ಕಾಯರ್ತೊಡಿ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ –  ದೇವರ ಭೂತ ಬಲಿ, ಕಟ್ಟೆ ಪೂಜೆ – ಜ.28 ರಂದು ದೇವರ ದರ್ಶನ ಬಲಿ

ಸುಳ್ಯ ದ ಕಾಯರ್ತೊಡಿ ಶ್ರೀ ಮಹಾವಿಷ್ಣು ದೇವಸ್ಥಾನ ದ ವೈಭವದ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಶ್ರೀ ದೇವರ ಭೂತ ಬಲಿ ನಡೆದು ನಂತರ ದೇವರ ಕಟ್ಟೆ ಪೂಜೆ ನೆರವೇರಲಿದೆ ದೇವಳದ ಆಡಳಿತ ಸಮಿತಿ,ಊರ ಪರವೂರ ಭಕ್ತಾದಿಗಳು. ಪಾಲ್ಗೊಂಡು ಶ್ರೀ ದೇವರ ಕೃಪೆ ಗೆ ಪಾತ್ರರಾದರು.ಜ.28 ರಂದು ಬೆಳಿಗ್ಗೆ ದೇವರ ಶ್ರೀ ಬಲಿ ,ದರ್ಶನ ಬಲಿ...

ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡಿನಲ್ಲಿ ಧರ್ಮ ನಡಾವಳಿ

ಕಾಣಿಯೂರು : ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡಿನಲ್ಲಿ ಜ.26 ಮತ್ತು 27 ರಂದು ಶ್ರೀ ಧರ್ಮದೈವಗಳ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ನಡೆಯಿತು. ಜ.26 ರಂದು ಬೆಳಗ್ಗೆ ಗಣಹೋಮ, ಮುಡಿಪು ಪೂಜೆ, ಸಂಜೆ ಭಂಡಾರ ತೆಗೆಯುವುದು, ಅನ್ನ ಸಂತರ್ಪಣೆ, ರಾತ್ರಿ 10.30 ರಿಂದ ಪರಿವಾರ ದೈವಗಳ ನೇಮ ನಡೆಯಿತು. ಜ.27 ರಂದು ಮುಂಜಾನೆ 5...
Ad Widget

ಮಂಡೆಕೋಲು : ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು – ವಿಜಯೋತ್ಸವ

ಮಂಡೆಕೋಲು ಸಹಕಾರ ಸಂಘದ ಆಡಳಿತ ಮಂಡಳಿಗೆ ಜ.27 ರಂದು ಚುನಾವಣೆ ನಡೆದಿದ್ದು ಬಿಜೆಪಿಯ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಭರ್ಜರಿ ಗೆಲುವು ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೇಶವಮೂರ್ತಿ ಹೆಬ್ಬಾರ್, ಪುರುಷೋತ್ತಮ ಕಾಡುಸೊರಂಜ, ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮಂಡೆಕೋಲು, ಆಶಿಕ್ ದೇವರಗುಂಡ, ಲಿಂಗಪ್ಪ ಬದಿಕಾನ, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ...

ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆಯೂ ಅರಿವಿರಬೇಕು – ಕೆ ವಿ ಜಿ ಪಾಲಿಟೆಕ್ನಿಕ್ ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪ್ರಾಂಶುಪಾಲ ಅಣ್ಣಯ್ಯ ಕೆ.

ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ 76ನೆಯ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಪ್ರಚಾರೋಹಣಗೈದು ಶುಭ ಹಾರೈಸಿ ಮಾತನಾಡುತ್ತಾ ನಮಗೆ ಸಂವಿಧಾನ ನೀಡಿರುವ ಹಕ್ಕುಗಳ ಚಲಾವಣೆಯ ಜೊತೆಗೆ ಕರ್ತವ್ಯಗಳ ಪಾಲನೆಯೂ ಆದಾಗ ದೇಶದ ಸಮಗ್ರತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗ ಮುಖ್ಯಸ್ಥರುಗಳಾದ ಎಂ.ಎನ್ ಚಂದ್ರಶೇಖರ, ಯತೀಶ್ ಕೆ. ಎನ್,...

