- Monday
- February 24th, 2025

ಕಳಂಜ ಗ್ರಾಮದ ಪಟ್ಟೆ ಶಿವಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಸುನಂದಾ ಪಟ್ಟೆಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶಿವಪ್ಪ ಪೂಜಾರಿ, ಪುತ್ರರಾದ ಭಾಸ್ಕರ, ಸದಾನಂದ, ಪ್ರಶಾಂತ್ ಹಾಗೂ ಪುತ್ರಿಯರಾದ ಅರುಣಾ ಪೈಚಾರು, ಉಮಾವತಿ ಮಾಡಾವು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೇವಚಳ್ಳ ಗ್ರಾಮದ ಮುಂಡೋಡಿ ನಿವಾಸಿ, ಗ್ರಾ.ಪಂ ಮಾಜಿ ಸದಸ್ಯರಾದ ಮೋಹನ ಗೌಡ ಮುಂಡೋಡಿಯವರು ಅಲ್ಪಕಾಲದ ಅಸೌಖ್ಯದಿಂದ ಮೇ 23 ರಂದು ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಐವರ್ನಾಡು ಗ್ರಾಮದ ದಿ.ಕೃಷ್ಣ ಅಂಗಿತ್ತಾಯ ಅವರ ಪುತ್ರ ಉದಯಕುಮಾರ ಭಟ್ ಹಸಿರುತೋಟ (51 ವ) ರವರು ಎ.22ರಂದು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಾಯಿ ಶ್ರೀಮತಿ ಶಾರದಾ, ಪತ್ನಿ ಶ್ರೀಮತಿ ಅಮೃತಲತಾ ಹಾಗೂ ಪುತ್ರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟಿ.ಜಿ ಮುಡೂರು(95) ಇಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಾಡಿನ ಅಗ್ರಮಾನ್ಯ ಸಾಹಿತಿಯಾಗಿದ್ದ ಮುಡೂರುರವರು ತಮ್ಮ ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದ ಇದ್ದರು. ಅಧ್ಯಾಪಕರಾಗಿ, ಸಾಹಿತಿಯಾಗಿ, ಸಂಘಟಕರಾಗಿ ಗುರುತಿಸಿಕೊಂಡಿದ್ದ ಮುಡೂರುರವರಿಗೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅರೆಭಾಷೆ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಕಾಡಮಲ್ಲಿಗೆ, ಹೊಸತು ಕಟ್ಟು, ಅಬ್ಬಿಯ ಮಡಿಲು ಸೇರಿದಂತೆ...

ಕಳಂಜ ಗ್ರಾಮದ ಮಣಿಮಜಲು ಜೈನ ಮನೆತನದ, ಪ್ರಸ್ತುತಮೂಡುಬಿದಿರೆಯಲ್ಲಿ ನೆಲೆಸಿದ್ದಪಿ ಗುಲಾಬಿಯಮ್ಮ ಜ.02ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಮೂಡುಬಿದಿರೆಯ ಜೈನ ಪೇಟೆ ಬಕ್ಕಾರು ಮನೆ ನಿವಾಸಿ ದಿ. ಎಂ ಮಿತ್ರ ಸೇನ ಶೆಟ್ಟಿ ಅವರ ಧರ್ಮಪತ್ನಿಯಾಗಿರುವ ಪಿ ಗುಲಾಬಿ ಅಮ್ಮನವರು ಓರ್ವ ಪುತ್ರ ,ಮೂವರು ಪುತ್ರಿಯರನ್ನು ಅಗಲಿದ್ದಾರೆ. ಧಾರ್ಮಿಕವಾಗಿ ಸಕ್ರಿಯರಾಗಿದ್ದ ಅವರು ಸಮ್ಮೇದ...

ಅಮರಪಡ್ನೂರು ಗ್ರಾಮದ ದಿ.ಸತೀಶ್ ನಾಯ್ಕ ರವರ ಪುತ್ರ ಚೂಂತಾರು ಯೋಗೀಶ್ ಕುಮಾರ್ ಹೃದಯಾಘಾತದಿಂದ ಡಿ.31ರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 22 ವರ್ಷ ವಯಸ್ಸಾಗಿತ್ತು. ಅವರಿಗೆ ಕಳೆದ ಡಿ.27ರಂದು ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ...

ಕಳಂಜ ಗ್ರಾಮದ ಕಳಂಜ ಮನೆ ಶ್ರೀಮತಿ ಸೀತಮ್ಮ ಕಳಂಜ ಇಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 57 ವರ್ಷ ವಯಸ್ಸಾಗಿತ್ತು.ಮೃತರು ಪತಿ ಸುಬ್ರಾಯ ಗೌಡ, ಸಹೋದರಿ ಹೊನ್ನಮ್ಮ, ಪುತ್ರ ಪುರಂದರ ಗೌಡ, ಸೊಸೆ ಶ್ರೀಮತಿ ರಮ್ಯ, ಮೊಮ್ಮಗಳು ಬೇಬಿ ಜನನಿ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ನಳಿನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹತ್ತಿರದ ಗುಡ್ಡದಿಂದ ಕಡವೆ...

ಯಕ್ಷರಂಗದ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ರವರು ಅ.12ರಂದು ಬೆಳಗ್ಗೆ ವಿಧಿವಶರಾಗಿದ್ದು, ಅವರಿಗೆ 66 ವರ್ಷ ವಯಸ್ಸಾಗಿತ್ತು.ಇವರು 1955 ರಲ್ಲಿ ಪದ್ಯಾಣ ತಿರುಮಲೇಶ್ವರ ಭಟ್ ಹಾಗೂ ಸಾವಿತ್ರಿ ದಂಪತಿಗಳ ಮೂರನೇ ಮಗನಾಗಿ ಜನಿಸಿದ್ದು, ಕಳೆದ 40 ವರ್ಷಗಳಿಂದ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆ ಕ್ಷೇತ್ರದಲ್ಲಿ ಅಗ್ರಗಣ್ಯ ಕಲಾವಿದರಾಗಿ ಪ್ರಸಿದ್ದರಾಗಿದ್ದಾರೆ.ಪದ್ಯಾಣ ಗಣಪತಿ ಭಟ್ ಅವರು ಚೌಡೇಶ್ವರಿ, ಕುಡಾವು,...

ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಉಳುವಾರಿನ ಮಹಿಳೆಯ ಮೃತದೇಹ ಪೆರಾಜೆ ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ನಾಪತ್ತೆಯಾಗಿದ್ದರು. ತೊಡಿಕಾನ ಅರಂತೋಡಿನ ಗ್ರಾಮಸ್ಥರು, ಅಗ್ನಿಶಾಮಕ ದಳ, ಪೈಚಾರಿನ...

All posts loaded
No more posts