ಬಳ್ಪ : ಅಕ್ಕೇಣಿಯ ಅಶೋಕ್   ನಾಪತ್ತೆ – ಪೋಲೀಸ್ ದೂರು

ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33)ಎಂಬವರು ಆ.5 ರಂದು  ಬೆಳಿಗ್ಗೆಯಿಂದ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿದ್ದು, ತಾಯಿ ಮಗಳ ಮನೆಗೆ ಹೋಗಿದ್ದ ವೇಳೆ  ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಹೋದರ ಹರೀಶ ರವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಳ್ಳಕ್ಕ ಸೇತುವೆ ಸಮೀಪ ಹೊಳೆ ಬದಿಯಲ್ಲಿ ಮೊಸಳೆ ಪತ್ತೆ

ಗುತ್ತಿಗಾರು ಪಂಜ ರಸ್ತೆಯಲ್ಲಿ ಸಿಗುವ ಬಳ್ಳಕ ಸೇತುವೆ ಸಮೀಪ ಹೊಳೆ ಬದಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಸದಾಶಿವ ಕುದ್ವ ಅವರು ಈ ರಸ್ತೆಯಲ್ಲಿ ಹೋಗುವಾಗ ಮೊಸಳೆ ಇರುವುದು ಕಂಡುಬಂದಿದೆ. ಮೊಸಳೆ ಹೊಳೆಯ ದಡದಲ್ಲಿ ಮಲಗಿರುವ ಫೋಟೋ ತೆಗೆದು ಹಂಚಿಕೊಂಡಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
Ad Widget

ಕುಕ್ಕುಜಡ್ಕ : ಅನಾರೋಗ್ಯದಿಂದ ಬಳಲುತ್ತಿರುವ ಆನಂದರವರ ಚಿಕಿತ್ಸೆಗೆ ಅಮರ ಸಂಘಟನಾ ವತಿಯಿಂದ ಸಹಾಯಧನ ಹಸ್ತಾಂತರ

ಅಮರ ಮುಡ್ನೂರು ಗ್ರಾಮದ ಕುಕ್ಕುಜಡ್ಕ ನಿವಾಸಿಯಾದ ಆನಂದ ಕುಕ್ಕಜಡ್ಕ ಇವರು ತಲೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಅಮರ ಸಂಘಟನಾ ವತಿಯಿಂದ ಸಾತ್ವಿಕ್ ಮಡಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಹರ್ಷಿತ್ ದಾತಡ್ಕ, ಜಯಪ್ರಸಾದ್ ಸಂಕೇಶ, ಮಿಥುನ್ ಕೆರೆಗದ್ದೆ, ಪ್ರವೀಣ್ ಕುಲಾಲ್,...

ಸಂಪಾಜೆ ನಿಯೋಗದಿಂದ ಕೇರಳದ ವಯನಾಡ್ ಬಳಿ ಪ್ರಾಕೃತಿಕ ವಿಕೋಪದಿಂದ ಹಾನಿಯದ ಮುಂಡಕಯ್  ಚೂರಲ್ ಮಾಲಾ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ.ನೇತೃತ್ವದಲ್ಲಿ ಸಂಪಾಜೆಯಾ ಉಮ್ಮರ್ ತಾಜ್, ಹಾರೀಸ್ ಸಿ.ಕೆ,ಆರಾಫಾತ್ ಜೊತೆಗೆ ಕೊಝಿಕೋಡ್ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅಡ್ವಕೆಟ್ ಆದಿಲ್ ವಿಕೋಪದಲ್ಲಿ ಹಾನಿಯದ ಸ್ಥಳಗಳಿಗೆ ಭೇಟಿ ಮಾಡಿ ನಂತರ ಯುವ ಕಾಂಗ್ರೆಸ್ ವತಿಯಿಂದ ಸಂತ್ರಸ್ತರಿಗೆ ನೀಡುತ್ತಿರುವ ಸವಲತ್ತುಗಳ ಕೇಂದ್ರಕ್ಕೆ ಭೇಟಿ ನೀಡಿ ಯುವ ಕಾಂಗ್ರೆಸ್ ರಾಷ್ಟ್ರೀಯ...

ಮಳೆಯಿಂದ ಹಾನಿಯಾದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸಮಾಜಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್,ಸಿ, ಮಹಾದೇವಪ್ಪ ರನ್ನು ಅವರ ನಿವಾಸದ ಕಛೇರಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಮಳೆಯಿಂದ ಹಾನಿಯಾದ ರಸ್ತೆಗಳಿಗೆ ವಿಶೇಷ ಅನುದಾನ ಒದಗಿಸುವಂತೆ‌ ಮತ್ತು ಸುಳ್ಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ವಿನಂತಿಸಿದರು.

