ಸಂಪಾಜೆ: ಕ್ಷಯ ಮುಕ್ತ ಭಾರತ ಮಾಹಿತಿ ಮತ್ತು ಕ್ಷಯ ಮುಕ್ತ ಗ್ರಾಮ ಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿ ರಚನೆ

ಭಾರತ ದೇಶವನ್ನು 2025 ಕ್ಕೆ ಕ್ಷಯ ಮುಕ್ತಗೊಳಿಸುವ ಪ್ರಧಾನಿಯವರ ಆಶಯದಂತೆ ಸಂಪಾಜೆ ಗ್ರಾಮ ಪಂಚಾಯತನ್ನು ಕ್ಷಯ ಮುಕ್ತಗೊಳಿಸಲು ಟಾಸ್ಕ್ ಪೋರ್ಸ್ ಸಮಿತಿ ರಚನಾ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಹುಲ್ ಹಮೀದ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಆರೋಗ್ಯ ಇಲಾಖೆಯ ಕ್ಷಯ ವಿಭಾಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಕ್ಷಯ ರೋಗದ ಬಗ್ಗೆ...

ಬಾಳುಗೋಡು :- ಬಿಜೆಪಿ ಬೂತ್ ಸಮಿತಿ ಅದ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

ಬಾಳುಗೋಡು ಬಿಜೆಪಿ ಬೂತ್ ಸಮಿತಿ ಅದ್ಯಕ್ಷರ ಮನೆಯಲ್ಲಿ ಅ.26 ರಂದು ನಾಮಫಲಕ ಅಳವಡಿಸುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿಯ ಅದ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರದಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅದ್ಯಕ್ಷರಾದ ವಿನಯ್ ಮುಳುಗಾಡು ಹಾಗೂ ಬಿಜೆಪಿ ಬೂತ್...
Ad Widget

ಹರಿಹರ ಪಲ್ಲತ್ತಡ್ಕ :- ಸ.ಹಿ.ಪ್ರಾ ಶಾಲೆಗೆ ರೋಟರಿ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ಕಂಪ್ಯೂಟರ್ ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕ ಇಲ್ಲಿಗೆ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಅ.26 ರಂದು ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಅದ್ಯಕ್ಷರಾದ ವಿಜಯಕುಮಾರ್, ರೊಟೇರಿಯನ್ ಉಮೇಶ್.ಕೆ.ಎನ್, ಸ್ಕಂದ ಗಿರಿಧರ್, ಕಿಶೋರ್ ಕುಮಾರ್ ಕೂಜುಗೋಡು ಹಾಗೂ ಸ.ಹಿ.ಪ್ರಾ ಶಾಲೆ ಹರಿಹರ ಪಲ್ಲತ್ತಡ್ಕದ ಮುಖ್ಯೋಪಾಧ್ಯಾಯರಾದ ಶೇಷಪ್ಪ...

ರೋಟರಿ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ಹರಿಹರ ಪಲ್ಲತ್ತಡ್ಕ ಶಾಲೆಗೆ ಕಂಪ್ಯೂಟರ್ ಕೊಡುಗೆ

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ವಿಜಯ ಕುಮಾರ್ ಅಮೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಉಮೇಶ್ ಕೆ ಎನ್ ಮತ್ತು ಗಿರಿಧರ್ ಸ್ಕಂಧ...

ಹರಿಹರ ಪಲ್ಲತ್ತಡ್ಕ :- ಎಸ್.ಕೆ ಜನರಲ್ ಸ್ಟೋರ್ ಶುಭಾರಂಭ

ಹರಿಹರ ಪಲ್ಲತ್ತಡ್ಕದ ಶ್ರೀ ದುರ್ಗಾ ಸಂಕೀರ್ಣದಲ್ಲಿ ಸಂದೀಪ್ ಕೇವಳ ಮಾಲಕತ್ವದ ಎಸ್.ಕೆ ಜನರಲ್ ಸ್ಟೋರ್ ಅ.25 ರಂದು ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭಗೊಂಡಿತು.ನಮ್ಮಲ್ಲಿ ಎಲ್ಲಾ ತರಹದ ದಿನಸಿ ಸಾಮಾಗ್ರಿಗಳು ದೊರೆಯುತ್ತವೆ ಎಂದು ಜನರಲ್ ಸ್ಟೋರ್ ನ ಮಾಲಕರಾದ ಸಂದೀಪ್ ಕೇವಳ ತಿಳಿಸಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ

