- Monday
- March 31st, 2025

ಮನೆಯಲ್ಲಿ ನಿಲ್ಲಿಸಿದ್ದ ಕಾರು ತನ್ನಷ್ಟಕ್ಕೆ ಹಿಂದಕ್ಕೆ ಚಲಿಸಿದ ಪರಿಣಾಮ ಅಂಗಳದಲ್ಲಿ ನಿಂತಿದ್ದ ನಿವೃತ್ತ ರೇಂಜರ್ ಜೋಸೇಫ್ ರವರಿಗೆ ಗುದ್ದಿದ್ದರಿಂದ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಮಾ.15 ನಡೆದಿದೆ. ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ರೇಂಜರ್ ಜೋಸೇಫ್ ರವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದ್ದು, ಮನೆಯಲ್ಲಿದ್ದ...

ಮಂಡೆಕೋಲು ಗ್ರಾಮದ ಪೇರಾಲು ಮೂಲೆ ಗಂಗಮ್ಮ-ಚಂಗಪ್ಪ ದಂಪತಿಗಳ ಚತುರ್ಥ ಪುತ್ರರಾದ ಕುಶಾಲಪ್ಪ ಗೌಡ ಪೇರಾಲು ಮೂಲೆ ರವರು ಜ.02 ರಂದು ನಿಧನರಾದರು.ಮೃತರಿಗೆ 47 ವರ್ಷ ವಯಸ್ಸಾಗಿತ್ತು.ಮೃತರು ಸಹೋದರರಾದ ಚಿನ್ನಪ್ಪ ಗೌಡ, ಗೋಪಾಲಕೃಷ್ಣ, ಪರಮೇಶ್ವರ್ ಗೌಡ, ಸಹೋದರಿಯರಾದ ಶ್ರೀಮತಿ ರಾಜೀವಿ, ಶ್ರೀಮತಿ ಅನಿತಾ ಹಾಗೂ ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೇವಚಳ್ಳ ಗ್ರಾಮದ ದೇವ ಪಾಲೇಪ್ಪಾಡಿ ಪದ್ಮಾವತಿ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಲೋಕಯ್ಯ,ಲವಪ್ಪ, ಧರ್ಮಪಾಲ, ದಾಮೋದರ, ಜಗದೀಶ ಪುತ್ರಿಯರಾದ ಕುಸುಮಾವತಿ ಮೋಹಿನಿ, ಹಿತಾಕ್ಷಿ, ಹರಿಣಾಕ್ಷಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ನಾಲ್ಕೂರು ಗ್ರಾಮದ ಬಳ್ಳಡ್ಕ ಪ್ರಶಾಂತ್ ಎಂಬವರ ಪತ್ನಿ ಸಂಧ್ಯಾ(29) ಅಲ್ಪ ಕಾಲದ ಅಸೌಖ್ಯದಿಂದ ಸೆ.7ರಂದು ನಿಧನರಾದರು. ಮೃತರು ಪತಿ, ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರ್ಲಡ್ಕ ನಿವಾಸಿ ವೆಂಕಪ್ಪ ನಾಯ್ಕ್ ಎಂಬವರ ಪುತ್ರ ರುಕ್ಮಯ್ಯ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ೪೫ ವರ್ಷ ವಯಸ್ಸಾಗಿತ್ತು.ಮೃತರು ತಂದೆ, ತಾಯಿ, ಹಾಗೂ ಪತ್ನಿ ರಮ್ಯ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ದಿವಂಗತ ಬೊಳಿಯಣ್ಣ ಗೌಡ ಅವರ ಧರ್ಮಪತ್ನಿ ಪರಮೇಶ್ವರಿ ಅವರು ವಯೋಸಹಜವಾಗಿ ಸೋಮವಾರ ರಾತ್ರಿ ನಿಧನ ಹೊಂದಿದರು. ಮೃತರಿಗೆ 99 ವರ್ಷ ವಯಸ್ಸಾಗಿತ್ತು.ಮೃತರು ಬಂಧು-ಮಿತ್ರರು ಹಾಗೂ ನಡುತೋಟ ಕುಟುಂಬಸ್ಥರನ್ನು ಅಗಲಿದ್ದಾರೆ.

ಮಂಡೆಕೋಲು ಗ್ರಾಮದ ಮೇಲ್ಮನೆ ಸುಬ್ಬಣ್ಣ ಗೌಡರು ಆ.16ರಂದು ನಿಧನರಾದರು. ಅವರಿಗೆ ಸುಮಾರು 94 ವರ್ಷ ವಯಸ್ಸಾಗಿತ್ತು.ನಾಟಿವೈದ್ಯರಾಗಿದ್ದ ಇವರು, ದೈವ ಪರಿಚಾರಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬ ಸ್ಥರನ್ನು ಅಗಲಿದ್ದಾರೆ.

ಸುಳ್ಯದ ಹಳೆಗೇಟಿನಲ್ಲಿ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೆಹಿಕಲ್ ಎಲೆಕ್ಟ್ರಿಷಿಯನ್ ಸತ್ಯ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.ಎರಡು ದಿನಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ, ಇವರು ಹಲವು ವರ್ಷಗಳಿಂದ ಸುಳ್ಯದಲ್ಲಿ ವಾಹನಗಳ ಇಲಕ್ಟ್ರೀಷಿಯನ್ ಆಗಿ...

ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿ ಯವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆ.10 ರಂದು ಬೆಳಗ್ಗೆಆಲೆಟ್ಟಿಯಿಂದ ಸುಳ್ಯಕ್ಕೆ ತಮ್ಮ ಬೈಕಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ...

All posts loaded
No more posts