ಬಾಳೆಮಕ್ಕಿಯಲ್ಲಿ ನೆರಳಿಗೆ ನೆಟ್ಟ ಮರಗಳ ನಾಶ – ಕಿಡಿಗೇಡಿಗಳ ಪತ್ತೆಗಾಗಿ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

ಸುಳ್ಯದ ಬಾಳೆಮಕ್ಕಿ ಬಳಿ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನೆರಳಿಗಾಗಿ ನೆಟ್ಟಿದ್ದ 4 ಮರಗಳು ಬಲಿಯಾದ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಜೀಪು ಮತ್ತು ಟೆಂಪೊ ಚಾಲಕ ಮಾಲಕರ ಸಂಘದವರು ಇಂದು ಬೆಳಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಕಿಡಿಗೇಡಿಗಳ ಪತ್ತೆಗಾಗಿ ಪ್ರಾರ್ಥಿಸಿಕೊಂಡರು.ದ್ವಾರಕಾ ಹೋಟೆಲ್ ಬಳಿ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಬದಿಯಲ್ಲಿ ನೆರಳಿಗಾಗಿ ಗಿಡಗಳನ್ನು ನೆಡಲಾಗಿತ್ತು. ಇದರಲ್ಲಿ ನಾಲ್ಕು ಮರಗಳನ್ನು...

ಬಿಜೆಪಿಯ ದೇವ ಬೂತ್ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ – ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ

ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ದೇವ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆ ಆ.03 ರಂದು ನಡೆಯಿತು. ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ, ಬೂತ್ ಲೆವೆಲ್ ಏಜೆಂಟ್ ಗಳಾಗಿ ತೀರ್ಥೆಶ್ ಪಾರೆಪ್ಪಾಡಿ ಮತ್ತು ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಮಹಿಳಾ ಸದಸ್ಯರಾಗಿ ತಾರಾ ರವೀಂದ್ರ ಅಡ್ಡನಪಾರೆ, ಎಸ್.ಸಿ. ಘಟಕದಿಂದ ಬಾಬು ದೇವ ಕಾಲನಿ,...

ಕೊಯನಾಡಿನಲ್ಲಿ ಭೀಕರ ಅಪಘಾತ – ಬುಲ್ಲೆಟ್  ಸವಾರರು ಸ್ಥಳದಲ್ಲೇ ಸಾವು

ಸಂಪಾಜೆ ಸಮೀಪದ ಕೊಯನಾಡುನಲ್ಲಿ  ಬೈಕ್ ಅಪಘಾತ ದಿಂದ  ಬೈಕ್ ಸವಾರ‌ ಮತ್ತು ಹಿಂಬದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಇಬ್ಬರು ಮೈಸೂರು ಮೂಲದವರಾಗಿದ್ದಾರೆ.ದುರ್ಘಟನೆ ಭಾನುವಾರ ತಡರಾತ್ರಿ  ನಡೆದಿದೆ. ಇಂದು ಬೆಳಗ್ಗೆ ಅಪಘಾತ ನಡೆದಿರುವುದು  ಸ್ಥಳೀಯರ ಗಮನಕ್ಕೆ ಬಂದಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಗದಿಂದ ಬಂದ ಬೈಕ್ ರಸ್ತೆಯ  ಡಿವೈಡರ್...

ಗೂನಡ್ಕ : ತರಕಾರಿ ಸಾಗಾಟದ ಪಿಕಪ್ ಪಲ್ಟಿ – ಚಾಲಕನಿಗೆ ಗಂಭೀರ ಗಾಯ

ಸುಳ್ಯಕ್ಕೆ ತರಕಾರಿ ಹೇರಿಕೊಂಡು ಬರುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಗೂನಡ್ಕದಲ್ಲಿ ಪಲ್ಟಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಹುಣುಸೂರು ಮೂಲದ ಪಿಕಪ್ ಚಾಲಕ ಮೋಹನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ,ಅವರನ್ನು ಸಂಪಾಜೆಯ ಟರ್ಲಿ ಅಂಬ್ಯುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ

ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಉಚಿತ ತಪಾಸಣಾ ಶಿಬಿರ

ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಆಗಸ್ಟ್ 04 ಭಾನುವಾರದಂದು ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ತಜ್ಞ ವೈದ್ಯರಾದ ಡಾl ನರಸಿಂಹ ಶಾಸ್ತ್ರೀ ಮಂಗಳೂರು ಹಾಗೂ ಡಾ|ದೀಪಕ್ ಇವರು ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಿದರು. ಇದೇ ಸಂದರ್ಭದಲ್ಲಿ ಶ್ವಾಸಕೋಶದ ಪರೀಕ್ಷೆ...
Loading posts...

All posts loaded

No more posts

error: Content is protected !!