ವಿವಾಹ ನಿಶ್ಚಿತಾರ್ಥ : ಯೋಗಿಶ್ – ಸುಮಿತ್ರ

ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಗಡಿಕಲ್ಲು ಕೃಷ್ಣ ನಾಯ್ಕರ ದ್ವಿತೀಯ ಪುತ್ರಿ ಸುಮಿತ್ರ ಇವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ದಿ|| ಕೊರಗಪ್ಪ ನಾಯ್ಕರ ಪ್ರಥಮ ಪುತ್ರ ಯೋಗಿಶ್ ರವರೊಂದಿಗೆ ಅಕ್ಟೋಬರ್ 24 ರಂದು ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ

ಡಾ. ಮಧುಶ್ರೀ ಕೆ.ವಿ. ಕೇನಾಜೆರವರಿಗೆ ಆಲ್ ಇಂಡಿಯಾ ಆಯುರ್ವೇದ ವೈದ್ಯಕೀಯ ಪಿ.ಜಿ. ಪ್ರವೇಶ ಪರೀಕ್ಷೆಯಲ್ಲಿ ರ್‍ಯಾಂಕ್

ಡಾ . ಮಧುಶ್ರೀ ಕೆ.ವಿ.ಕೇನಾಜೆ ಅವರಿಗೆ ಆಲ್ ಇಂಡಿಯಾ ಆಯುರ್ವೇದ ವೈದ್ಯಕೀಯ ಪಿ.ಜಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ೪೨೪ ನೇ ರ್‍ಯಾಂಕ್ ಪಡೆದಿರುತ್ತಾರೆ.ಬಿಎಎಂಎಸ್ ಪದವಿಯನ್ನು ಸರಕಾರಿ -ಆರ್ಯುವೇದ ಕಾಲೇಜು ಮೈಸೂರಿನಲ್ಲಿ ಪೂರೈಸಿರುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಪೂರೈಸಿರುತ್ತಾರೆ. ಸ.ಪ.ಪೂ....

ಸುಳ್ಯ : ವೆಂಕಟರಮಣ ಸೊಸೈಟಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ಸದಸ್ಯರುಗಳ ಮಕ್ಕಳು 2020- 21ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 620 ಅಂಕಗಳಿಗಿಂತ ಹೆಚ್ಚು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನ. 13ರಂದು ಸುಳ್ಯದಲ್ಲಿ ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಸದಸ್ಯರುಗಳು ತಮ್ಮ ಮಕ್ಕಳ ಅರ್ಜಿಯನ್ನು ಸಂಘದ ಹತ್ತಿರದ ಶಾಖೆಗಳಲ್ಲಿ ನೀಡಬೇಕೆಂದು ಸಂಘದ...

ಕಡಬ: ಎಡಮಂಗಲ ಸಮೀಪ ಬಿರುಕು ಬಿಟ್ಟ ರೈಲ್ವೆ ಹಳಿ – ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ

ಕಡಬ: ರೈಲು ಹಳಿಯಲ್ಲಿ ಬಿರುಕು ಬಿಟ್ಟ ಘಟನೆ ನಡೆದಿದ್ದು ರೈಲು ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅವಘಡ ತಪ್ಪಿದ ಘಟನೆ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ರಸ್ತೆಯ ಸುಬ್ರಹ್ಮಣ್ಯ ಸಮೀಪ ಅ.25ರ ಸೋಮವಾರದಂದು ಸಂಭವಿಸಿದೆ.ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ನೆಟ್ಟಣ ದಿಂದ ಮುಂದಕ್ಕೆ ಎಡಮಂಗಲ ಸಮೀಪ ತಲುಪಿದ ವೇಳೆಯಲ್ಲಿ, ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದೆ. ರೈಲಿನ ಒಂದು ಬೋಗಿ...

ಮುರುಳ್ಯ: ಕ್ಷಯ ಮುಕ್ತ ಗ್ರಾಮ ನಿರ್ಮಾಣದ ಬಗ್ಗೆ ಸಭೆ, ಮಾಹಿತಿ ಮತ್ತು ಟಾಸ್ಕ್ ಪೋರ್ಸ್ ಸಮಿತಿ ರಚನೆ

2025ಕ್ಕೆ ಭಾರತವನ್ನು ಕ್ಷಯ ಮುಕ್ತಗೊಳಿಸುವ ಪ್ರಧಾನಿಯವರ ಘೋಷಣೆಯಂತೆ ಮುರುಳ್ಯ ಗ್ರಾಮವನ್ನು ಕ್ಷಯ ಮುಕ್ತಗೊಳಿಸುವ ಯೋಜನೆಗೆ ಪೂರ್ವಭಾವಿಯಾಗಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯು ಮುರುಳ್ಯ ಗ್ರಾಮ ಪಂಚಾಯತ್ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕು.ಜಾನಕಿ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಮಾತನಾಡಿ...
Loading posts...

All posts loaded

No more posts

error: Content is protected !!