ತಾಲೂಕು ಗ್ಯಾರಂಟಿ ಯೋಜನಾ ಸಮಿತಿಗೆ ಸದಸ್ಯರುಗಳ ನೇಮಕ

ರಾಜ್ಯ ಸರಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕರ್ನಾಟಕ ಸರಕಾರದ ಆದೇಶದಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ಸುಳ್ಯ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರನ್ನು ನೇಮಕ ಮಾಡಿದ್ದಾರೆ. ಶಾಹುಲ್ ಹಮೀದ್ ಸುಳ್ಯ ಅಧ್ಯಕ್ಷರಾಗಿದ್ದು ಸದಸ್ಯರಾಗಿ ರವಿ ಗುಂಡಡ್ಕ, ಭವಾನಿಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ಶ್ರೀಮತಿ ಕಾಂತಿ ಬಿ.ಎಸ್.ಕಲ್ಲುಗುಂಡಿ, ಶ್ರೀಮತಿ...

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 15 : ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದಿನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸೋಮಶೇಖರ ನೇರಳ ದ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಲೀಲಾ ಕುಮಾರಿ ಟಿ ಹಾಗೂ ಶಿಕ್ಷಕಿಯರಾದ ನೇತ್ರ, ಗುಲಾಬಿ, ಚೇತನ, ವಾಣಿಶ್ರೀ, ಶಿಕ್ಷಕರಾದ ಮೋಹನ್ ಪ್ರಸಾದ್,...
Ad Widget

ಹರಿಹರ ಪಲ್ಲತ್ತಡ್ಕ : ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಆ.15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಬಾಳುಗೋಡು ಹಾಗೂ ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು.ಪಿ ಪದ್ಮಾವತಿ ಕಲ್ಲೇಮಠ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಇಂದಿರಾಂಭ, ಪ್ರಿಯಾ ಕಲ್ಲೇಮಠ, ಜಯಕುಮಾರ್ ಹಾಗೂ ಸಂಜೀವಿನಿ...

ಜಯನಗರ ಮಂತ್ರವಾದಿ ಗುಳಿಗನ ಕಟ್ಟೆಯಲ್ಲಿ ಸಂಕ್ರಮಣ ಪೂಜೆ

ಜಯನಗರ ನಿಸರ್ಗ ಮಸಾಲೆ ಪ್ಯಾಕ್ಟರಿ ಸಮೀಪ ಇರುವ ಗುಳಿಗನ ಕಟ್ಟೆಯಲ್ಲಿ ಇಂದು ಮುಂಜಾನೆ 7.30ಕ್ಕೇ ಸಂಕ್ರಮಣ ಪೂಜೆ ನೆರವೇರಿತು , ಸಾರ್ವಜನಿಕರು ಸೀಯಾಳ , ಹಣ್ಣುಕಾಯಿ ನೀಡಿ ಪ್ರಾರ್ಥನೆ ಸಲ್ಲಿಸಿದರು ,ಪೂಜಾ ವಿಧಿ ವಿಧಾನಗಳನ್ನು ಧನಂಜಯ ಪಂಡಿತ್ ನೆರವೇರಿಸಿ ಸೋಣ ತಿಂಗಳ ಆರಂಭ ದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಸಾರ್ವಜನಿಕರು ತಮ್ಮ ಹರಕೆ ಸಲ್ಲಿಸಿ...

ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕದಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯು ಆ.15ರಂದು ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎಸ್ ಅಂಗಾರರವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಪೂರ್ವದ ನೆನಪುಗಳು, ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ತಿಳಿಸಿದರು. ಇವುಗಳನ್ನು ತಿಳಿದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ...

