Ad Widget

ಹರಿಹರ ಪಲ್ಲತ್ತಡ್ಕ : ಪಾದಾಚಾರಿ ಮಹಿಳೆಗೆ ಸ್ಕೂಟಿ ಡಿಕ್ಕಿ

ಡಿ.22 ರಂದು ಕೊಲ್ಲಮೊಗ್ರ ಕಡೆಯಿಂದ ಗಡಿಕಲ್ಲಿನ ಜಯಪ್ರಕಾಶ್ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿಯೊಂದು ರಸ್ತೆಯಲ್ಲಿ ಹೋಗುತ್ತಿದ್ದ ಪುಟ್ಟಮ್ಮ ಎಂಬ ವೃದ್ಧ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಅವರ ಬಲ ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಸ್ಕೂಟಿ ಸವಾರ ರಸ್ತೆಗೆ ಬಿದ್ದು ತಲೆಗೆ ಹಾಗೂ ಕೈಗೆ ಸ್ವಲ್ಪ ಗಾಯವಾಗಿದ್ದು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂದರ್ಭದಲ್ಲಿ...

ಜ.17: ಬಳ್ಪ ಉಳ್ಳಾಕುಲು ಮತ್ತು ಶಿರಾಡಿ ರಾಜನ್ ದೈವಗಳ ಪುನರ್‌ಪ್ರತಿಷ್ಠೆ

ಬಳ್ಪ ಮತ್ತು ಕೇನ್ಯ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತುಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳಪುನರ್‌ಪ್ರತಿಷ್ಠಾ ಮಹೋತ್ಸವ 2022 ಜನವರಿ 17 ಸೋಮವಾರದಂದು ಪೂರ್ವಾಹ್ನ 08-45ರ ಮೀನ ಲಗೃದ ಶುಭ ಮುಹೂರ್ತದಲ್ಲಿಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರನೇತೃತ್ವದಲ್ಲಿ ವಿವಿಧ ತಾಂತ್ರಿಕ ವೈದಿಕ ವಿಧಿವಿಧಾನಗಳೊಂದಿಗೆ ಜರಗಲಿದೆ. ಜನವರಿ 16 ರಿಂದ ಆರಂಭಗೊಂಡು ಜ....
Ad Widget

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ – 100 ಕೋಟಿಗೂ ಮಿಕ್ಕಿ ವ್ಯವಹಾರ,43.5ಲಕ್ಷ ನಿವ್ವಳ ಲಾಭ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನವಾರ್ಷಿಕ ಮಹಾಸಭೆಯು ಡಿ.19 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು. ಸಂಘವು ರೂ.100 ಕೋಟಿ 42 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.43ಲಕ್ಷ 64,287.81 ನಿವ್ವಳ ಲಾಭ ಗಳಿಸಿದೆ. ರೂ.1,73,03,559.32 ವಿವಿಧ ನಿಧಿಗಳಿವೆ. ರೂ.13,65,59,169.95...

ಜಾತ್ಯಾತೀತ ದಳದ ತಾಲೂಕು ಅಧ್ಯಕ್ಷರಾಗಿ ಸುಕುಮಾರ ಕೋಡ್ತುಗುಳಿ

ಸುಳ್ಯ ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ನ್ಯಾಯವಾದಿ ಸುಕುಮಾರ ಕೋಡ್ತುಗುಳಿಯವರನ್ನು ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೇಮಕಗೊಳಿಸಿದ್ದಾರೆ. ಇವರು 1990 ರಿಂದ 99 ರವರೆಗೆ ಯುವ ಜನತಾದಳದ ಅಧ್ಯಕ್ಷರಾಗಿ ದುಡಿದಿದ್ದಾರೆ. ಯುವ ಜನತಾದಳದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವಿಜಯ ರವರು ಲೋಕಸಭಾ ಚುನಾವಣೆಗೆ...

ಕಾರಣವೇನು…?

ಸುತ್ತಲಿನ ಪರಪಂಚ ಕತ್ತಲಾಗಿಹುದು, ನಾ ಸಾಗುವ ದಾರಿಯು ಮುಚ್ಚಿಹೋಗಿಹುದು…ನನ್ನ ಬದುಕು ಇಂದು ಬೂದಿ ಮುಚ್ಚಿದ ಕೆಂಡದಂತಾಗಿಹುದು,ಇದು ಸಿಡಿಯುವುದೋ ಶಮನಗೊಳ್ಳುವುದೋ ತಿಳಿಯದಾಗಿಹುದು…ಸಿಡಿದರೆ ನನ್ನ ಬದುಕು ಅಂತ್ಯವಾಗುವುದು, ಶಮನಗೊಂಡರೆ ಹೊಸ ಬದುಕು ಆರಂಭವಾಗುವುದು… ಪ್ರತಿಯೊಂದು ಅಂತ್ಯಕ್ಕೂ ಅರಂಭವಿಹುದು, ಪ್ರತಿಯೊಂದು ಘಟನೆಗೂ ಕಾರಣವೊಂದಿಹುದು…ಆ ಕಾರಣವಿಂದು ನಿಗೂಢವಾಗಿಹುದು…ಆ ನಿಗೂಢತೆಯ ಮೌನದಲ್ಲೂ ಉತ್ತರವೊಂದಡಗಿಹುದು…ಆ ಉತ್ತರ ತಿಳಿಯುವ ದಾರಿಯು ಮುಚ್ಚಿ ಹೋಗಿಹುದು, ಯಾರ ಕಣ್ಣಿಗೂ...

