- Thursday
- October 1st, 2026
ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿಯ ಸದಸ್ಯರಾಗಿ ವಿನೋದ್ ಮೂಡಗದ್ದೆ ಅವರು ನೇಮಕಗೊಂಡಿದ್ದಾರೆ.ಇವರು ಪತ್ರಕರ್ತರಾಗಿ, ರಂಗಭೂಮಿ ಕಲಾವಿದರಾಗಿ, ಅರೆಭಾಷೆ ನಾಟಕಗಳಲ್ಲಿ ಹಾಗೂ ಕವಿಗೋಷ್ಠಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಕೊಡಗು ಚಾನಲ್ ನ ಕಾರ್ಯಕ್ರಮ ನಿರ್ವಾಹಕರಾಗಿ, ಮಡಿಕೇರಿ ಆಕಾಶವಾಣಿ ಉದ್ಘೋಷಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕ್ರೀಡಾಪಟುವಾಗಿ, ಅತ್ಯುತ್ತಮ ಕಾರ್ಯಕ್ರಮ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)
ಎಡಮಂಗಲ ಸಂಪರ್ಕ ರಸ್ತೆ ಮಾಲೆಂಗಿರಿ ಸೇತುವೆ ಬದಿ ಮಣ್ಣು ಕುಸಿದು ಬಿದ್ದಿದ್ದು ಅಪಾಯದಲ್ಲಿದೆ.ಇನ್ನಷ್ಟು ಮಣ್ಣು ಕುಸಿದ್ದು ಬಿದ್ದರೆ ಎಡಮಂಗಲ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು ಸೇತುವೆ ಹಾನಿಯಾದರೆ ಸಮಸ್ಯೆ ಎದುರಾಗಲಿದ್ದು ಜನಪ್ರತಿನಿಧಿಗಳು,ಅಧಿಕಾರಿಗಳು ಗಮನಹರಿಸಬೇಕಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್ ಕುರಿತ ಮಾಹಿತಿ ಇಲ್ಲಿದೆ ಸಂಪಾಜೆ : ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯ ಪಕ್ಕದಲ್ಲಿಯೇ ಹೊಳೆಯು ಹರಿಯುತ್ತಿದ್ದು ಕೆಲ ವರ್ಷಗಳ ಹಿಂದೆ ಹೊಳೆಯ ನೀರು ನುಗ್ಗಿ ಭಾರಿ ಅವಾಂತರವೇ ಸೃಷ್ಟಿಯಾಗಿತ್ತು. ಇದಾದ ಬಳಿಕ ಸಂಘಟನ ಚತುರ ಈ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಜಿ ಕೆ ಹಮೀದ್...
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆ ಆಯೋಜಿಸಿದ ಗೀತಗಾಯನ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸ್ಕೌಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಗೈಡ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡವನ್ನು ಶಾಲಾ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ತರಬೇತುಗೊಳಿಸಿದ್ದರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಹೊಸದಿಲ್ಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ವಿಶೇಷ ಅವಕಾಶ ಪಡೆದುಕೊಂಡಿದ್ದು, ಇದರಲ್ಲಿ ಮೈಸೂರು ಶೈಕ್ಷಣಿಕ ವಿಭಾಗದಿಂದ ದ.ಕ. ಜಿಲ್ಲೆಯ ಓರ್ವ ವಿದ್ಯಾರ್ಥಿನಿ, ಶಿಕ್ಷಕಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರಿಗೆ ಭಾಗವಹಿಸಲು ವಿಶೇಷ ಆಮಂತ್ರಣ ದೊರಕಿದೆ.ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ ನಾಲ್ಯಪದವು ಕುವೆಂಪು...
ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿ ಇದರ ಆಶ್ರಯದಲ್ಲಿ ಸಾರ್ವಜನಿಕರಿಗೆ ಎರಡನೇ ವರ್ಷದ 'ಆಟಿಡೊಂಜಿ ದಿನ ಹಾಗೂ ಗ್ರಾಮೀಣ ಕ್ರೀಡಾಕೂಟ ಆ. 11ರಂದು ಬೊಳ್ಳಾಜೆ ಶಾಲಾ ವಠಾರಲ್ಲಿ ನಡೆಯಿತು. ಮಂಗಳೂರಿನ ಖ್ಯಾತ ವೈದ್ಯರಾದ ಡಾ| ಶ್ರೀರಾಮ ಭಟ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಕಿಲಾರ್ಕಜೆ...