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಕ್ಷಯ ರೋಗದ ಕುರಿತು ಬೀದಿ ನಾಟಕ -ಮಾನವ ಸರಪಳಿ ಜಾಥ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 25.1.2025 ರಂದು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿ-ಕ್ಷಯ ಯೋಜನೆಯ ಅಡಿಯಲ್ಲಿ ಆಯುಷ್ ಇಲಾಖೆ ದಕ್ಷಿಣ ಕನ್ನಡದ ಮಾರ್ಗಸೂಚಿ ಪ್ರಕಾರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ನೇತೃತ್ವದಲ್ಲಿ ಕ್ಷಯ ರೋಗದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಬೀದಿ...

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ 76ನೇ ಗಣರಾಜ್ಯೋತ್ಸವ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿವೇಕಾನಂದ ವೃತ್ತದ ಬಳಿ ಇರುವ ಬಿಸಿಎಂ ವಿದ್ಯಾರ್ಥಿನಿ ನಿಲಯದಲ್ಲಿ ಆಚರಿಸಲಾಯಿತು. ಜೇಸಿ ವಲಯ 15ರ ವಲಯಾಧಿಕಾರಿ ವಲಯ ಸಂಯೋಜಕರಾದ ಜೇಸಿ ಜೆಎಫ್ಎಂ ಗುರುಪ್ರಸಾದ್ ನಾಯಕ್ ಧ್ವಜಾರೋಹಣ ಗೈದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್...

ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ  76ನೇ ಗಣರಾಜ್ಯೋತ್ಸವ

ಕೆವಿಜಿ : ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ 76ನೇ ವರ್ಷದ ಗಣರಾಜ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ  ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕುರುಂಜಿಭಾಗ್, ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದರವರು ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.)ಸುಳ್ಯ ಇದರ ಅಧ್ಯಕ್ಷರ...

ಜ.27 : ಸಂವಿಧಾನ ಬದಲಾಯಿಸಿದ್ದು ಯಾರು? ಪುಸ್ತಕದ ಕುರಿತು ಗೋಷ್ಠಿ

ಮಂಥನ ವೇದಿಕೆ ಮತ್ತು ಅಧಿವಕ್ತಾ ಪರಿಷತ್ ಸುಳ್ಯ ಇದರ ಸಹಯೋಗದೊಂದಿಗೆ ಜ.27 ರಂದು ಬೆಳಿಗ್ಗೆ 10.30 ಕ್ಕೆ ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ "ಸಂವಿಧಾನ ಬದಲಾಯಿಸಿದ್ದು ಯಾರು?" ಪುಸ್ತಕದ ಕುರಿತು ಗೋಷ್ಠಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾಜಿ ಸಚಿವರಾದ ಎನ್ ಮಹೇಶ್ ಆಗಮಿಸಲಿದ್ದಾರೆ.‌ ಪುಸ್ತಕದ ಲೇಖಕರಾದ ವಿಕಾಸ್ ಕುಮಾರ್ ಪಿ...

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜ 25ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಭಾರತದಲ್ಲಿ ವಾರ್ಷಿಕವಾಗಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಯಾದ...

ವರ್ಣರಂಜಿತ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ದೇವಚಳ್ಳ ಶಾಲಾ ಶತಮಾನೋತ್ಸವ, ಗಣ್ಯರಿಂದ ನೂತನ ಕಾಮಗಾರಿಗಳ ಉದ್ಘಾಟನೆ : ರಾಷ್ಟ್ತೀಯ ಶಿಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ – ಬ್ರಿಜೇಶ್ ಚೌಟ

ರಾಷ್ಟ್ತೀಯ ಶಿಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದು ದ.ಕ.ಸಂಸದ ಬ್ರಿಜೇಶ್ ಚೌಟ ಹೇಳಿದರು.ಅವರು ದೇವಚಳ್ಳ ಗ್ರಾಮದ ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.‌ ಸರಕಾರಿ ಶಾಲೆಗಳನ್ನು ಉಳಿಸುವದೇ ಸವಾಲಿನ ಕೆಲಸ.‌ ಇಂತಹ ಸಂದರ್ಭದಲ್ಲಿ ಶತಮಾನೋತ್ಸವ ಆಚರಿಸುತ್ತಿರುವುದು ವಿಶೇಷ , ಕೇಂದ್ರ ಸರಕಾರದ...
Loading posts...

All posts loaded

No more posts

error: Content is protected !!