ಜ.3 ರಂದು ವರ್ತಕ ಸಮುದಾಯ ಭವನ ಲೋಕಾರ್ಪಣೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ವರ್ತಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವರ್ತಕ ಸಮುದಾಯ ಭವನದಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷ ಸುಧಾಕರ...

ಡಾ| ಮುರಳಿ ಮೋಹನ್ ಚೂಂತಾರು ಅವರಿಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ

ಕಲಬುರಗಿಯ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನ ನೀಡುವ ಡಾ. ಪಿಎಸ್.ಶಂಕರ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿಗೆ ದಂತವೈದ್ಯ ಡಾ.ಮುರಳಿಮೋಹನ ಚೂಂತಾರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು 2022ರ ಜನವರಿ 1ರಂದು ನಡೆಯುವ ಯುವ ಡಾ.ಪಿ.ಎಸ್. ಶಂಕರ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಠಿ ತಿಳಿಸಿದ್ದಾರೆ.ಡಾ.ಮುರಳಿಮೋಹನ್ ಚೂಂತಾರು ಅವರು ವೈದ್ಯಕೀಯಕ್ಷೇತ್ರಕ್ಕೆ...

ಐವರ್ನಾಡು : ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆ ಶುಭಾರಂಭ

ಐವರ್ನಾಡಿನ ಡಿವಿಜಿ ಕಾಂಪ್ಲೆಕ್ಸ್ ನಲ್ಲಿ ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆಯು ಡಿ.23ರಂದು ಐವರ್ನಾಡಿನಲ್ಲಿ ಶುಭಾರಂಭಗೊಂಡಿತು.ಪರೋಹಿತ ವಿಶ್ವೇಶ್ವರಯ್ಯ ಬಾಳಿಲ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ| ಬಾಲಸುಬ್ರಹ್ಮಣ್ಯ ಭಟ್, ಧರ್ಮಪಾಲ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಮ್ಮಲ್ಲಿ ರೆಡಿಮೆಡ್ಸ್ ಬಟ್ಟೆಗಳು,ಫ್ಯಾನ್ಸಿ ಐಟಂಗಳು ಮಕ್ಕಳ ಆಟಿಕೆಗಳು,ಮಕ್ಕಳ ಪುಸ್ತಕಗಳು ಹಾಗೂ ಇನ್ನಿತರ ವಸ್ತುಗಳು ದೊರೆಯುತ್ತದೆ ಎಂದು ಮಾಲಕರಾದ ಶ್ವೇತಾ...

ವಿವಾಹ ಮುಂದೂಡಲಾಗಿದೆ: ಪ್ರವೀಣ ಪಿಲಿಕಜೆ-ಚೈತ್ರ ಬೊಳ್ಳಾಜೆ

ಡಿ.26ರಂದು ನಡೆಯಬೇಕಿದ್ದ ಅಮರಮುಡ್ನೂರು ಗ್ರಾಮದ ಪಿಲಿಕಜೆ ಶ್ರೀ ಸೀತಾರಾಮ ಗೌಡರ ಪುತ್ರ ಪ್ರವೀಣ ಪಿಲಿಕಜೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ(ಮಡ್ತಿಲ) ಶ್ರೀ ಗಣೇಶರವರ ಪುತ್ರಿ ಚೈತ್ರ ಬೊಳ್ಳಾಜೆ ರವರ ವಿವಾಹವು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದು, ಜ.20 ಗುರುವಾರದಂದು ಪೂರ್ವಾಹ್ನ ಗಂಟೆ 10.22ರ ಮೀನಾ ಲಗ್ನದ ಶುಭಮುಹೂರ್ತದಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ.

ಶರತ್ ಮೆತ್ತಡ್ಕ ಮತ್ತು ಹರ್ಷಿತಾ ಕಾನಡ್ಕ ವಿವಾಹ ಮುಂದೂಡಲಾಗಿದೆ

ದಿನಾಂಕ : 26-12-2021ರಂದು ನಡೆಯಬೇಕಾಗಿದ್ದ ದೇವಚಳ್ಳಗ್ರಾಮದ ಮೆತ್ತಡ್ಕ ಶ್ರೀಮತಿ ಪದ್ಮಾವತಿ ಮತ್ತು ಹೊನ್ನಪ್ಪ ಗೌಡರ ಪುತ್ರ ಶರತ್ ಮತ್ತು ಅಮರಮುಡ್ನೂರು ಗ್ರಾಮದ ಕಾನಡ್ಕ ಶ್ರೀಮತಿ ಪುಷ್ಪವೇಣಿ ಮತ್ತು ಯಶವಂತ ಗೌಡರ ಪುತ್ರ ಹರ್ಷಿತಾರವರ ವಿವಾಹ ಕಾರ್ಯಕ್ರಮ ವು ಕಾರಣಾಂತರಗಳಿಂದ ಮುಂದೂಡಲಾಗಿದೆ. ಇವರ ವಿವಾಹ ಕಾರ್ಯಕ್ರಮವು ಇದೇ ಬರುವ ದಿನಾಂಕ 23-01-2022ರಂದು ವಿಷ್ಣು ಕಲಾ ಮಂದಿರ ಮಾವಿನಕಟ್ಟೆಯಲ್ಲಿ...
Loading posts...

All posts loaded

No more posts

error: Content is protected !!