Ad Widget

ಕುಕ್ಕೆ ಸುಬ್ರಹ್ಮಣ್ಯ : ದೈವಗಳ ನಡಾವಳಿ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ಡಿ.16 ರ ಗುರುವಾರದಂದು ಮುಂಜಾನೆ ದೈವಗಳ ನಡಾವಳಿ ಜರುಗಿತು.ಡಿ.15 ರ ಬುಧವಾರದಂದು ರಾತ್ರಿ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆದು, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಿತು. ಕ್ಷೇತ್ರದ ರಕ್ಷಣಾ ದೈವಗಳಿಗೆ ಕೊಡುವ ಕಟ್ಟುಕಟ್ಟಲೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿ ಜರುಗಿತು. ಬೆಳಿಗ್ಗೆ ಪುರುಷರಾಯ...

ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಆಂಬುಲೆನ್ಸ್ ಖರೀದಿ ಯೋಜನೆಗೆ ಸಹಾಯಧನ ವಿತರಣೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಖರೀದಿಸುವ ಆಂಬುಲೆನ್ಸ್ ಖರೀದಿ ಯೋಜನೆಗೆ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶ್ರೀ ಶಂಖಪಾಲ ಸುಬ್ರಮಣ್ಯ ದೇವಸ್ಥಾನ ವಳಲಂಬೆ ಇದರ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ ಹಾಗೂ ಹೆಚ್. ವಿಮಲಾ ಹೊಸೊಳಿಕೆ ಮತ್ತು ಮನೆಯವರು ಸಹಾಯಧನ ನೀಡಿ ಮಹತ್ವದ ಈ...
Ad Widget

ಸುಳ್ಯ ಹಬ್ಬದ ಆಮಂತ್ರಣ ಬಿಡುಗಡೆ – ಡಿ.25, 26ರಂದು ದಶ ಸಂಭ್ರಮ

ಡಾ. ಕುರುಂಜಿ ವೆಂಕಟ್ರಮಣ ಗೌಡರ 93 ನೇ ಜಯಂತ್ಯೋತ್ಸವದ ಕೆವಿಜಿ ಸುಳ್ಯ ಹಬ್ಬ ದಶಮಾನೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕೆವಿಜಿ ಸುಳ್ಯಹಬ್ಬ ಕಚೇರಿಯಲ್ಲಿ ಡಿ.16 ರಂದು ನಡೆಯಿತು.ಡಿ.25 ಹಾಗೂ 26 ರಂದು ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ.ಈ ಸಂದರ್ಭ ಕೆವಿಜಿ ಸುಳ್ಯ ಹಬ್ಬದ ಆಚರಣೆ ಸಮಿತಿ ಅಧ್ಯಕ್ಷ ಪಿ.ಸಿ ಜಯರಾಮ, ಸ್ಥಾಪಕಾಧ್ಯಕ್ಷ...

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಃಪೂಜೆ ಆರಂಭ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ಗುರುವಾರದಂದು ಧನುಃಪೂಜೆ ಆರಂಭಗೊಂಡಿದೆ. ಧನುಃಪೂಜೆಯು ಜ.14 ಶುಕ್ರವಾರದ ತನಕ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 05.15 ಕ್ಕೆ ಸರಿಯಾಗಿ ಧನುಪೂಜೆ ಆರಂಭಗೊಳ್ಳಲಿದೆ. ಧನುಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ರೂ.250 ರ ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳಾದ ಸುಹಾನ.ಪಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : ನೀರಿನಲ್ಲಿ ಬಂಡಿ ಉತ್ಸವ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ.15 ರ ಬುಧವಾರದಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯಗೊಂಡಿತು.ಡಿ.15 ರಂದು ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈಧಿಕ ವಿಧಾನಗಳನ್ನು ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು. ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರಾ ಮಹೋತ್ಸವವು ಸಮಾಪ್ತಿಯಾಯಿತು. ಈ ದಿನ...

