- Wednesday
- August 5th, 2026
ಗ್ರಾಮ ವಿಕಾಸ ಯೇನೆಕಲ್ಲು ಇದರ ವತಿಯಿಂದ ಯೇನೆಕಲ್ಲು ಶ್ರೀ ಶಂಖಪಾಲ ದೇವಸ್ಥಾನದ ಅಡಿಕೆ ತೋಟದಲ್ಲಿ ತುಂಬಿದ್ದ ಕಳೆಯನ್ನು ಇಂದು ಸ್ವಚ್ಛತೆ ಮಾಡಲಾಯಿತು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಯೇನೆಕಲ್ಲು ಇದರ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇದರ ವತಿಯಿಂದ ಚಿಗುರು 2020 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿ. 1ರಂದು ಪಂಜದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪಂಜದ ಶ್ರೀ ಶಾರದಾಂಬ ಯಕ್ಷಗಾನ ಕಲಾಸೇವಾ ಟ್ರಸ್ಟ್ ಇದರ ವಿದ್ಯಾರ್ಥಿಗಳು ಈ ಯಕ್ಷಗಾನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕಲೆಯನ್ನು ಉತ್ತರ ಕರ್ನಾಟಕದಲ್ಲಿ ಪ್ರದರ್ಶಿಸಲು...
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡುವ ಪ್ರೋತ್ಸಾಹಕ ಪ್ರಶಸ್ತಿಗೆ ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘ ಆಯ್ಕೆಯಾಗಿದೆ. ಮಂಗಳೂರಿನಲ್ಲಿ ನ.27 ರಂದು ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷಜಯಪ್ರಕಾಶ್ ಕೂಜುಗೋಡು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಕಟ್ಟೆಮನೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ರವರಿಂದ ಪ್ರಶಸ್ತಿಸ್ವೀಕರಿಸಿದರು. ಸಂಘವು 2019-20ನೇ ಸಾಲಿನಲ್ಲಿ ಬ್ಯಾಂಕಿನ...
ಏನೆಕಲ್ಲು ಆದಿಶಕ್ತಿ ಭಜನಾ ಮಂದಿರ ಹಾಗೂ ಕಲಾಭಿಮಾನಿಗಳ ಸಹಕಾರದೊಂದಿಗೆ ಚಿತ್ರಚಿತ್ತಾರ ಅರ್ಪಿಸಿದ 'ಗಾನ ವರ್ಣ ಸಿಂಚನ" ಮಕ್ಕಳ ಕಾರ್ಯಕ್ರಮ ನ.28 ರಂದು ಏನೆಕಲ್ಲು ಭಜನಾ ಮಂದಿರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಕೆ.ಎಂ. ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರಿನ ಆರ್ಟ್ಸ್ ಸ್ಟುಡಿಯೋದ ಮಹೇಶ್ ಹುಳಿಯಾರು ಉದ್ಘಾಟಿಸಿದರು. ಮಕ್ಕಳಿಂದ ರಚನೆಯಾದ ಚಿತ್ರ ಚಿತ್ತಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಶಕ್ತಿ ಭಜನಾ ಮಂದಿರದ...
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ಮಂಡಲ ಪ್ರಶಿಕ್ಷಣ ವರ್ಗವು ಪೆರುವಾಜೆ ಜೆ. ಡಿ. ಅಡಿಟೋರಿಯಂನಲ್ಲಿ 2 ದಿನಗಳ ಕಾಲ ನಡೆಯಲ್ಲಿದ್ದು ಇದರ ಉದ್ಘಾಟನೆ ಯನ್ನು ಶಾಸಕ ಎಸ್. ಅಂಗಾರವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಕೃಷ್ಣ ಶೆಟ್ಟಿ ಕಡಬ,ಮಂಡಲ ಪ್ರಶಿಕ್ಷಣದ...
ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ (ಬಿ.ಎಂ.ಎಸ್) ಗುತ್ತಿಗಾರು ಘಟಕದ ವತಿಯಿಂದ ಕ್ರಿಕೆಟ್ ಪಂದ್ಯಾಟ ಮತ್ತು ಗೌರವಾರ್ಪಣೆ ಇಂದು ನಡೆಯಿತು. ಮಾಜಿ ಗ್ರಾ.ಪಂ.ಅಧ್ಯಕ್ಷ ವೆಂಕಟ್ ವಳಲಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪಿಡಿಓ ಶ್ಯಾಮ್ ಪ್ರಸಾದ್, ಅಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ, ಕಾರ್ಯದರ್ಶಿ ಶಶಿಧರ ಕುಕ್ಕುಜೆ ಉಪಸ್ಥಿತರಿದ್ದರು....
ನರ್ಲಡ್ಕ ಎಣ್ಮೂರು ಶ್ರೀ ಜನಾರ್ದನ ಆಚಾರ್ಯರ ಪುತ್ರ ಪ್ರಶಾಂತ್ ನರ್ಲಡ್ಕರ ವಿವಾಹವು ಪೇರಳಕಟ್ಟೆ ಶ್ರೀ ಕೊರಗಪ್ಪ ಆಚಾರ್ಯರ ಪುತ್ರಿ ಲತಾಶ್ರೀಯವರೊಂದಿಗೆ ನ.27 ರಂದು ಎಣ್ಮೂರು ಕೋಟಿ - ಚೆನ್ನಯ್ಯ ನಗರದ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದು ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದ ಪ್ರಕರಣವೊಂದಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ನಡೆದಿತ್ತು....
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರನ್ನು ಜಿಲ್ಲಾಧಿಕಾರಿ ನೇಮಕಗೊಳಿಸಿ ಆದೇಶಿಸಿದ್ದರು. ಇಂದು ಶ್ರೀ ಕ್ಷೇತ್ರದಲ್ಲಿ ಅವರಿಗೆ ಅಧಿಕಾರ ಹಸ್ತಾಂತರ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ , ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಪುಷ್ಪಲತಾ, ಕಛೇರಿ ಅಧೀಕ್ಷಕರಾದ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಗ್ರಾ.ಪಂ.ವ್ಯಾಪ್ತಿಯ ಏನೆಕಲ್ಲು ಬೂದಿಪಳ್ಳ ಮಧುವನ ಸಂಪರ್ಕಿಸುವ ರಸ್ತೆ 15 ನೇ ಹಣಕಾಸು ಯೋಜನೆಯಲ್ಲಿ ಕಾಂಕ್ರೀಟೀಕರಣ ಗೊಂಡಿದ್ದು ನ.27 ರಂದು ಉದ್ಘಾಟನೆಗೊಂಡಿತು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಿಡಿಓ ಮುತ್ತಪ್ಪ ದವಳಗಿ,ಗ್ರಾ.ಪಂ.ಮಾಜಿ ಸದಸ್ಯರಾದ ಹರೀಶ್ ಇಂಜಾಡಿ, ಶ್ರೀಮತಿ ಸುಶೀಲಾ ಆಚಾರ್ಯ, ಶ್ರೀಕೃಷ್ಣ ಕೋಟೆ, ಶ್ರೀಮತಿ ವರಲಕ್ಷ್ಮಿ, ಅರ್ಜುನ್ ಕೋಟೆ, ಸತೀಶ್ ಆಚಾರ್ಯ, ಕು|...
Loading posts...
All posts loaded
No more posts
