ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಉಮ್ಮರ್ ಫಾರೂಕ್ ಕೊಚ್ಚಿಯಲ್ಲಿ ಬಂಧನ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎನ್‌ಐಎ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದು, ಒಟ್ಟು ಬಂಧಿತ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಬಂಧನಕ್ಕೆ...

10ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತುಳು ವಿಕಿಪೀಡಿಯಾ – ಪ್ರಸ್ತುತ ತುಳು ವಿಕಿಪೀಡಿಯಾದಲ್ಲಿ 3,700ಕ್ಕೂ ಅಧಿಕ ಲೇಖನ ಲಭ್ಯ

ವಿಶ್ವದಾದ್ಯಂತ ತುಳು ಭಾಷೆಯಲ್ಲಿ ಉಚಿತ ಜ್ಞಾನವನ್ನು ಹಂಚುತ್ತಿರುವ ತುಳು ವಿಕಿಪೀಡಿಯಾ ತನ್ನ 10ನೇ ವಾರ್ಷಿಕೋತ್ಸವವನ್ನು ಆಗಸ್ಟ್ 6, 2026ರಂದು ಆಚರಿಸುತ್ತಿದೆ. 2016ರಲ್ಲಿ ಆರಂಭವಾದ ತುಳು ವಿಕಿಪೀಡಿಯಾ, ಕಳೆದ ಒಂದು ದಶಕದಲ್ಲಿ ಸ್ವಯಂಸೇವಕರ ನಿರಂತರ ಶ್ರಮದಿಂದ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಪ್ರಸ್ತುತ ತುಳು ವಿಕಿಪೀಡಿಯಾದಲ್ಲಿ 3,700ಕ್ಕೂ ಅಧಿಕ ಲೇಖನಗಳು ಲಭ್ಯವಿದ್ದು, ಭಾಷೆ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ,...
Ad Widget

ಸುಬ್ರಹ್ಮಣ್ಯ : ಕಸ್ತೂರಿ ರಂಗನ್ ವರದಿಯ ಏಳನೇ ಅಧಿಸೂಚನೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿ ; “ಕಸ್ತೂರಿ ರಂಗನ್ ವರದಿ ವಿರುದ್ಧ ಮತ್ತೆ ಹೋರಾಟಕ್ಕೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಜ್ಜು” : ಕಿಶೋರ್ ಶಿರಾಡಿ

ಕುಕ್ಕೆ ಸುಬ್ರಹ್ಮಣ್ಯ, ಆ.02 : “ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ರೈತರು ಹಾಗೂ ಗ್ರಾಮೀಣ ಜನರಿಗೆ ತೊಂದರೆಯಾಗಬಹುದಾದ ಯೋಜನೆಗಳ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿರುವ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಇದೀಗ ಮತ್ತೊಮ್ಮೆ ಕಸ್ತೂರಿ ರಂಗನ್ ವರದಿಯ ವಿರುದ್ಧ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನಲ್ಲಿ ಆ.02ರಂದು ನಡೆದ...

ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ವೇತನಸಹಿತ ಮಾತೃತ್ವ ರಜೆ: ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು, ಜು.17: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕಿಯರಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಹತ್ವದ ಕೊಡುಗೆಯನ್ನು ಘೋಷಿಸಿದೆ. ಇನ್ನು ಮುಂದೆ 90 ದಿನಗಳ ವೇತನಸಹಿತ ಮಾತೃತ್ವ ರಜೆ ನೀಡಲಾಗುವುದು. ಮಾತೃತ್ವ ರಜೆಯ ಅವಧಿಯಲ್ಲಿ ಬೋಧನಾ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ, ಆ ಅವಧಿಗೆ ಬದಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು...

ಎಸ್.ಐ.ಆರ್ ಕಾರ್ಯಕ್ಕಾಗಿ ಹಗ್ಗದ ಮೂಲಕ ಹೊಳೆ ದಾಟಿದ ಬಿ.ಎಲ್.ಓ – ಕರ್ತವ್ಯ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು – ಶಾಶ್ವತ ಸೇತುವೆ ಇಲ್ಲದೇ ಸ್ಥಳೀಯರ ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗ

ವರದಿ : ಉಲ್ಲಾಸ್ ಕಜ್ಜೋಡಿಕರ್ನಾಟಕ ರಾಜ್ಯದಾದ್ಯಂತ ಇದೀಗ ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು “ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ(ಎಸ್.ಐ.ಆರ್)” ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಪ್ರತಿಯೊಬ್ಬ ಮತದಾರರ ಹೆಸರು, ವಯಸ್ಸು, ವಿಳಾಸ ಹಾಗೂ ಕುಟುಂಬದ ವಿವರಗಳನ್ನು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುವ ಕಡ್ಡಾಯ ಪ್ರಕ್ರಿಯೆ ಇದಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು(ಬಿ.ಎಲ್.ಒ) ಮನೆ-ಮನೆಗೆ ತೆರಳಿ ಎನ್ಯೂಮರೇಷನ್...

