ವಾಲ್ತಾಜೆ – ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮದ ವಾಲ್ತಾಜೆಯ ಮೂರು ಕಡೆಗಳಲ್ಲಿ ಬಹು ಬೇಡಿಕೆಯ ಒಟ್ಟು ನೂರು ಮೀಟರ್ ಗಳ ವಾಲ್ತಾಜೆ ಉಳ್ಳಾಕಳು ರಸ್ತೆಯ ಕಾಂಕ್ರೀಟ್ ಕಾಮಗಾರಿ ಗ್ರಾಮಪಂಚಾಯತ್ ಹಾಗೂ ವಿಶೇಷ ಅನುದಾನದೊಂದಿಗೆ ಪೂರ್ಣಗೊಂಡು ಅದರ ಉದ್ಘಾಟನಾ ಕಾರ್ಯಕ್ರಮ ಜು.17dರಂದು ನೆರವೇರಿತು. ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಗಳನ್ನು ಗ್ರಾಮದ ಹಿರಿಯರಾದ ಶ್ರೀ ಮತಿ ಧರ್ಮಾವತಿ ಮುಂಡೋಡಿ, ಶ್ರೀ ಮಹಾಬಲ ಮುಂಡೋಡಿ, ಶ್ರೀ...

ಸುಳ್ಯದಲ್ಲಿ ಅಪೋಲೋ ಫಾರ್ಮಸಿ ಶುಭಾರಂಭ

ಸುಳ್ಯದ ಶ್ರೀರಾಂ ಪೇಟೆಯ ಗೋಪಿಕಾ ಬಿಲ್ಡಿಂಗ್ ನಲ್ಲಿ ಅಪೋಲೋ ಹಾಸ್ಪಿಟಲ್ ಗ್ರೂಪ್ ನ ಅಪೋಲೋ ಫಾರ್ಮಸಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯೋಗಿತಾ ಗೋಪಿನಾಥ್ ಉದ್ಘಾಟಿಸಿದರು. ಗೋಪಿಕಾ ಬಿಲ್ಡಿಂಗ್ ನ ಮಾಲಕರಾದ ಎಂ.ಪಿ.ಗೋಪಿನಾಥ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲರಾದ ಎಂ.ಬಿ.ಸದಾಶಿವ , ಪ್ರಣಾವ್ ಗೋಪಿನಾಥ್ ಉಪಸ್ಥಿತರಿದ್ದರು.ಸಂಸ್ಥೆಯ ವತಿಯಿಂದ ಎಂ.ಪಿ.ಗೋಪಿನಾಥ್, ಯೋಗಿತಾ...
Ad Widget

ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು

  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹತ್ತು ಅಡಿ ಆಳದ ಗುಂಡಿಗೆ ಪಲ್ಟಿಯಾಗಿ ಬಿದ್ದ ಘಟನೆ ಪೆರಾಜೆ ಗ್ರಾಮದ ದಾಸರಹಿತ್ಲುವಿನಲ್ಲಿ ಜು.18ರಂದು ಬೆಳಿಗ್ಗೆ ಸಂಭವಿಸಿದೆ.ಕಾಸರಗೋಡಿನಿಂದ ಮಡಿಕೇರಿಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಕಾಸರಗೋಡು ಮೂಲದ ಮೂವರು ಪ್ರಯಾಣಿಕರಿಗೆ  ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಸುಳ್ಯ ತಾಲೂಕು ಒಳಗೊಂಡು ಜಿಲ್ಲೆಯ ಐದು ತಾಲೂಕುಗಳಿಗೆ ರಜೆ ಘೋಷಣೆ.

ಸುಳ್ಯ: ಭಾರೀ ಮಳೆ ಮುಂದುವರಿದಿರು ಕಾರಣ ದ.ಕ.ಜಿಲ್ಲೆಯ 5 ತಾಲೂಕುಗಳ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 18ರಂದು ಗುರುವಾರ ರಜೆ ಘೋಷಣೆ ಮಾಡಲಾಗಿದೆ. ಸುಳ್ಯ, ಪುತ್ತೂರು, ಕಡಬ,ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿಪೂರ್ವ ಕಾಲೇಜು (12ನೇ ತರಗತಿವರೆಗೆ) ರಜೆ ಘೋಷಣೆ ಮಾಡಿ...

ಜಿಲ್ಲೆಯಲ್ಲಿ ನಾಳೆ(ಜು.18) ಶಾಲಾ ಕಾಲೇಜುಗಳಿಗೆ ರಜೆ ಇಲ್ಲ – ನಕಲಿ ಆದೇಶ ಪ್ರಚಾರ ಪಡಿಸಿದರೆ ಕಠಿನ ಕ್ರಮ – ಜುಬಿನ್ ಮೊಹಪಾತ್ರ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು ಮಳೆ ಪ್ರಮಾಣ ಹೆಚ್ಚಾಗಲಿದ್ದು ಈ ಹಿನ್ನಲೆಯಲ್ಲಿ ಕೆಲ ದಿನಗಳಿಂದ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿದ್ದರು. ಅದರೇ ಜು.18 ರಂದು ರಜೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸುತ್ತಿದ್ದು ಇದು ನಕಲಿ ಆದೇಶವಾಗಿದೆ. ಅಲ್ಲದೇ ಭಾರೀ ಮಳೆಯ ಸೂಕ್ಷ್ಮ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವುದು...

ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಪದಗ್ರಹಣ    

                              ಸುಬ್ರಹ್ಮಣ್ಯ ಜುಲೈ 16: ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ನ 2024 -25 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿತು.        ಕಾರ್ಯಕ್ರಮವನ್ನು ಉದ್ಘಾಟಿಸಿದ ಪದಗ್ರಹಣ ಅಧಿಕಾರಿ ಪುತ್ತೂರು ಇನ್ನರ್ ವೀಲ್ ಕ್ಲಬ್ ನ ಸೀಮಾ ನಾಗರಾಜ ಅವರು ನೂತನ ಅಧ್ಯಕ್ಷೆ ಶ್ರುತಿ ಮಂಜುನಾಥ್  ಹಾಗೂ ಪದಾಧಿಕಾರಿಗಳಿಗೆ...

ಅಜ್ಜಾವರ: ನಿರಂತರವಾಗಿ ಆನೆಗಳ ದಾಳಿ, ಕೃಷಿ ನಾಶ- ಅಧಿಕಾರಿಗಳ ಭೇಟಿ

ಅಜ್ಜಾವರ: ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿಯಿಡುತ್ತಿದ್ದು ನಿನ್ನೆ ಮತ್ತು ಜೂ 15 ರಾತ್ರಿ ಆನೆಗಳ ಹಿಂಡು ಮೇದಿನಡ್ಕ ದಿಂದ ಬಂದು ವಿಶಾಖ್  ಪಡ್ಡಂಬೈಲು ಇವರ ತೋಟದಲ್ಲಿನ ಬಾಳೆಗಳನ್ನು ಸಂಪೂರ್ಣ ಹಾನಿಮಾಡಿದ್ದು  ಇತ್ತ ಜೂ 16 ರಾತ್ರಿಯು ಶಂಕರ ಪಾಟಾಳಿ ಪಡ್ಡಂಬೈಲು, ಶಿವರಾಮ ನಾರ್ಕೊಡು, ಅವೀನ್ ಪಡ್ಡಂಬೈಲು, ಅರುಣ್ ಕುಮಾರ್,...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆಗೆ ನೋಟಿಫಿಕೇಶನ್ ಜಾರಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿಗೆ ಮುಜರಾಯಿ ಇಲಾಖೆ ಅರ್ಜಿ ಯನ್ನು ಆಹ್ವಾನಿಸಿದೆ. ರಾಜ್ಯದ ಒಟ್ಟು 40 ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯತ್ವ ಕ್ಕೆ ಮುಜರಾಯಿ ಅಯುಕ್ತರು ಅರ್ಜಿ ಆಹ್ವಾನಿಸಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಾಧಿಕಾರ ರಚನೆ ನಿರ್ಧಾರ ಕೈಬಿಡಲಾಗಿದ್ದು, ವ್ಯವಸ್ಥಾಪನಾ ವ್ಯವಸ್ಥೆಯಲ್ಲಿ ಮುಂದುವರಿಯಲಿದೆ. ಉಳಿದಂತೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ,ಸೌತಡ್ಕ ಮಹಾ ಗಣಪತಿ...

ಭಾರಿ ಮಳೆ – ನೆಲಕ್ಕುರುಳಿದ ಯಕ್ಷ ಪ್ರತಿಮೆ

ರಂಗಪ್ರೇಮಿಗಳ ಮೆಚ್ಚುಗೆ ಪಾತ್ರವಾಗಿದ್ದ ಸುಳ್ಯದ ರಂಗಮನೆಯ ಎದುರು ಸ್ಥಾಪನೆ ಮಾಡಿದ್ದ ಯಕ್ಷ ಪ್ರತಿಮೆ ಜು.16 ರಂದು ಸುರಿದ  ಭಾರಿ ಮಳೆಗೆ  ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ  ರಂಗಮನೆಯ ಕಂಪೌಂಡ್  ಹಾನಿಯಾಗಿದೆ. 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆ ಇದಾಗಿದ್ದು , 2004 ರಲ್ಲಿ ಸ್ಥಾಪನೆ ಮಾಡಲಾಗಿದೆ.

ಸುಳ್ಯ : ಭಾರಿ ಮಳೆ – ನೆಲಕ್ಕುರುಳಿದ ಯಕ್ಷ ಪ್ರತಿಮೆ

ರಂಗಪ್ರೇಮಿಗಳ ಮೆಚ್ಚುಗೆ ಪಾತ್ರವಾಗಿದ್ದ ಸುಳ್ಯದ ರಂಗಮನೆಯ ಎದುರು ಸ್ಥಾಪನೆ ಮಾಡಿದ್ದ ಯಕ್ಷ ಪ್ರತಿಮೆ ಜು.16 ರಂದು ಸುರಿದ ಭಾರಿ ಮಳೆಗೆ ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ ರಂಗಮನೆಯ ಕಂಪೌಂಡ್ ಹಾನಿಯಾಗಿದೆ. 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆ ಇದಾಗಿದ್ದು , 2004 ರಲ್ಲಿ ಸ್ಥಾಪನೆ ಮಾಡಲಾಗಿದೆ.
Loading posts...

All posts loaded

No more posts

error: Content is protected !!