ಓಡಬಾಯಿ : ನಾಗರ ಪಂಚಮಿ ಆಚರಣೆ

ಓಡಬಾಯಿ ವಿನು ನಗರದಲ್ಲಿರುವ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು. ಸ್ಥಳೀಯ ನಿವಾಸಿಗಳು ಆಗಮಿಸಿ ಹಾಲು, ಸೀಯಾಳ ಅಭಿಷೇಕ ಮಾಡಿದರು.

ಕಣಕ್ಕೂರು ಬಳಿ ಗುಡ್ಡೆಯಿಂದ ಹರಿದು ಬರುತ್ತಿದೆ ಕೆಸರು ವಿಶ್ರಿತ ನೀರು – ಜನತೆಯಲ್ಲಿ ಮನೆ ಮಾಡಿದ ಆತಂಕ

https://youtu.be/tUodKZ-jBtw?si=UCItr11WGKTeN82s ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ಚಾರ್ ಬಳಿಯ ಕಣಕ್ಕೂರು ಎಂಬಲ್ಲಿ ಇದೀಗ ಬೆಟ್ಟದ ಕೆಳ ಭಾಗದ ಕಾಡಿನಿಂದ ಕೆಂಪು ಮಣ್ಣು ಮಿಶ್ರಿತ ನೀರು ಹೊರಬರುತ್ತಿದ್ದು ಇದೀಗ ಸ್ಥಳೀಯ ಜನರನ್ನು ಇದೀಗ ಚಿಂತೆ ಗೀಡುಮಾಡಿದೆ. ಸುಳ್ಯ ಬಂದಡ್ಕ ಸಂಪರ್ಕಿಸುವ ರಸ್ತೆಯ ಬಳಿಯಲ್ಲಿ ಗೋಚರಿಸಿದ್ದು ರಸ್ತೆಯಿಂದ ಸುಮಾರು 150 ಮೀಟರ್ ದೂರದಿಂದ ಈ ನೀರು ಬರುತ್ತಿದ್ದು ಅಲ್ಲಿ...
Ad Widget

ಐನೆಕಿದು : ಕೆದಿಲ ತರವಾಡು ಮನೆಯಲ್ಲಿ ನಾಗರ ಪಂಚಮಿ

ಐನೆಕಿದು ಕೆದಿಲ ಕುಟುಂಬದ ತರವಾಡು ಮನೆಯಲ್ಲಿ ನಾಗರ ಪಂಚಮಿ ಅಂಗವಾಗಿ ನಾಗನ ಕಲ್ಲಿಗೆ ಪೂಜೆ ಹಾಗೂ ಹಾಲೆರೆಯುವ ಕಾರ್ಯಕ್ರಮ ನಡೆಯಿತು. ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಶ್ರೀ ದೇವರ ಆಶಿರ್ವಾದ ಪಡೆದರು.

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ನಾಗರಪಂಚಮಿ ಪ್ರಯುಕ್ತ ಶ್ರೀ ನಾಗ ಸಾನಿಧ್ಯದಲ್ಲಿ ಬೆಳಿಗ್ಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ನಾಗತಂಬಿಲ ಸೇವೆ ಜರುಗಿತು.

ಕುಲ್ಕುಂದ : ನಾಗರ ಪಂಚಮಿ ಆಚರಣೆ

ಕುಲ್ಕುಂದ  ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಅಂಗವಾಗಿ ಶ್ರೀ ದೇವರಿಗೆ ಹಾಲು ,ಸೀಯಾಳ, ನಾಗತಂಬಿಲ ಸೇವೆ ನಡೆಯಿತು. ‌

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ನಾಗರ ಪಂಚಮಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ನಡೆಯಿತು. ‌ ಭಕ್ತರಿಂದ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ಹಾಲು ಸಮರ್ಪಣೆ, ಪುರೋಹಿತ ರಿಂದ ನಾಗರಾಜನಿಗೆ ಹಾಲು, ಸೀಯಾಳ, ಹಣ್ಣು ಕಾಯಿ ಸಮರ್ಪಣೆ ನಡೆಯಿತು. ಅತ್ಯಧಿಕ ಸಂಖ್ಯೆಯಲ್ಲು ಭಕ್ತರು ಶ್ರೀ ದೇವರ ದರುಶನ ಪಡೆದರು.

ವಳಲಂಬೆ : ನಾಗರಪಂಚಮಿ ಆಚರಣೆ

ಗುತ್ತಿಗಾರು ಗ್ರಾಮದ ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿ ಅಂಗವಾಗಿ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ನಾಗ ತಂಬಿಲ ನಡೆಯಿತು. ಮಧ್ಯಾಹ್ನ ದೇವಸ್ಥಾನದಲ್ಲಿ ಆಶ್ಲೇಷ ಪೂಜೆ ನೆರವೇರಲಿದೆ.

ಕೊಡಿಯಾಲ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ

ಕೊಡಿಯಾಲ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೇವಾಲಯದ ಅರ್ಚಕರಾದ ಶಂಕರನಾರಾಯಣ ಮಯ್ಯರ ನೇತೃತ್ವದಲ್ಲಿ ನಾಗರಪಂಚಮಿ ಅಂಗವಾಗಿ ಹಾಲು,ಸೀಯಾಳ ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.

ಕುಮಾರಸ್ವಾಮಿ ವಿದ್ಯಾಲಯ ದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ – ಕುಮಾರ ಸ್ವಾಮಿ ವಿದ್ಯಾಲಯದ ಬಾಲಕ ಬಾಲಕಿಯರ ತಂಡ ಪ್ರಥಮ

ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಆ.8ರಂದು ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಕುಮಾರಸ್ವಾಮಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಆಟಗಾರ ...

ಸಂಪಾಜೆ ಗ್ರಾಮಕ್ಕೆ ಸಹಾಯಕ ಕಮಿಷನರ್ ಭೇಟಿ

ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ಪೇರಡ್ಕ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ದರ್ಕಸ್ ಮುಳುಗು ಸೇತುವೆ ಮಳೆಗಾಲದಲ್ಲಿ ಪಯಸ್ವಿನಿ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಆಗಾಗ ಮುಳುಗಡೆಯಗುತ್ತಿದ್ದು ಈ ರಸ್ತೆಯಲ್ಲಿ ನೂರಾರು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಸಂಚಾರ ಮಾಡುತ್ತಿದ್ದು ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಿರ ಮಸೀದಿ ಶಾಲಾ ವಿದ್ಯಾರ್ಥಿಗಳಿಗೆ ಸಂಪರ್ಕ ಕಲ್ಪಿಸುವ...
Loading posts...

All posts loaded

No more posts

error: Content is protected !!