Ad Widget

ಜನಾರ್ಧನ ಮಾವಿನಕಟ್ಟೆ ನಿಧನ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಜನಾರ್ದನ ಗೌಡರವರು ಅಸೌಖ್ಯದಿಂದ ಮೇ ೨೩ ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ರಾಜೇಶ್, ಗಾಯಕ ಮತ್ತು ಅಧ್ಯಾಪಕ ಶಶಿಧರ, ಜಯಂತ, ಅಶೋಕ ಹಾಗೂ ಪುತ್ರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಜ್ಯೋತಿ,ಅಳಿಯಂದಿರು, ಸೊಸೆಯಂದಿರನ್ನು ಅಗಲಿದ್ದಾರೆ.ಜನಾರ್ಧನ ಗೌಡರವರು ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಅವರು ಯಕ್ಷಗಾನ ಕಲಾವಿದರಾಗಿಯೂ ಜಯಪ್ರಿಯರಾಗಿದ್ದದರು....

ಮಣಿಕ್ಕಾರ ಟ್ಯಾಪಿಂಗ್ ಕಾರ್ಮಿಕ ಆತ್ಮಹತ್ಯೆ

ಪೆರುವಾಜೆ ಗ್ರಾಮದ ಮಣಿಕ್ಕಾರ ಎಂಬಲ್ಲಿ ವೃದ್ದರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.23 ರಂದು ನಡೆದಿದೆ.ಮಣಿಕ್ಕಾರ ಕೋಡಿಯಡ್ಕ ನಿವಾಸಿ ಶಬರಿನಾಥನ್ (70) ಎಂಬವರು ಮನೆಯ ಸಮೀಪದ ಗೇರು ಮರಕ್ಕೆ ಲುಂಗಿಯಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದುಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದ ಇವರು ಮಾನಸಿಕ ಖಿನ್ನತೆಗೆ ಒಳಪಟ್ಟು...
Ad Widget

ವಿದ್ಯುತ್ ಶಾಕ್ ವಿದ್ಯಾರ್ಥಿ ಮೃತ್ಯು

ಕೊಡಿಯಾಲ ಗ್ರಾಮದ ರಾಮಕುಮೇರು ಎಂಬಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಮೇ. 18 ರಂದು ಸಂಜೆ ನಡೆದಿದೆ.ರಾಮಕುಮೇರು ದಿ. ಸೋಮಶೇಖರ ಕುಂದಲ್ಪಾಡಿ ಎಂಬವರ ಪುತ್ರ ನಿಶಾಂತ್ (17 ) ಮನೆಯ ಸಮೀಪದ ಮಾವಿನ ಮರದಿಂದ ಅಲ್ಯುಮಿನಿಯಂ ಗಳೆಯಿಂದ ಮಾವಿನ ಹಣ್ಣನ್ನು ಕೊಯ್ಯುತ್ತಿರುವಾಗ ಸಮೀಪವಿದ್ದ ವಿದ್ಯುತ್ ಲೈನ್‌ಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ...

ಜನಾರ್ಧನ ಶಿಲ್ಪಿ ಬಿಲದ್ವಾರ ನಿಧನ

ಹಲವು ವರ್ಷಗಳಿಂದ ಸುಬ್ರಹ್ಮಣ್ಯ ದಲ್ಲಿ ಹಿರಿಯ ಮರದ ಶಿಲ್ಪಿಯಾಗಿದ್ದ ಜನಾರ್ದನ ಆಚಾರ್ಯ (82) ಬಿಲದ್ವಾರ ಮೇ ೧೮ ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಆರು ಜನ ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸಂತೋಷ್ ಡಿಸೋಜ ನಾಯರ್ ಕೆರೆ ನಿಧನ

