Ad Widget

ಪದ್ಮಯ್ಯ ಗೌಡ ಕಮಿಲ ನಿಧನ

ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ. ಶೇಷಪ್ಪ ಗೌಡರ ಪುತ್ರ ಪದ್ಮಯ್ಯ ಗೌಡ ಆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಪದ್ಮಾವತಿ,ಮೂವರು ಪುತ್ರಿಯರು, ಅಳಿಯಂದಿರು, ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

ಅಬೂಬಕ್ಕರ್ ಉಸ್ತಾದ್ ಕನಕಮಜಲು ನಿಧನ

ಕನಕಮಜಲಿನ ಅಬೂಬಕ್ಕರ್ ಉಸ್ತಾದ್ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಮಸ್ತದ ಹಿರಿಯ ಗುರುಗಳಾಗಿದ್ದು ಅಪಾರ ಅನುಯಾಯಿಗಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.
Ad Widget

*ಅಮ್ಮಕ್ಕ ಕೆಮನಬಳ್ಳಿ ನಿಧನ*

ಜಾಲ್ಸೂರು ಗ್ರಾಮದ ಕೆಮನಬಳ್ಳಿ ದಿ.ಶೀನಪ್ಪ ಗೌಡರ ಧರ್ಮಪತ್ನಿ ಅಮ್ಮಕ್ಕ ಕೆಮನಬಳ್ಳಿ(87) ಇಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಓರ್ವ ಪುತ್ರ, ಏಳು ಪುತ್ರಿಯರು,ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

*ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈಗೆ ಮಾತೃ ವಿಯೋಗ*

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ ರವರ ತಾಯಿ ಪುಷ್ಪವೇಣಿ ಜೆ ರೈ ಯವರು ಇಂದು ಸ್ವಗೃದಲ್ಲಿ ನಿಧನರಾದರು.

ಗಂಗಮ್ಮ ದೋಳ‌ ನಿಧನ

ಮರ್ಕಂಜ ಗ್ರಾಮದ ದೋಳ ದಿ. ಅನಂತಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ‌ಗಂಗಮ್ಮ ದೋಳ ಜು.23 ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು, ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸ್ ಠಾಣಾ ಮುಖ್ಯಪೇದೆ ಉಮೇಶ್ ನಿಧನ

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಪ್ಪೇರ್ಯ ಗ್ರಾಮದ ಉಮೇಶ್ ಇವರು(47 ವರ್ಷ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಕೆಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.ಮೃತರು ತಾಯಿ ಕಮಲ,ಪತ್ನಿ ತೀರ್ಥಕುಮಾರಿ,ಓರ್ವ ಪುತ್ರ,ಓರ್ವ ಪುತ್ರಿ,ಐವರು ಸಹೋದರರು,ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ನಿಧನ

ಸುಳ್ಯ ಚೆನ್ನಕೇಶವ ದೇವಸ್ಥಾನವೂ ಸೇರಿದಂತೆ ಹಲವಾರು ದೇವಾಲಯ ಗಳ ತಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರು ರಾತ್ರಿ 12.30 ಕ್ಕೆ ನಿಧನರಾದುದಾಗಿ ತಿಳಿದುಬಂದಿದೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಯನಿಕ್ಕೊಳಗಾಗಿ ಎರಡು ದಿನಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಅಗಲ್ಪಾಡಿಯಲ್ಲಿ ಅವರು ನಲೆಸಿದ್ದರು. ಮೃತರು...

ವಾಕಿಂಗ್ ವೇಳೆ ಹೃದಯಾಘಾತ ಸುಬ್ರಹ್ಮಣ್ಯ ಶಾಸ್ತ್ರಿ ವಿಧಿವಶ

ನಿವೃತ್ತ ಯೋಧ , ಗುತ್ತಿಗಾರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಗುತ್ತಿಗಾರು ನಿವಾಸಿ ಸುಬ್ರಹ್ಮಣ್ಯ ಶಾಸ್ತ್ರಿಯವರು ಇಂದು ಮುಂಜಾನೆ ವಾಕಿಂಗ್ ಹೋಗುತ್ತಿದ್ದಾಗ ಹೃದಯಾಘಾತದಿಂದ ನಿಧನರಾದ ಘಟನೆ ವರದಿಯಾಗಿದೆ . ಅವರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು . ಶಾಸ್ತ್ರಿಯವರು ಪ್ರತಿದಿನ ಬೆಳಿಗ್ಗೆ 4.30 ಕ್ಕೆ ವಾಕಿಂಗ್ ಹೊರಡುತ್ತಿದ್ದರು . ವಳಲಂಬೆ...

ಸುಂದರಿ ಕೆರೆಮೂಲೆ ನಿಧನ

ಸುಳ್ಯ ಕಸಬಾ ಕೆರೆಮೂಲೆ ನಿವಾಸಿ ದಿ. ಸುಕುಮಾರ ಬಂಗೇರರವರ ಪತ್ನಿ ಸುಂದರಿಯ(62 ) ಹೃದಯಾಘಾತದಿಂದ ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಕೆಲದಿನದ ಹಿಂದೆ ಎದೆನೋವು ಕಾಣಿಸಿಕೊಂಡ ಇವರನ್ನು ಸುಳ್ಯದ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಪರೀಕ್ಷೆ ವೇಳೆ ನ್ಯುಮೋನಿಯಾ ಇರುವುದು ಗೊತ್ತಾಗಿ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಅವರು ಹೃದಯಾಘಾತದಿಂದ ನಿಧನರಾದರು. ಸುಂದರಿಯವರು ರೋಟರಿ...

ಸುಬ್ರಹ್ಮಣ್ಯ ಕಾರ್ಮಿಕ ಆತ್ಮಹತ್ಯೆ

ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 25 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ಯಾಹ್ನದ ವೇಳೆಗೆ ಕೆಲಸಕ್ಕೆ ಆಗಮಿಸಿದ್ದ ಈ ಯುವಕ ಶೌಚಾಲಯದ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
Loading posts...

All posts loaded

No more posts

error: Content is protected !!