- Wednesday
- September 9th, 2026
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 21 ಜುಲೈ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 21) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ಸುಬ್ರಹ್ಮಣ್ಯ ಜುಲೈ 21 : ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರವಿವಾರ ಯೇನೇಕಲ್ಲಿನ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಹಿತ್ ಬಿ.ಬಿ ಅವರು ಮಾತನಾಡುತ್ತಾ "ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ರಾಷ್ಟ್ರದ...
ಐವರ್ನಾಡು ಗ್ರಾಮದ ಬಾಂಜಿಕೋಡಿ ಪ್ರದೇಶವನ್ನು ನಗರ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ಗ್ರಾಮಸ್ಥರು ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ ಹಾಗೂ ಭೂಮಸೂದೆ ತಿದ್ದುಪಡಿ ಕಾಯಿದೆಯಡಿ ನಗರ ವ್ಯಾಪ್ತಿಯನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸುಳ್ಯ ನಗರವನ್ನು ಕೇಂದ್ರವಾಗಿಟ್ಟುಕೊಂಡು, ಸುಳ್ಯದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಬಾಂಜಿಕೋಡಿ ಪ್ರದೇಶವನ್ನು...
ಸುಳ್ಯ: ಸುಬ್ಬಯ್ಯ ನಾಯ್ಕ ಶಿಕ್ಷಣ ಮತ್ತು ದೇವಕಿ ಅಮ್ಮ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಟ್ಟಿಪಳ್ಳದಲ್ಲಿರುವ ವಿಜಯಾನಂದ ಸ್ಕೂಲ್ ಆಫ್ ಎನರ್ಜಿ, ಹಿರಿಯರ ಮನೆ ಹಾಗೂ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದಲ್ಲಿ 6 ತಿಂಗಳ ವೃತ್ತಿಪರ PNG, CNG ಹಾಗೂ LNG ತರಬೇತಿ ಕೋರ್ಸ್‌ಗೆ ಪ್ರವೇಶ ಆರಂಭಿಸಲಾಗಿದೆ ಎಂದು ವಿಜಯಾನಂದ ಸುಳ್ಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು....
ಕೆ.ವಿ.ಜಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ನಂದಿನಿ.ಎಸ್ SENJA TECHNOLOGIES PRIVATE LIMITEDಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ರೂ. 3 ಲಕ್ಷ ವಾರ್ಷಿಕ ವೇತನ ಇದೆ ಎಂದು ಕಂಪೆನಿ ತಿಳಿಸಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ, ಸೆಕ್ರೆಟರಿ, ಎ.ಒ.ಎಲ್.ಇ(ರಿ.) ಕಮಿಟಿ...
2026-27ನೇ ಸಾಲಿಗೆ National Skills Qualification frame work(NSQF) ಕಾರ್ಯಕ್ರಮದ ಅಡಿಯಲ್ಲಿ ಸುಳ್ಯ ತಾಲೂಕಿನ ಎಣ್ಮೂರು ಸರ್ಕಾರಿ ಪ್ರೌಢಶಾಲೆಯಲ್ಲಿ Artificial Intelligence(AI) ತರಗತಿಗಳನ್ನು ಪ್ರಾರಂಭಿಸಲು ಮಂಜೂರಾತಿ ಲಭಿಸಿದ್ದು, ಆದ್ದರಿಂದ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕನಿಷ್ಠ ವಿದ್ಯಾರ್ಹತೆ : Diploma in Comp Sci/Information Technology ORBCA, BSc in Comp...
ಸುರಿಯುವ ಮಳೆಗೆ ತಿಳಿದೀತೆ ತಾನು ಯಾವ ನದಿಯ ಸೇರುವೆ ಎಂದು...ಹರಿಯುವ ನದಿಗೆ ತಿಳಿದೀತೆ ತಾನು ಯಾವ ಸಮುದ್ರವ ತಲುಪುವೆ ಎಂದು...ಭೋರ್ಗರೆವ ಸಮುದ್ರಕ್ಕೆ ತಿಳಿದೀತೆ ತಾನು ಯಾವ ಸಾಗರವ ಸೇರುವೆ ಎಂದು, ಯಾರೊಡಲಿಗೆ ಸೇರಿ ಲೀನವಾಗುವೆ ಎಂದು...ಒಂದು ವೇಳೆ ತಿಳಿದಿದ್ದರೂ ಸಾಗುವವು ಅವು ಏನೂ ಅರಿಯದಂತೆ, ಪ್ರಕೃತಿ ನಿಯಮವ ಮೀರದಂತೆ...- ಉಲ್ಲಾಸ್ ಕಜ್ಜೋಡಿ
ದಿನಾಂಕ : 21-07-2026 ಗುರುವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197*01,ಮೇಷರಾಶಿ*,ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಅಧಿಕ ಖರ್ಚು ಮಾಡುವುದು ಉತ್ತಮವಲ್ಲ, ಸ್ನೇಹಿತರ ಸಹಾಯ ಪಡೆಯಿರಿ, ವೃಥಾ ನಿಂದನೆಗಳನ್ನು ಎದುರಿಸಬೇಕಾಗಿ ಬರಬಹುದು,ಗಮನಿಸಿ:-ಇಂದು ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ,ಪರಿಹಾರ:-ದೇವರಮನೆಯಲ್ಲಿ ಶಂಖವನ್ನಿಟ್ಟು ಪೂಜಿಸಿ, *02,ವೃಷಭರಾಶಿ*,ನಿಮ್ಮ ಮನಸ್ಸು ಗೊಂದಲಕ್ಕೊಳಗಾಗಬಹುದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ...
ಪುತ್ತೂರು: ವಿದ್ಯಾರ್ಥಿಗಳು ಶಿಕ್ಷಣ, ಕುಟುಂಬ ಹಾಗೂ ಭವಿಷ್ಯದ ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿ ಪ್ರಜೆಗಳಾಗಿ ಬೆಳೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್. ಭೂಮ್ ರಡ್ಡಿ ಹೇಳಿದರು. ಅವರು ಅಕ್ಷಯ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ‘ದೃಷ್ಟಿ 2K26’ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ...
ವಾಹನದಲ್ಲಿ ಸಿಕ್ಕಿದ ರೂ. 12,000 ನಗದು ಹಾಗೂ ಅಮೂಲ್ಯ ದಾಖಲಾತಿಗಳನ್ನು ಪ್ರಾಮಾಣಿಕವಾಗಿ ಮರಳಿಸುವ ಮೂಲಕ ಸುಳ್ಯದ ಶಿವ ಹಾಲಿಡೇಸ್ ಹಾಗೂ ಶ್ರೀ ದುರ್ಗಾ ಕಾರ್ ವಾಷ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಜು.20ರಂದು ತಿರುಪತಿ ದರ್ಶನ ಮುಗಿಸಿ ಹಿಂದಿರುಗಿದ ಶಿವ ಹಾಲಿಡೇಸ್‌ನ ವಾಹನವನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ದುರ್ಗಾ ಕಾರ್ ವಾಷ್‌ನಲ್ಲಿ ಸ್ವಚ್ಛಗೊಳಿಸಲು...
Loading posts...
All posts loaded
No more posts