ಕೂತ್ಕುಂಜ ಗ್ರಾಮದ ನಾಯರ್ ಕೆರೆ ಪಂಜ ಖಾಸಗಿ ಬಸ್ ನಿಲ್ದಾಣದಲ್ಲಿ ಅಮರ ಸುದ್ದಿ ಪತ್ರಿಕೆ ಏಜೆಂಟರಾಗಿದ್ದ ಜೆರಾಲ್ಡ್ ಡಿಸೋಜ ರ ಏಕೈಕ ಪುತ್ರ ಸಂತೋಷ್ ಡಿಸೋಜ (20) ಅಸೌಖ್ಯದಿಂದ ಮೇ.೧೭ ರಂದು ನಿಧನರಾದರು. ಅನಾರೋಗ್ಯಕ್ಕೊಳಗಾಗಿದ್ದ ಸಂತೋಷ್ ನನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ. ತಂದೆ, ತಾಯಿ ಫಿಲೋಮಿನಾ ರನ್ನುಅಗಲಿದ್ದಾರೆ.

ಸುಳ್ಯದಲ್ಲಿ ಜನಪ್ರಿಯರಾಗಿದ್ದ ಸುಗುಣ ಡಾಕ್ಟರ್ ನಿಧನ

ಸುಳ್ಯದಲ್ಲಿ ಹಲವಾರು ವರ್ಷಗಳಿಂದ ಜನಪ್ರಿಯ ವೈದ್ಯರಾಗಿದ್ದ ಡಾ. ಸುಗುಣ ಗೌಡ ಮಿತ್ತಮಜಲು (೭೫)ಮೇ. ೧೫ ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಒರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಳ್ಯದಲ್ಲಿ ಕ್ಲಿನಿಕ್ ನಡೆಸಿ ಖ್ಯಾತ ವೈದ್ಯರಾಗಿದ್ದ ಅವರು ಇತ್ತೀಚೆಗೆ ಕೆ.ವಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಇನ್ನಿಲ್ಲ

ದಶಕಗಳ ಹಿಂದೆ ಭೂಗತ ಜಗತ್ತಿನ ದೊರೆಯಾಗಿದ್ದ ಮುತ್ತಪ್ಪ ರೈ ಇಂದ ಬೆಳಗ್ಗಿನ ಜಾವ ೨ ಗಂಟೆಗೆ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಬೆಂಗಳೂರಿನ ಬಿಡದಿಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದಶಕಗಳಿಂದ ಭೂಗತ ಜಗತ್ತಿನಿಂದ ಹೊರಬಂದು, ಎಲ್ಲಾ ಕೇಸುಗಳಿಂದ ಪಾರಾಗಿ, ಬಳಿಕ ಸಾಮಾಜದಲ್ಲಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದರು....

ಶುಭಕರ ಕ್ರೆಡಿಟ್ ಕೊ – ಆಪರೇಟಿವ್ ಸೊಸೈಟಿ ಮ್ಯಾನೇಜರ್ ವೆಂಕಟೇಶ್ ನಿಧನ

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ವಿ .ಟಿ ವೆಂಕಟೇಶ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.ಇವರು ಹರಿಹರ ಸೊಸೈಟಿಯ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ 2 ವರ್ಷ ದುಡಿದ್ದರು. ಪ್ರಸ್ತುತ ಶುಭಕರ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.

ಕನ್ನಡ ಹಾಸ್ಯ ನಟ ಮೈಕಲ್ ಮಧು ಇನ್ನಿಲ್ಲ

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹಾಸ್ಯ ನಟನೆಯ ಮೂಲಕ ಜನರ ಮನಗೆದ್ದ ಮೈಕಲ್ ಮಧು ಇಂದು ವಿಧಿವಶರಾದರು. ಸೂರ್ಯವಂಶ, ಓಂ, ಶ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಮೈಕಲ್ ಮಧು ಗುರುತಿಸಿಕೊಂಡಿದ್ದರು. ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ವೇಳೆ ಮೈಕಲ್ ಹಠಾತ್ ಆಗಿ ಕೆಳಗೆ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ...
error: Content is protected !!