- Sunday
- May 18th, 2025

ಸುಳ್ಯ ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಜು.25 ರಂದು ರಾತ್ರಿ ನಡೆದ ಭೀಕರ ಅಪಘಾತದಲ್ಲಿ ರಾಜುಎಂಬವರು ಮೃತಪಟ್ಟ ಘಟನೆ ನಡೆದಿದೆ. ಸುಳ್ಯದಿಂದ ಮಂಗಳೂರು ಕಡೆ ಹೊಗುತ್ತಿದ್ದ ಬಸ್ ಹಾಗೂಹಳೆಗೇಟು ಕಡೆಯಿಂದ ಸುಳ್ಯ ಕಡೆಗೆ ರಾಜು ಎಂಬವರುಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಗೆ ಗುದ್ದಿದೆ. ಸುಳ್ಯಸರಕಾರಿ ಆಸ್ಪತ್ರೆ ಹಿಂಬದಿ ನಿವಾಸಿ ಸುಳ್ಯದಲ್ಲಿ ಸಿಸಿ ಕ್ಯಾಮರಾಅಳವಡಿಕೆ ಮತ್ತು ಸರ್ವಿಸ್ ವೃತ್ತಿ...

ಸಂಪಾಜೆ ಗ್ರಾಮದ ಸುಳ್ಯಕೋಡಿ ನಿವಾಸಿ ಐಸಾಕ್ (72) ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು .ಮೃತರು ಪತ್ನಿ, ಪುತ್ರ ಮಾಜಿ ಗ್ರಾ. ಪಂ.ಸದಸ್ಯ ಲೂಕಾಸ್. ಟಿ. ಐ. ಪುತ್ರಿಯರಾದ ಪ್ರಮೀಳಾ, ಹಾಗೂ ಮಿನಿ ಮತ್ತು ಬಂಧುಗಳನ್ನು ಅಗಲಿದ್ದಾರೆ

ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿ ನಿವಾಸಿ ವಿನಯ್ ಬಾಳಿಲ (ಕುಕ್ಕುತ್ತಡಿ) ಅವರು ಕಳೆದ ರಾತ್ರಿ ಮನೆ ಸಮೀಪದ ಮರವೊಂದಕ್ಕೆ ಜು.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. 6 ತಿಂಗಳ ಹಿಂದೆ ವಿವಾಹವಾಗಿದ್ದ ಇವರು ಪತ್ನಿ, ತಂದೆ ಬಾಬು ಗೌಡ, ತಾಯಿ ಚಂದ್ರಾವತಿ, ಸಹೋದರ ಸುರೇಶ, ಸಹೋದರಿ ಶ್ರೀಮತಿ ನವೀನ...

ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಹಾಗೂ ಪ್ರೇಮರವರ ಏಕೈಕ ಪುತ್ರ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಇಂದು ನಡೆದಿದೆ.ಕಳೆದ 5 ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಇಂದು ನಿಧನರಾದರೆಂದು ತಿಳಿದುಬಂದಿದೆ.ಇವರು ಸುಬ್ರಹ್ಮಣ್ಯ...

ಉಬರಡ್ಕ ಮಿತ್ತೂರು ಗ್ರಾಮದ ನೀರಬಿದಿರೆ ವಿನ್ಸೆಂಟ್ ಡಿಸೋಜ ಅಲ್ಪಕಾಲದ ಅಸೌಖ್ಯದಿಂದ ಜೂ.4 ರಂದು ನಿಧನರಾದರು. ಮೃತರು ತಾಯಿ, 7 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

ಬೆಳ್ಳಾರೆ ಗ್ರಾಮದ ಕಾವಿನಮೂಲೆ ನಿವಾಸಿ, 'ಪ್ರಶಾಂತ್' ಆಟೋದ ಮಾಲಕ ಬಾಬು ಆ್ಯಂಟನಿ ಡಿ ಸೋಜಾರವರು ಅಸೌಖ್ಯದಿಂದ ಜೂ.7ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 61 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮತ್ತು ಓರ್ವ ಪುತ್ರ, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆಲ ದಿನಗಳಿಂದ ಅಸೌಖ್ಯಕ್ಕೊಳಗಾಗಿದ್ದ ಇವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.ಸುಮಾರು 1...

ಗುತ್ತಿಗಾರು ಗ್ರಾಮದ ಕಮಿಲ ಜೊರ್ತೆ ಗುಡ್ಡಪ್ಪ ಗೌಡರ ಪುತ್ರ ಕೌಶಿಕ್ (19) ಅಸೌಖ್ಯದಿಂದ ಜೂ.5 ರಂದು ನಿಧನರಾದರು. ಕಳೆದೆ ಒಂದುವರೆ ವರ್ಷಗಳಿಂದ ಅಂಗಾಂಗ ಬಲಹೀನತೆಗೆ ಒಳಗಾಗಿ ಚಿಕಿತ್ಸೆ ಪಡೆದು, ನಂತರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಮೃತರು ತಾಯಿ ಸುಮಿತ್ರ, ತಮ್ಮ ರಿತೇಶ್ ಹಾಗೂ ತಂಗಿ ಮೌನಿತಾ ರನ್ನು ಅಗಲಿದ್ದಾರೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಸುಳ್ಯದ ಪಂಬೆತ್ತಾಡಿ ಗ್ರಾಮದ ಬಾಣಂತಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಪಂಬೆತ್ತಾಡಿಯ ಮೂಲೆಮನೆ ವಿಶ್ವನಾಥ್ ಗೌಡ ಪುತ್ರಿ ಪೂಜಿತಾ ಮೃತ ಮಹಿಳೆ. ಇವರನ್ನು ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮೊನ್ನೆ ಹೆರಿಗೆಗೆಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ನಿನ್ನೆ ಬೆಳಗ್ಗೆ...

ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿ ಕೃಷ್ಣ (40) ಅಲ್ಪಕಾಲದ ಅಸೌಖ್ಯದಿಂದ ಮೇ.4 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಜಾನಕಿ, ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ. ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬವರು ಮೃತಪಟ್ಟ ದುರ್ದೈವಿ. ಇವರ ಮನೆಯಿಂದ ಸಮೀಪದ ಕಾಡಿನಿಂದ ಪೈಪ್ ನಲ್ಲಿ ನೀರು ಬರುತ್ತಿತ್ತು. ಇಂದು ಶಿವರಾಮ ಗೌಡರು ಪೈಪ್ ಸರಿ ಮಾಡಲೆಂದು ಹೋದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ....

All posts loaded
No more posts