ್ – ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

ವಿದ್ಯುತ್ ಲೈನ್ ಕೆಲಸದ ವೇಳೆ ವಿದ್ಯುತ್ ಸ್ಪರ್ಶ ವಾಗಿ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಗಾಯವಾದ ಘಟನೆ ಇದೀಗ ಕೊಡಿಯಾಲಬೈಲ್ ನಲ್ಲಿ ಸಂಭವಿಸಿದೆ. ಗಾಯಗೊಂಡ ಭವಿತ್ ಎಂಬ ಯುವಕನ್ನು ಅವರನ್ನು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೆಂಟ್ ಶಾಕ್ ಹೊಡೆದು ಕಂಬದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಅನ್ನಪೂರ್ಣ ಇಲೆಕ್ಟಿಕಲ್ ನ...

ನಡುಗಲ್ಲು : ಅನಾರೋಗ್ಯದಿಂದ ಯುವಕ ಮೃತ್ಯು

ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಲ್ಲಾಜೆ ಯುವಕನೋರ್ವ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಸೆ.16ರ ತಡರಾತ್ರಿ ಸಂಭವಿಸಿದೆ. ಕಲ್ಲಾಜೆ ನಿವಾಸಿ ಲಕ್ಷ್ಮಣಗೌಡರವರ ಪುತ್ರ ಲಿಖಿತ್ ಕಲ್ಲಾಜೆ(26) ಮೃತ ದುರ್ದೈವಿ.ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಿಖಿತ್ ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ವಳಲಂಬೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ವಳಲಂಬೆ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ , ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಶಕ್ತಿ ಕೇಂದ್ರದ ಅಧ್ಯಕ್ಷ...

ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ವತಿಯಿಂದ ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ, ಕಲಾಶ್ರೀ, ಪಯಸ್ವಿನಿಶ್ರೀ, ಕಮಲಪತ್ರ ಪ್ರಶಸ್ತಿ ಪ್ರದಾನ ಹಾಗೂ ಜೇಸಿ ಕುಟುಂಬ ಸಮ್ಮಿಲನ

ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ jc ವೀಕ್ ಆಗಿ ಒಂದು ವಾರಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಜೇಸಿಐ ಸುಳ್ಯ ಪಯಸ್ವಿನಿ(ರಿ) ಆಚರಿಸಿದ್ದು, ಸೆಪ್ಟೆಂಬರ್ 15ರಂದು ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಅಮೃತ ಭವನ ಸಭಾಂಗಣದಲ್ಲಿ ಜೇಸಿ ಸಪ್ತಾಹ ಸಮಾರೋಪ ಸಮಾರಂಭ, ಕಲಾಶ್ರೀ, ಪಯಸ್ವಿನಿಶ್ರೀ, ಕಮಲಪತ್ರ ಪ್ರಶಸ್ತಿ ಪ್ರದಾನ ಹಾಗೂ...

ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಕೋಲ್ಚಾರು ಶಾಲಾ ಸಹ ಶಿಕ್ಷಕಿ ಜಲಜಾಕ್ಷಿಯವರಿಗೆ ಸನ್ಮಾನ

ಆಲೆಟ್ಟಿ ಗ್ರಾಮದ ಕೋಲ್ಚಾರು ಸ. ಉ. ಹಿ. ಪ್ರಾ. ಶಾಲೆಗೆ ಹೆಚ್.ಜಿ. ಗೋವಿಂದೇಗೌಡ ರವರ ಹೆಸರಿನಲ್ಲಿ ಕೊಡ ಮಾಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಕನ್ನಡ ಶಾಲೆ ಎಂಬ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ನಗರ ಮಹಿಳಾ ಘಟಕದ ಸದಸ್ಯೆಯಾಗಿರುವ ಶಾಲಾ ಸಹ ಶಿಕ್ಷಕಿ ಜಲಜಾಕ್ಷಿ ರವರಿಗೆ ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಅವರ ನಿವಾಸಕ್ಕೆ ಸೆ. 16...

ಜೇಸಿಐ ಸಪ್ತಾಹ – ಪೂಜಾ ಬೋರ್ಕರ್ ಗೆ ಒಲಿದ ಪ್ರತಿಷ್ಠಿತ ಕಲಾಶ್ರೀ ಪ್ರಶಸ್ತಿ

ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ ಜೇಸೀ ವೀಕ್ ಆಗಿ ಆಚರಿಸುತ್ತಿದ್ದು ಸೆಪ್ಟೆಂಬರ್ 15ರಂದು ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಅಮೃತ ಭವನ ಸಭಾಂಗಣದಲ್ಲಿ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭ ದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ 2024ರ ಪ್ರತಿಷ್ಠಿತ ಕಲಾಶ್ರೀ ಪ್ರಶಸ್ತಿಯನ್ನು ಖ್ಯಾತ ಪೆನ್ಸಿಲ್ ಆರ್ಟ್ ಕಲಾ ಪ್ರತಿಭೆ...
Loading posts...

All posts loaded

No more posts

error: Content is protected !!