- Saturday
- August 8th, 2026
ಉಪ್ಪಿನಂಗಡಿ ಸಮೀಪದ ತೆಕ್ಕಾರುನ ಪಿಂಡಿಕಲ್ಲು ಎಂಬಲ್ಲಿ ವಿದ್ಯುತ್ ಸಂಪರ್ಕದ ಲೋಪವನ್ನು ಸರಿಪಡಿಸಲು ಹೋಗಿದ್ದ ಕಲ್ಲೇರಿ ಶಾಖೆಯ ಮೆಸ್ಕಾಂ ಪವರ್ ಮ್ಯಾನ್ ವಿಕಾಸ್ (26) ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಘಟನೆ ಇಂದು ಸಂಜೆ ಸಂಭವಿಸಿದೆ.ಮೃತ ವಿಕಾಸ್ ಮೂಲತಃ ಬಿಜಾಪುರದವರಾಗಿದ್ದು, ಕಳೆದ 5 ವರ್ಷಗಳಿಂದ ಮೆಸ್ಕಾಂ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸುಳ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇಳಿಮುಖ ಕಾಣುತ್ತಿದ್ದು ಇಂದು 40 ಹೊಸ ಸೋಂಕಿತರ ಪತ್ತೆಯಾಗಿದ್ದಾರೆ. ನಿನ್ನೆ ಕೂಡ 44 ಪ್ರಕರಣಗಳಿದ್ದವು. ಒಟ್ಟು ಸುಳ್ಯದಲ್ಲಿ 381 ಕೋವಿಡ್ ಸಕ್ರೀಯ ಪ್ರಕರಣಗಳಿವೆ.
ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರಿಗೆ ಧೈರ್ಯ ತುಂಬುವ ಸಲುವಾಗಿ ಮೇ.13 ಹಾಗೂ ಮೇ.14 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಐದು ಕೊರೋನಾ ಬಾಧಿತರ ಮನೆಗಳಿಗೆ ಬೇಟಿ ನೀಡಿ ಕೊರೋನಾ ಬಾಧಿತರಿಗೆ ಹಾಗೂ ಕೊರೋನಾ ಬಾಧಿತರ ಮನೆಯವರಿಗೆ ಧೈರ್ಯ ತುಂಬುವ ಕೆಲಸ...
ಕಳಂಜ ಗ್ರಾಮದ ಮುಂಡುಗಾರು ಮನೆ ನಾಗಪ್ಪ ಗೌಡರವರ ಪುತ್ರಿ ರೇಶ್ಮಾರವರ ವಿವಾಹ ಕಾರ್ಯಕ್ರಮವು ಶಾಂತಿಗೋಡು ಗ್ರಾಮದ ಮರಕ್ಕೂರು ಮನೆ ಪೂವಣಿ ಗೌಡರವರ ಪುತ್ರ ನವೀನರೊಂದಿಗೆ ಮೇ.13 ರಂದು ಮರಕ್ಕೂರು ವರನ ಮನೆಯಲ್ಲಿ ನಡೆಯಿತು.
ಲಾಕ್ ಡೌನ್ ಮಧ್ಯೆಯೂ ಸುಳ್ಯದಲ್ಲಿ ಕೊರೊನಾ ಪಾಸಿಟಿವ್ ಮತ್ತೆ ಏರಿಕೆ ಕಂಡಿದೆ. ಇಂದು 57 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ 56 ಸೋಂಕಿತರಿದ್ದರು. ಸುಳ್ಯದಲ್ಲಿ ಒಟ್ಟು 533 ಸೋಂಕಿತರಿದ್ದಾರೆ.
ಜೂನ್ 21 ರಿಂದ ಪ್ರಾರಂಭವಾಗಬೇಕಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು, ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಕೋವಿಡ್19ರ ಎರಡನೇ ಅಲೆಯ ಪ್ರಸರಣ ನಿಯಂತ್ರಣಕ್ಕೆ ಬಂದ ಸಂದರ್ಭದಲ್ಲಿ, ಸಾಕಷ್ಟು ಮುಂಚಿತವಾಗಿ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ...
ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೊರೋನಾ ಸೋಂಕಿನಿಂದ ಕ್ವಾರೆಂಟೈನ್ ನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಮಾಡುವುದರ ಜೊತೆಗೆ ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದರು. ಹಾಗೂ ಕ್ವಾರೆಂಟೈನ್ ನಲ್ಲಿರುವ ಮನೆಗಳಿಗೆ ದಿನಬಳಕೆಯ ವಸ್ತುಗಳನ್ನು ತಲುಪಿಸಲು...
ಲಾಕ್ ಡೌನ್ ಮಧ್ಯೆಯೂ ಸುಳ್ಯದಲ್ಲಿ ಕೊರೊನಾ ಪಾಸಿಟಿವ್ ಮತ್ತೆ ಏರಿಕೆ ಕಂಡಿದೆ. ಇಂದು 56 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ ಮಾತ್ರ ಸೋಂಕಿತರ ಸಂಖ್ಯೆ 17ಕ್ಕೆ ಇಳಿದಿತ್ತು. ಸುಳ್ಯದಲ್ಲಿ ಇದುವರೆಗೆ ಒಟ್ಟು 514 ಸೋಂಕಿತರಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಕೋವಿಡ್-19 ತುರ್ತು ಕಾರ್ಯಪಡೆ ವತಿಯಿಂದ ಮೇ.12 ರಂದು ಕೊಲ್ಲಮೊಗ್ರ ಗ್ರಾಮದ ಗೋಳಿಗುಂಡಿ ಸಮೀಪದ ಎರಡು ಮನೆಗಳಲ್ಲಿ ಮನೆಯ ಎಲ್ಲಾ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದ್ದು, ಇವರಿಗೆ ಅಕ್ಕಿ ಸಾಮಾಗ್ರಿಗಳ ಕಿಟ್ ಅನ್ನು ಕೋವಿಡ್-19 ತುರ್ತು ಕಾರ್ಯಪಡೆಯ ಸದಸ್ಯರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕೊಪ್ಪಡ್ಕ, ಗ್ರಾಮ...
Loading posts...
All posts loaded
No more posts
