Ad Widget

ಗುಡ್ಡಪ್ಪ ಗೌಡ ಪುರ್ಲುಮಕ್ಕಿ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಪುರ್ಲುಮಕ್ಕಿ ನರಿಯೂರು ಗುಡ್ಡಪ್ಪ ಗೌಡ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರವಿಪ್ರಕಾಶ್, ಚೇತನ್, ಪುತ್ರಿ ಶ್ರೀಮತಿ ರೂಪಲತಾ, ಮೂವರು ಸಹೋದರರು, ಒರ್ವ ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಲಕ್ಷ್ಮೀ ಕಾಪಡ್ಕ ನಿಧನ

ನಿಂತಿಕಲ್ಲು ಕಾಪಡ್ಕ (ಪುಂಡೂರು) ನಿವಾಸಿ ಲಕ್ಷ್ಮೀಯವರು ಅಲ್ಪಕಾಲದ ಅನಾರೋಗ್ಯದಿಂದ ಫೆ. 15ರಂದು ರಾತ್ರಿ ನಿಧನರಾದರು.ಅವರಿಗೆ 78ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನಾರಾಯಣ ನಾಯ್ಕ, ಪುತ್ರಿಯರಾದ ಪಾರ್ವತಿ ಬಾಬು ನಾಯ್ಕ ಕುಳ್ಳಾಜೆ, ದೇವಕಿ ಸೋಮಪ್ಪ ನಾಯ್ಕ ಕೊಳಚಿಪ್ಪು, ಮೀನಾಕ್ಷಿ ಗೋವಿಂದ ನಾಯ್ಕ ಅಡೂರು, ಜಾನಕಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget

ಕಾಸರಗೋಡು : ವಿದ್ಯುತ್ ಶಾಕ್ ಬಾಲಕ ಮೃತ್ಯು

ಕಲ್ಲುಗುಂಡಿಯ ಲಾಲು ಅವರ ಮಗಳು ತಾಹಿರಾ ರ ಮಗ ಕಾಸರಗೋಡಿನಲ್ಲಿ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.

ಮುತ್ತಪ್ಪ ಮಾಸ್ತರ್ ಮಾದನಮನೆ ನಿಧನ

ಕಲ್ಲಾಜೆ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿ ಡೆಪ್ಟೇಶನ್ ಮೂಲಕ ಬಾನಡ್ಕ ಕಿ.ಪ್ರಾ.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಮಾಸ್ತರ್ ಮಾದನಮನೆಯವರು ಡಿ. 1ರಂದು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 52 ವರ್ಷ ವಯಸ್ಸಾಗಿತ್ತು. ವಿಶೇಷ ಚೇತನ ಮಕ್ಕಳ ಏಳಿಗೆಗಾಗಿ ಶಶಾಂಕ ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿ ಆ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿಯಾಗಿದ್ದರು. ಮೃತರು ಪತ್ನಿ ಬಾನಡ್ಕ...

ದೇವಕಿ ಆಜಡ್ಕ ಕಮಿಲ ನಿಧನ

ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ.ಶೇಷಪ್ಪ ಗೌಡರ ಧರ್ಮಪತ್ನಿ ದೇವಕಿ (75) ಅಲ್ಪಕಾಲದ ಅಸೌಖ್ಯದಿಂದ ನ.22ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಮೋಹನ,ರವೀಂದ್ರ, ಉದಯಕುಮಾರ, ಪುತ್ರಿ ಶೇಷಮ್ಮ ಹಾಗೂ ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.

ರಿಕ್ಷಾದಿಂದ ಬಿದ್ದ ಮಹಿಳೆ ಮೃತ್ಯು

ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ. ದುಗಲಡ್ಕದ ನೀರಬಿದಿರೆ (ಕೊಯಿಕುಳಿ ಶಾಲಾ ಬಳಿ) ನಾರಾಯಣ ಎಂಬವರ ಪತ್ನಿ ಲಲಿತ (40) ಸಂಬಂಧಿಕರಾದ ನಾಗೇಶ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದರೆಂದೂ ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೇ ಅವರು...

ಶೇಣಿ : ನಾಟಿ ವೈದ್ಯೆ ನಿಧನ

ಶೇಣಿ ನಾಟಿ ವೈದ್ಯೆ ರತ್ನವತಿ ಅ. 28 ರಂದು  ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಇವರು ಹಲವಾರು ವರ್ಷಗಳಿಂದ ನಾಟಿವೈದ್ಯೆಯಾಗಿ ಹೆಸರುವಾಸಿಯಾಗಿದ್ದರು.ಇವರಿಗೆ 82 ವರ್ಷ ವಯಸ್ಸಾಗಿತ್ತು. ಮೖತರು ಪುತ್ರರಾದ ಮಾಯಿಲಪ್ಪ, ಜನಾರ್ದನ ಪುತ್ರಿಯರಾದ ಪಾರ್ವತಿ, ಮೋಹಿನಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಹೆರಿಗೆ ವೇಳೆ ರಕ್ತಸ್ರಾವ – ಮರ್ಕಂಜ ಮೂಲದ ಮಹಿಳೆ ಮೃತ್ಯು

ಮರ್ಕಂಜದಿಂದ ಒಂದುವರೆ ವರ್ಷಗಳ ಹಿಂದೆ ಪುತ್ತೂರಿನ ಕಾವು ಗೆ ಮದುವೆಯಾಗಿದ್ದ ಮಹಿಳೆ ಅ.15 ರಂದು ಹೆರಿಗೆ ವೇಳೆ ರಕ್ತಸ್ರಾವಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ.ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25 ) ಮೃತಪಟ್ಟ ದುರ್ದೈವಿ. ಹೆರಿಗೆಗೆಂದು ಪುತ್ತೂರಿನ ಪ್ರಗತಿ ಹಾಸ್ಟಿಟಲ್ ಗೆ ದಾಖಲಾಗಿದ್ದರು. ಅಲ್ಲಿ ಹೆರಿಗೆ ವೇಳೆ ರಕ್ತಸ್ರಾವ...

ಕೋಡಿಮಜಲು ಜಾನಕಿ ಬಂಗೇರ ನಿಧನ

ಎಡಮಂಗಲ ಗ್ರಾಮದ ಕೋಡಿಮಜಲು ಜಾನಕಿ ಬಂಗೇರರು ಅ. 8 ರಂದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತೆಯಾಗಿ ದುಡಿದಿರುವುದಲ್ಲದೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎಡಮಂಗಲ ಗ್ರಾ.ಪಂ. ಸದಸ್ಯರಾಗಿ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದಲ್ಲಿ ಮೂರು ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಎಡಮಂಗಲ...

ಐತಪ್ಪ ಕಾಟೂರು ಬಿಳಿಯಾರು ನಿಧನ

ಅರಂತೋಡು ಗ್ರಾಮದ ಬಿಳಿಯಾರು ಕಾಟೂರು ಐತಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಜನಾರ್ದನ ಕಾಟೂರು, ಗೋಪಾಲಕೃಷ್ಣ ಕಾಟೂರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!