- Monday
- March 3rd, 2025

2019-20 ನೇ ಸಾಲಿನ ಶ್ರೀ ಗೋಕರ್ಣ ನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಗಾಂಧಿನಗರ ಮಂಗಳೂರು ಇಲ್ಲಿ ನಡೆದ ಬಿ.ಎಡ್ ಪರೀಕ್ಷೆಯಲ್ಲಿ ಕುಮಾರಿ ಶರಣ್ಯ.ಡಿ. ಎಸ್ ಇವರು ಅತ್ಯುತ್ತಮ ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿರುತ್ತಾರೆ.ಇವರು ದೇವರಗುಂಡ ದೊಡ್ಡಮನೆ ಸಂಜೀವ ಗೌಡ ಮತ್ತು ದಮಯಂತಿ ಇವರ ಪುತ್ರಿಯಾಗಿರುತ್ತಾರೆ.

ಸುಳ್ಯ ಬಿಜೆಪಿ ಕಛೇರಿಗೆ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ಯಾನಿಟೈಸರ್ ಮತ್ತು ಸ್ಟಾಂಡ್ ಕೊಡುಗೆ ಯಾಗಿ ನೀಡಿದರು.

ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಪರಂಪರೆಯಲ್ಲಿ ಖ್ಯಾತಿ ಪಡೆದಿರುವ ದಿವಂಗತ ಅಲ್ ಹಾಜ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರ ಪುತ್ರ ವಿ.ಎಂ. ಮಹಮೂದ್ ಮುಸ್ಲಿಯಾರ್ ಇಂದು ನಿಧನರಾದರು. ಅವರು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ 12 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದರು. ವಿದ್ವತ್ ಕುಟುಂಬದ ಪರಂಪರೆಯ ಸಾತ್ವಿಕತೆ, ನಿರ್ಮಲ ಹೃದಯ, ಸರಳ...

ಡೆಂಗ್ಯೂ ಮತ್ತು ಮಹಾಮಾರಿ ಕೊರೊನಾ ಹರಡುತ್ತಿದ್ದು ನ. ಪಂ ವ್ಯಾಪ್ತಿಯಲ್ಲಿ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಿದೆ. ಈ ಹಿಂದೆ ಅಳವಡಿಸಿದ ಪೈಪ್ ಕಳಪೆ ಮಟ್ಟದ್ದಾದ ಕಾರಣ ಹಲವೆಡೆ ಪೈಪ್ ಒಡೆದು ಹೋಗಿರುತ್ತದೆ.ನೀರಿನ ಸಂಪರ್ಕದ ಒತ್ತಡ ಹೆಚ್ಚಾಗುವುದರಿಂದ ಸಂಪರ್ಕ ಸ್ಥಳ (ಜ್ಯೋಂಟ್ )ದಲ್ಲಿ ಪೈಪ್ ಒಡೆಯುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಆದರೆ ನೀರಿಗಾಗಿ ಸುಳ್ಯದ ಜನತೆ...

ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದಲ್ಲಿನ 2019-20ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ ಮೇ.5ರಂದು ಪ್ರಕಟಿಸಲಾಗಿತ್ತು. ಆದರೆ ಅನುತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಇಂತಹ ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜು.16 ರಿಂದ ಜು. 27 ರ ಒಳಗೆ ನಡೆಸುವಂತೆ ಪದವಿ...

ಕಲ್ಲುಗುಂಡಿಯ ಕವಿತಾ ವೈನ್ಸ್ ತನ್ನ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡಲು ಸೂಚಿಸದಿರಿವುದು ಹಾಗೂ ಮಾಸ್ಕ್ ಧರಿಸದೇ ಗ್ರಾಹಕರು ಬರುತ್ತಿರುವುದನ್ನು ಗಮನಿಸಿದ ಗ್ರಾಮ ಪಂಚಾಯತ್ ನೋಟೀಸ್ ನೀಡಿದೆ. ಈ ನೋಟೀಸ್ ನಲ್ಲಿ ಸಮಯ ಪಾಲನೆ ಮಾಡದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪಂಚಾಯತ್ ಸೂಚನೆಯನ್ನು ನಿರ್ಲಕ್ಷಿಸಿರುವುದರಿಂದ ಪರವಾನಿಗೆಯನ್ನು ರದ್ದುಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ....

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ತಡೆಗೋಡೆ ಕುಸಿದಿದೆ. ಅದೃಷ್ಟವಶಾತ್ ಪರಿಸರದಲ್ಲಿ ಯಾವುದೇ ವಿದ್ಯಾರ್ಥಿಗಳು ಮಕ್ಕಳು ಇಲ್ಲದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ . ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಹಾಗು ಶಾಲಾ ಅಧ್ಯಾಪಕಿ ಭವಾನಿ , ನಳಿನಿ ಟೀಚರ್, ಶಾಲಾ...

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಜಿಲ್ಲೆಯಲ್ಲಿ ಇಂದು 83 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ ಸೋಂಕು ಪೀಡಿತ ಮೂಡಬಿದ್ರೆ ನಿವಾಸಿಯೊಬ್ಬರು ಸಾವನ್ನಪ್ಪಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇದುವರೆಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದು,...

ಸುಳ್ಯ ತಾಲೂಕು ವರ್ತಕರ ಸಂಘದ ಸಭೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಉಪಾಧ್ಯಕ್ಷ ಪ್ರಭಾಕರ್ ನಾಯರ್ ಕೋಶಾಧಿಕಾರಿ ಸುರೇಶ್ ಚಂದ್ರ ಕಮಿಲ ,ಉಪಸ್ಥಿತರಿದ್ದರು. ಸಭೆಯಲ್ಲಿ ಇತ್ತೀಚಿಗೆ ಅಗಲಿದ ಹಿರಿಯ ವರ್ತಕ ಸುಂದರ ಸರಳಾಯ ,ಡಾಕ್ಟರ್...

All posts loaded
No more posts