- Saturday
- August 8th, 2026
ಇಬ್ಬನಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ "ಪ್ರೇಮಯಾನ" ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಲೀಲಾಕುಮಾರಿ ತೊಡಿಕಾನರವರ ಸಾಹಿತ್ಯವನ್ನು ಮಹಾಲಿಂಗ ಮೈಸೂರುರವರು ಹಾಡಿದ್ದಾರೆ. ಸುಳ್ಯದ ಪ್ರತಿಭೆಗಳಾದ ಶರತ್ ಮಾಸ್ತಿ ಮತ್ತು ಸಾಯಿಶೃತಿ ನಟಿಸಿದ್ದಾರೆ.ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿ.https://youtu.be/JNfyOzLZZM0 https://youtu.be/JNfyOzLZZM0
ದೇವಚಳ್ಳ ಗ್ರಾಮದ ಮಂಜೋಳುಕಜೆ ಪವನ ಕುಮಾರ್ ರವರ ಮನೆ ಮೇಲೆ ಜು.14 ರಂದು ದೊಡ್ಡ ಗಾತ್ರದ ಮರವೊಂದು ಬಿದ್ದು ಮನೆಯ ಚಾವಣಿ ಸಂಪೂರ್ಣ ಹಾನಿಯಾಗಿದೆ. ಸುದ್ದಿ ತಿಳಿದು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಪ್ರಶಾಂತ್ ಮೆದು, ದುರ್ಗದಾಸ್ ಮೆತ್ತಡ್ಕ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಹಾಗೂ ಶ್ರೀ ವಿಷ್ಣು ವಿಶ್ವ ಹಿಂದೂ ಪರಿಷತ್...
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆಯು ಜು.15 ರಂದು ನಡೆಯಿತು. ಅರ್ಚಕ ವೆಂಕಟ್ರಾಮ್ ಭಟ್ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ, ಮಿತ್ತೂರು ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಕಟ್ಟಡ ಸಲಹಾ ಸಮಿತಿ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು,...
ಜೂನ್ 15ರಂದು ಸುರಿದ ಭಾರಿ ಮಳೆಗೆ ಮರ್ಕಂಜ ಗ್ರಾಮದ ಜನಾರ್ಧನ ನಾಯ್ಕರವರು ನಿರ್ಮಿಸುತ್ತಿರುವ ನೂತನ ಮನೆಯ ಹಿಂಬದಿಯ ಬರೆ ಕುಸಿದಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಓಮನಎನ್.ಕೆ. ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ. ಸುಬ್ರಹ್ಮಣ್ಯಕ್ಕೆ ಪುತ್ತೂರು ನಗರ ಠಾಣೆ ಎಸ್.ಐ. ಜಂಬೂರಾಜ್ ಮಹಾಜನ್ ಬರಲಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಮಡಪ್ಪಾಡಿ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರ ಲಾಭಾಂಶ ವಿತರಣಾ ಕಾರ್ಯಕ್ರಮವು ಹಣ ಸಂಗ್ರಹಣ ಕೇಂದ್ರ ಮಡಪ್ಪಾಡಿ ದಲ್ಲಿ ನಡೆಯಿತು .ಒಟ್ಟು ಒಕ್ಕೂಟದಲ್ಲಿ 43 ಸಂಘಗಳಿಗೆ ಲಾಭಾಂಶ ವಿತರಣೆ ನಡೆದಿದ್ದು ಸಾಂಕೇತಿಕವಾಗಿ ರತ್ನ ಶ್ರೀ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆಯ...
ಲಾಭಾಂಶ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಯೇನೆಕಲ್ಲು ಒಕ್ಕೂಟದ 41 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೇನೆಕಲ್ಲು ಒಕ್ಕೂಟದ ಸ್ಥಾಪಕಾಧ್ಯಕ್ಷರು ಹಾಗೂ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿಯಾಗಿರುವ ಶಿವಪ್ರಸಾದ್...
ಎಲಿಮಲೆಯಲ್ಲಿ ಶಿವಾನಿ ಗಾರ್ಮೆಂಟ್ಸ್ ಮತ್ತು ಬ್ಯೂಟಿಪಾರ್ಲರ್ ಜು .14 ರಂದು ಶುಭಾರಂಭಗೊಂಡಿತು.ಚಂದ್ರಶೇಖರ ಭಟ್ ತಳೂರು ದೀಪ ಬೆಳಗಿಸಿ ಉದ್ಘಾಟಿಸಿ,ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಕೆನರಾ ಬ್ಯಾಂಕ್ ಮ್ಯಾನೇಜರ್ ನಿಖಿಲ್, ಪ್ರಸನ್ನ ಕಾಂಪ್ಲೆಕ್ಸ್ ಮಾಲಕ ಸತ್ಯನಾರಾಯಣ ಬಲ್ಯಾಯ, ಎಲಿಮಲೆ ಉತ್ಸವ ಸ್ಟೋರ್ ಮಾಲಕ ಕೇಶವ ಕಾಯರ, ರಾಧಾಕೃಷ್ಣ ಶ್ರೀ ಕಟೀಲ್ಮಾವಿನಕಟ್ಟೆ ಉಪಸ್ಥಿತರಿದ್ದರು. ಶಿವಾನಿ ಗಾರ್ಮೆಂಟ್ಸ್ ನಮಾಲಕರಾದ...
ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಬಾಳಿಲ- ಮುಪ್ಪೇರಿಯ ಇದರ ಅಧ್ಯಕ್ಷರಾದ ವೆಂಕಪ್ಪ ನಾಯ್ಕ ಪೊಸೋಡು ಇವರ ಮುಂದಾಳತ್ವದಲ್ಲಿ ಒಕ್ಕೂಟದ ಸದಸ್ಯರಿಂದ ಶಾಲಾ ಸ್ವಚ್ಛತಾ ಕಾರ್ಯವನ್ನು ಜು.14 ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಎಸೆಸೆಲ್ಸಿ ಪರೀಕ್ಷಾ ಕೇಂದ್ರವಾದ ಶಾಲೆಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಸುಬ್ರಹ್ಮಣ್ಯ ಒಕ್ಕೂಟದ 47 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಅದ್ಯಕ್ಷರು ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಇದರ ಹಾಲಿ ಸದಸ್ಯರಾದ ವಿಮಲಾ ರಂಗಯ್ಯ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸವಿತಾ...
Loading posts...
All posts loaded
No more posts
