- Saturday
- November 23rd, 2024
ಎಡಮಂಗಲ ಸೊಸೈಟಿ ಪಿಗ್ಮಿ ಕಲೆಕ್ಟರ್ ಸೀತಾರಾಮ ಕೆರೆಮೂಲೆ ಅವರು ಚಲಾಯಿಸುತ್ತಿದ್ದ ಸ್ಕೂಟಿ ಮೇಲೆ ಕೋಡಿಂಬಾಳ ಸಮೀಪ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಎಡಮಂಗಲ ದೇವಶ್ಯ ಕೆರೆಮೂಲೆ ನಿವಾಸಿಯಾಗಿರುವ ಇವರು ಸೊಸೈಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಿಗ್ಮಿ ಸಂಗ್ರಹ ಮಾಡುತ್ತಿದ್ದರು. ಬೃಹತ್ ಗಾತ್ರದ ದೂಪದ ಮರ ಬಿದ್ದು, ತಲೆಗೆ ಗಂಭೀರ ಗಾಯಗೊಂಡು...
ಅರಂತೋಡು ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಆಲ್ಟೋ ಕಾರೊಂದು ಢಿಕ್ಕಿಯಾದ ಘಟನೆ ಇಂದು ರಾತ್ರಿ ನಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ಕಾಲು ಮುರಿತವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಲ್ಟೋ ಕಾರಿಗೆ ಸೂಕ್ತ ದಾಖಲೆಗಳಿಲ್ಲದೇ ಚಲಾಯಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಲ್ಲುಗುಂಡಿ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆಯ ಮುಖ್ಯರಸ್ತೆ ಬಳಿಯ ಶ್ರೀ ದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರಭ ಜ್ಯುವೆಲ್ಲರಿ ವರ್ಕ್ಸ್ ಸಂಸ್ಥೆಯು 14ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಪ್ರಯುಕ್ತ ಸಂಸ್ಥೆಯಲ್ಲಿ ನ.01ರಂದು ಗಣಹೋಮ, ಲಕ್ಷ್ಮೀಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸತ್ಯನಾರಾಯಣ ಆಚಾರ್ಯ ಬೆಳ್ಳಾರೆ ಹಾಗೂ ಪ್ರಸಾದ್ ಆಚಾರ್ಯ ಬೆಳ್ಳಾರೆ ಮತ್ತು ಮನೆಯವರು ಹಾಗೂ ಸಂಸ್ಥೆಯ ಸಿಬ್ಬಂದಿ...
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ನ.01ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು, ವಸಂತ ಕುಮಾರ್ ನಾಲ್ಕುತ್ತು, ಭರತ್ ಪಂಜಿಗಾರು, ಮಿಥುನ್ ಗೌರಿಹೊಳೆ, ಹಿಮಾಂಶು ಕುಂಟಿಕಾನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ ಸರಿದುಕೊಂಡು ಮಾಯವಾಗುವ ಸ್ಥಿತಿಯಾಗಿರುತ್ತದೆ. ಅಚ್ಚಕನ್ನಡದಲ್ಲಿ ಉಸುರು ಬುರುಡೆ ಅಥವಾ ಬೂರು ಎಂದು ಕರೆಯುತ್ತಾರೆ. ನಾವು ಉಸಿರು ದೀರ್ಘವಾಗಿ ತೆಗೆದುಕೊಂಡಾಗ ಹೊಟ್ಟೆಯ ಭಾಗದಲ್ಲಿ ಒತ್ತಡ...
ನಾಡಿನೆಲ್ಲೆಡೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ ಎಂದು ಜನತೆ ಸಂದೇಶ ಸಾರಿದರೇ ಇತ್ತ ಮೆಸ್ಕಾಂ ಬೆಳಕಿನಿಂದ ಕತ್ತಲಿನಡೆಗೆ ಎಂಬ ಸಂದೇಶ ಸಾರುತ್ತಿದೆ. ದೀಪಗಳ ಹಬ್ಬವಾದ ದೀಪಾವಳಿಯನ್ನು ಸ್ವಾಗತಿಸುವ ಮೊದಲ ದಿನವೇ ಸುಳ್ಯವನ್ನು ಕತ್ತಲೆಗೆ ದೂಡಿದ ಮೆಸ್ಕಾಂ. ದೀಪಗಳ ಹಬ್ಬವಾದ ದೀಪಾವಳಿ ಪ್ರಾರಂಭದ ದಿನವಾದ ಇಂದು ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಂಜೆ 6:30 ರ ಬಳಿಕ...
ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಶ್ರೀರಾಂಪೇಟೆಯ ಕುರುಂಜಿ ಕಾಂಪ್ಲೆಕ್ಸ್ ನಲ್ಲಿರುವ ಕುರುಂಜಿ ಎಂಟರ್ ಪ್ರೈಸಸ್ ನ ತಿಮರೆ ಮಳಿಗೆಯಲ್ಲಿ ಅ.31 ರಂದು ಸಂಜೆ ಧನಲಕ್ಷ್ಮಿ ಪೂಜೆ ನೆರವೇರಿತು.ಎ.ಒ.ಎಲ್.ಇ ಇದರ ಜನರಲ್ ಸೆಕ್ರೆಟರಿ ಅಕ್ಷಯ್ ಕೆ ಸಿ. , ಸಾಯಿರಾಂ ಕೆವಿಜಿ,ಕುರುಂಜಿ ಎಂಟರ್ಪ್ರೈಸಸ್ ನ ದೀಪಕ್ ಕುಮಾರ್ ,ಅನಿಲ್ ಕುಮಾರ್ ಎಲಿಮಲೆ ,ಗಣೇಶ್ ಕುಮಾರ್, ಸುನಿಲ್, ಗುರುಪ್ರಸಾದ್...
ಸರಕಾರಿ ಪದವಿಪೂರ್ವ ಕಾಲೇಜು ಪಂಜ 2012-13ನೇ ಸಾಲಿನ ಪಿಯುಸಿ ಹಳೆ ವಿದ್ಯಾರ್ಥಿಗಳು ನಡೆಸಿಕೊಂಡು ಬರುವ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅ 27ರಂದು ವನಸುಮ ವನವಾಸಿ ವಿದ್ಯಾರ್ಥಿ ನಿಲಯ ಅಡ್ಕಾರು ಸುಳ್ಯ ಇಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಆದಂತಹ ಶ್ರೀ ಚಂದ್ರಶೇಖರ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಆದಂತಹ ಶ್ರೀಮತಿ ಶ್ರೀ ದೇವಿ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟವನ್ನು ಅ.30 ರಂದು ಹಮ್ಮಿಕೊಳ್ಳಲಾಯಿತು. ಪುರುಷರ ವಿಭಾಗದ ಗುಡ್ಡಗಾಡು ಓಟವನ್ನು ದಕ್ಷಿಣ ವಲಯ ಖೋ ಖೋ ಕ್ರೀಡಾಪಟು ಮತ್ತು ಕೆ ಎಸ್ ಎಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ರೈಲ್ವೆ ಉದ್ಯೋಗಿಯಾಗಿರುವ ಬಾಲಭಾಸ್ಕರ ಅವರು ಹಸಿರು...
ಎನ್.ಎಸ್.ಯು.ಐ ಸುಳ್ಯ ಸಮಿತಿಯ ವತಿಯಿಂದ ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಸುಳ್ಯದ ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜು ಹಾಗು ನೆಹರು ಸ್ಮಾರಕ ಪದವಿಪೂರ್ವ ಕಾಲೇಜುಗಳಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಸುಳ್ಯ ಸಮಿತಿಯ ಅಧ್ಯಕ್ಷರಾದ ಧನುಷ್ ಕುಕ್ಕೇಟಿ, ಎನ್.ಎಸ್.ಯು.ಐ ಜಿಲ್ಲಾ ಸಮಿತಿಯ ಉಪಾಧ್ಯಕ್ಷರು ಹಾಗೂ ಎನ್.ಎಸ್.ಯು.ಐ ಸುಳ್ಯ ಸಮಿತಿಯ ಉಸ್ತುವಾರಿಗಳಾದ ಕೀರ್ತನ್ ಗೌಡ ಕೊಡಪಾಲ, ಉಪಸ್ಥಿತರಿರುವರು....
Loading posts...
All posts loaded
No more posts