ಕುಕ್ಕೆ ಸುಬ್ರಹ್ಮಣ್ಯ : ಹೋರಿ ದಾಳಿ ; ಗಂಭೀರ ಗಾಯಗೊಂಡ ಇಬ್ಬರು ಮಹಿಳೆಯರು – ಮತ್ತೆ ಮುನ್ನೆಲೆಗೆ ಬಂದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಸಮಸ್ಯೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ಮಹಿಳೆಯರಿಬ್ಬರು ಹೋರಿ ದಾಳಿಯಿಂದ ಗಂಭೀರ ಗಾಯಗೊಂಡ ಘಟನೆ ಜು.07ರಂದು ಸಂಭವಿಸಿದ್ದು, ಈ ಘಟನೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ಅಗತ್ಯ ಸೌಲಭ್ಯಗಳ ಅಭಾವದ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ಲಲಿತ್ ಎಂಬುವವರು ಆದಿ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ : ವೈದ್ಯರ ನೇಮಕಕ್ಕೆ ಭರವಸೆ – ಹೋರಾಟ ಮುಂದುವರಿಸಲು ಗ್ರಾಮಸ್ಥರ ನಿರ್ಧಾರ

ಕುಕ್ಕೆ ಸುಬ್ರಹ್ಮಣ್ಯ, ಜುಲೈ 7: ಜುಲೈ 10ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ತಿಮ್ಮಯ್ಯ ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಹತ್ವದ ಸಭೆ ನಡೆಸಿದರು. ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೈದ್ಯರ...

ಸುಳ್ಯ: ಯು.ಟಿ. ಖಾದರ್ ಗೆ ಸಾರ್ವಜನಿಕ ಸನ್ಮಾನ | ಜನರ ಪ್ರೀತಿ ಮತ್ತು ಪ್ರೋತ್ಸಾಹವೇ ದೊಡ್ಡ ಶಕ್ತಿ; ಸಚಿವ ಯು.ಟಿ. ಖಾದರ್

ಸುಳ್ಯ, ಜು. 6: ಅಧಿಕಾರ ಎಂಬುದು ಕೇವಲ ಒಂದು ಹುದ್ದೆಯಲ್ಲ; ಅದು ಲಕ್ಷಾಂತರ ಜನರ ಅಪೇಕ್ಷೆ, ಆಶಯ ಹಾಗೂ ಕನಸುಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸ್ಥಾನವಾಗಿದೆ. ಜನಸಾಮಾನ್ಯರು ನೀಡುವ ಪ್ರೀತಿ ಮತ್ತು ಪ್ರೋತ್ಸಾಹವೇ ದೊಡ್ಡ ಮಟ್ಟದ ಶಕ್ತಿ ಎಂದು ಕರ್ನಾಟಕ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್...

“ದ.ಕ.ಗೌಡ ಸಮುದಾಯದ ಬಗ್ಗೆ ಎಸ್. ಆರ್.ವಿಶ್ವನಾಥ್ ಹೇಳಿಕೆ ಖಂಡನೀಯ” – ಹೇಳಿಕೆ ಹಿಂಪಡೆಯುವಂತೆ ಸುಳ್ಯ ಗೌಡರ ಯುವಸೇವಾ ಸಂಘ ಆಗ್ರಹ

“ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕರ್ನಾಟಕ ರಾಜ್ಯದ ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಗೌಡ ಸಮುದಾಯದವರು ಒಕ್ಕಲಿಗರಲ್ಲ ಎಂದು ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಅದನ್ನು ತಕ್ಷಣ ಹಿಂಪಡೆಯಬೇಕು” ಎಂದು ಸುಳ್ಯ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ಆಗ್ರಹಿಸಿದರು. ಸುಳ್ಯದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಕುಕ್ಕೆ ಸುಬ್ರಹ್ಮಣ್ಯ : 40 ಸಾವಿರಕ್ಕಿಂತಲೂ ಅಧಿಕ ಭಕ್ತಾಧಿಗಳ ಆಗಮನ

ಸುಬ್ರಹ್ಮಣ್ಯ ಜೂನ್ 27 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂ.27 ಶನಿವಾರದಂದು 40 ಸಾವಿರಕ್ಕಿಂತಲೂ ಅಧಿಕ ಭಕ್ತಾಧಿಗಳ ಆಗಮನವಾಗಿದೆ. ಶುಕ್ರವಾರ ರಂಜಾನ್ ರಜೆ, ಶನಿವಾರ ನಾಲ್ಕನೇ ಶನಿವಾರ ರಜೆ ಹಾಗೂ ಆದಿತ್ಯವಾರ ರಜೆಯಾಗಿ ಸರಣಿ ರಜೆಗಳು ಬಂದ ಕಾರಣ ಸರಕಾರಿ ಕಚೇರಿಗಳು ಇನ್ನಿತರ ಸಂಘ-ಸಂಸ್ಥೆಗಳ...
Loading posts...

All posts loaded

No more posts

error: Content is protected !!