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಪ್ರಾರಂಭ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದಿನಾಂಕ 16-12-2021 ರಿಂದ 14-01-2022 ರವರೆಗೆ ಪ್ರಾತಃಕಾಲ 5:00 ಗಂಟೆಗೆ ಧನುಪೂಜೆ ನಡೆಯಲಿದೆ. ದಿನಾಂಕ 14-01-2022 ರಂದು ಪ್ರಾತಃಕಾಲ 4:00 ಗಂಟೆಯಿಂದ ಉಧ್ಯಾಪನ ಧನುಪೂಜೆ ಹಾಗೂ ಮದ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಹಾಗೂ ವನಭೋಜನ ಕಾರ್ಯಕ್ರಮ ನಡೆಯಲಿದೆ. ವರದಿ :- ಉಲ್ಲಾಸ್ ಕಜ್ಜೋಡಿ

ಡಿ.16,17 ರಂದು ಬ್ಯಾಂಕ್ ನೌಕರರ ಮುಷ್ಕರ – ಕ್ಯಾಶ್ ಮುಗಿಯುವ ತನಕ ಇರಲಿದೆ ಎಟಿಎಂ ಸೇವೆ

ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಸರಕಾರದ ಯೋಜನೆ ಖಂಡಿಸಿ ಎಲ್ಲಾ ಬ್ಯಾಂಕ್ ನೌಕರರು ಡಿ.16 ಮತ್ತು 17 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಎಟಿಎಂ ಗಳಲ್ಲಿ ಕ್ಯಾಶ್ ಮುಗಿಯುವ ತನಕ ಇರಲಿದೆ ಎಂದು ತಿಳಿದುಬಂದಿದೆ. ಆದರೂ ಸಾರ್ವಜನಿಕರು ಮನೆಯಿಂದ ಹೊರಡುವಾಗಲೇ ತುರ್ತು ಅವಶ್ಯಕತೆಗೆ ಬೇಕಾದ ಹಣದ ಜತೆಗೆ ಹೊರಡುವುದು ಒಳಿತು.

ಸುಬ್ರಹ್ಮಣ್ಯ-ಐನೆಕಿದು ಸೊಸೈಟಿಗೆ ಜಿಲ್ಲಾ ಬ್ಯಾಂಕ್ ನಿಂದ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

ಡಿ.14 ರಂದು ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅದ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ಅದ್ಯಕ್ಷ ಜಯಪ್ರಕಾಶ್ ಕೂಜುಗೋಡು ಹಾಗೂ ಮುಖ್ಯ...

ಸುಬ್ರಹ್ಮಣ್ಯ : ಶೌಚಾಲಯ ಉದ್ಘಾಟನೆ

ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಕುಮಾರಧಾರ ಸ್ನಾನ ಘಟ್ಟದ ಬಳಿಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಯಾತ್ರಾರ್ಥಿಗಳ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ನಿರ್ಮಿಸಲಾಗಿದ್ದು, ಡಿ.14 ರಂದು ಮಠದ ಆಡಳಿತಾಧಿಕಾರಿ ಸುದರ್ಶನ್ ಜೋಯಿಸ್ ಹಾಗೂ ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಈ ಶೌಚಾಲಯವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ...

ಮಡಿಕೇರಿ ಎಸ್ ಐ ಚಿನ್ನಪ್ಪ ನಾಯ್ಕ ಅಂಜೇರಿ ನಿಧನ

ಮಡಿಕೇರಿಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಅಂಜೇರಿ ನಿವಾಸಿ ಚಿನ್ನಪ್ಪ ನಾಯ್ಕರವರು ಡಿ.15 ರಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿನ್ನಪ್ಪ ನಾಯ್ಕರವರು ರಜೆಯ ಮೇಲೆ ಮನೆಯಲಿದ್ದು, ಡಿ.15 ರಂದು ಮುಂಜಾನೆ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ....
Loading posts...

All posts loaded

No more posts

error: Content is protected !!