ಸುಳ್ಯದ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ಆಕ್ರಮಣ ಅತ್ಯಚಾರ ದೌರ್ಜನ್ಯವನ್ನು ಖಂಡಿಸಿ ಹಿಂದೂ ಬಾಂಧವರು ಸುಳ್ಯ ನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಜ್ಯೋತಿ ವೃತ್ತದ ಬಳಿಯಿಂದ ಮಾನವ ಸರಪಳಿ ರಚಿಸಿ ಪ್ಲೇ ಆಫ್ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ವಿವಿಧ ಹಿಂದೂ ಸಂಘಟನೆಯ...
ಕೊಲ್ಲಮೊಗ್ರ,ಕಲ್ಮಕಾರು ಸುತ್ತಮುತ್ತಲಿನ ಪರಿಸರದಲ್ಲಿ ಸಂಜೆಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ನದಿಯು ಉಕ್ಕಿ ಹರಿಯುತ್ತಿದ್ದು, ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. https://youtube.com/shorts/inpk-h88jf4?si=53dNlI0-3cSdQ6Do ಮಳೆಗೆ ನೀರು ಜಾಸ್ತಿ ಹರಿದು ಬರುತ್ತಿದೆ. ಆದರೇ ಜಾಲತಾಣಗಳಲ್ಲಿ ಬರುವಂತೆ ಮರದ ದಿಮ್ಮಿಗಳು ತೇಲಿಬರುತ್ತಿಲ್ಲ, ಜನ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸ್ಥಳೀಯರು ಅಮರ ಸುದ್ದಿಗೆ ತಿಳಿಸಿದ್ದಾರೆ.
ಪಶ್ಚಿಮ ಘಟ್ಟದ ರಕ್ಷಣೆಯ ವರದಿಯ ಬಗ್ಗೆ ಪೀಠಿಕೆ ಕಳೆದ ೨೦೧೧ ರಿಂದ ಇಲ್ಲಿಯ ತನಕ ಗೋದಾವರಿಯಿಂದ ಕನ್ಯಾಕುಮಾರಿಯ ನೀಲಗಿರಿ ತನಕ ೧ಲಕ್ಷ ೬೫ ಸ್ಟೇರ್ ಮೈಲ್ ನ ಉಳಿಯುವಿಕೆಗೆ ಪ್ರಪಂಚದ ಪರಿಸರದ ಹಲವಾರು ಕಾನೂನುಗಳನ್ನು ಆ ದಿನದಿಂದ ನಿರ್ವಹಿಸಿಕೊಂಡು ಬಂದಿದ್ದೇವೆ. ಆದರೆ ೨೦೧೧ ರಿಂದ ಇಲ್ಲಿಯ ತನಕ ಜನ ವಿರೋದಿಸಿದ ಲಾಭವನ್ನು ಶ್ರೀಮಂತ ಕಂಟ್ರಾಕ್ಟರ್ ದಾರರು...
ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಘಟಕ ಮತ್ತು ಪರಿಕ್ಷಾ ಸ್ಪೂರ್ತಿ ಪೌಂಡೇಶನ್ ಇವರು ನೀಡುವ ರಾಜ್ಯ ಮಟ್ಟದಶಿಕ್ಷಕ ಸಾಧಕ ರತ್ನ ಪ್ರಶಸ್ತಿಯು ಕೆ.ವಿ.ಜಿ ಇಂಟರ್ ನ್ಯಾಷನಲ್ಪ ಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶ್ರೀಮತಿ ಭವ್ಯ ಅಟ್ಲೂರು ರವರಿಗೆ ದೊರೆತಿದೆ. ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಪರಿಪೂರ್ಣ ರೀತಿಯಲ್ಲಿ ತಯಾರು ಮಾಡಿ ಅವರಲ್ಲಿ ಶೇ 100% ಫಲಿತಾಂಶ ಪಡೆಯುವಲ್ಲಿ ಕನ್ನಡ...
Loading posts...
All posts loaded
No more posts