ಬಾಳಿಲ : ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಬಾಳಿಲದ ವಿದ್ಯಾಬೋಧಿನೀ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಜಂಟಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾಬೋಧಿನೀ ಸ್ಕೌಟ್ಸ್ ಗೈಡ್ಸ್ ಬ್ಯಾಂಡ್ ವಾದನದ ಮೂಲಕ ಅತಿಥಿ ಅಭ್ಯಾಗತರನ್ನು ಬರಮಾಡಿಕೊಳ್ಳಲಾಯಿತು. ಧ್ವಜಾರೋಹಣವನ್ನು ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಸಂಚಾಲಕರಾದ ಪಿ. ಜಿ. ಎಸ್. ಎನ್. ಪ್ರಸಾದ್ ನೆರವೇರಿಸಿ ಧ್ವಜ ಸಂದೇಶ ನೀಡಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳು...

ಪಂಜ ದೇಗುಲದಲ್ಲಿ ನಾಗತೀರ್ಥ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಣೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಕೆ ನಾಗತೀರ್ಥ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸ್ವಾತಂತ್ರೋತ್ಸವ ಮೆರವಣಿಗೆ ಮೂಲಕ ಭೇಟಿ ಕೊಟ್ಟರು ಹಾಗೂ ದೇಗುಲದಲ್ಲಿ ಭಜನೆ ಮಾಡಿ ತೀರ್ಥಪ್ರಸಾದ ಸ್ವೀಕರಿಸಿದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಎಲ್ಲರನ್ನೂ ಸ್ವಾಗತಿಸಿ ದೇವಳದ ವತಿಯಿಂದ ಸಿಹಿತಿಂಡಿ ವಿತರಿಸಿದರು. ಮೆರವಣಿಗೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ...

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಪ್ರತಿಯೊಬ್ಬ ನಿವೇಶನ ರಹಿತರಿಗೆ ಮನೆ ಒದಗಿಸುವ ಸಂಕಲ್ಪಕ್ಕೆ ಕೈ ಜೋಡಿಸಿ :ಭಾಗೀರಥಿ ಮುರುಳ್ಯ

ಸುಳ್ಯ: ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ವಹಿಸಿದ್ದ ಕು. ಭಾಗೀರಥಿ ಮುರುಳ್ಯ ಮಾತನಾಡುತ್ತಾ ನಮ್ಮ ಗ್ರಾಮ, ಜಿಲ್ಲೆ, ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆದಂತೆ. ಪ್ರತಿಯೊಬ್ಬರಿಗೂ ಸೂರು ಒದಗಿಸುವ ಸಂಕಲ್ಪ ಮಾಡುವ ಮೂಲಕ ಸ್ವಾತಂತ್ರ್ಯವನ್ನು ಅರ್ಥ ಪೂರ್ಣವಾಗಿ ಮಾಡಬೇಕು...

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ 78ನೇ ಸ್ವಾತಂತ್ರ ದಿನಾಚರಣೆ

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ದ್ವಜರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ ಇವರು ನೆರವೆರಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು,ನಿರ್ದೇಶಕರು, ಸಂಜೀವಿನಿ ಸಂಘದ ಸಿಬ್ಬಂದಿಗಳು ಹಾಗೂ ಸದಸ್ಯರು, ಪಶುಸಖಿ,...

ಹಿದಾಯತುಲ್ ಇಸ್ಲಾಂ ಮದ್ರಸ, ಝಕರಿಯಾ ಜುಮಾ ಮಸೀದಿ ಬೆಳ್ಳಾರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಹಿದಾಯತುಲ್ ಇಸ್ಲಾಂ ಮದ್ರಸ, ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ವತಿಯಿಂದ ಭಾರತ ದೇಶದ 78 ನೇ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಬೆಳ್ಳಾರೆ ಪೇಟೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಮುತಅಲ್ಲಿಂಗಳು, ಪೋಷಕರು ಉಸ್ತಾದರು, ಜಮಾಅತ್ ಕಮಿಟಿ ಪದಾಧಿಕಾರಿಗಳು ಒಳಗೊಂಡ ಶಾಂತಿ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.ನಂತರ ಮುದರ್ರಿಸರಾದ...
Loading posts...

All posts loaded

No more posts

error: Content is protected !!