ಹರಿಹರ ಪಳ್ಳತ್ತಡ್ಕ : ಭಾರೀ ಮಳೆಗೆ ಸಂಪೂರ್ಣ ಹಾನಿಗೊಳಗಾದ ನೇತಾಜಿ ಯುವಕ ಮಂಡಲದ ಕಟ್ಟಡ ; ಸಚಿನ್ ಕ್ರೀಡಾ ಸಂಘದ ಕ್ರೀಡಾ ಪರಿಕರಗಳಿಗೂ ಹಾನಿ

ಹರಿಹರ ಪಳ್ಳತ್ತಡ್ಕ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ನೇತಾಜಿ ಯುವಕ ಮಂಡಲದ ಕಟ್ಟಡವು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದ್ದು, ಕಟ್ಟಡದೊಳಗೆ ಸಚಿನ್ ಕ್ರೀಡಾ ಸಂಘದ ಕ್ರೀಡಾ ಪರಿಕರಗಳಿದ್ದು, ಅವುಗಳಿಗೂ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

ಇಂದಿನ(ಆಗಸ್ಟ್ 03) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 03 ಆಗಸ್ಟ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 03) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
Ad Widget

ಸುಬ್ರಹ್ಮಣ್ಯ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯ, ಕಲ್ಲಾಜೆ ಮತ್ತು ಕುಲ್ಕುಂದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ ಆ.02 ರಂದು ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲಾ ರಂಗಯ್ಯರವರ ಅಧ್ಯಕ್ಷತೆಯಲ್ಲಿ...

“ಆಟಿಯ ಮಹತ್ವವನ್ನು ಯುವಜನತೆಗೆ ತಿಳಿಸಿ” : ರೇಖಾ ಗೋಪಾಲ್ – ಯುವವಾಹಿನಿ ಸುಳ್ಯ ಘಟಕದಿಂದ ಬೆಳ್ಳಾರೆಯಲ್ಲಿ ಆಟಿದ ಕೂಟ

ಆಟಿಯು ಬಡತನದ ದಿನಗಳನ್ನು ಸಂಭ್ರಮಿಸುವ ತಿಂಗಳು. ಯುವ ಸಮುದಾಯಕ್ಕೆ ಆಟಿ ತಿಂಗಳ ಮಹತ್ವವನ್ನು ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹೇಳಿದರು.  ಅವರು ಆ.02ರಂದು ಯುವವಾಹಿನಿ ರಿ. ಸುಳ್ಯ ಘಟಕದ ವತಿಯಿಂದ ಬೆಳ್ಳಾರೆ ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆದ...

ದ್ವಾದಶ ರಾಶಿಗಳ ದಿನ ಭವಿಷ್ಯ – 03 ಆಗಸ್ಟ್ 2026

*01,ಮೇಷರಾಶಿ*,ಇಂದು ಶಾಂತವಾಗಿ ಒತ್ತಡ ಮುಕ್ತವಾಗಿರಿ. ತರಾತುರಿಯಲ್ಲಿ ಯಾವುದೇ ಕೆಲಸಗಳನ್ನು ಮಾಡವುದು ಬೇಡಿ. ನಿಮ್ಮ ನಿರ್ಧಾರದಲ್ಲಿ ಪೋಷಕರ ಸಹಾಯ ನಿಮಗೆ ತುಂಬ ಸಹಾಯ ಮಾಡುತ್ತದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ,ಗಮನಿಸಿ:-ಈ ದಿನ ಕಚೇರಿಯಲ್ಲಿ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿ ಬರುವುದು,ಪರಿಹಾರ:-ನಿಮ್ಮ ತಂದೆ ಅಥವಾ ತಂದೆಯಂತಹ ವ್ಯಕ್ತಿಯಿಂದ ಆಶೀರ್ವಾದ ಪಡೆಯಿರಿ, *02,ವೃಷಭರಾಶಿ*,ನಿಮ್ಮ ಆಸಕ್ತಿಗಳನ್ನು ಮತ್ತು...

ಅಕ್ಷಯ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ ಪರಿಷತ್ ಪದಗ್ರಹಣ ಸಮಾರಂಭ

ಪುತ್ತೂರಿನ ಅಕ್ಷಯ ಪದವಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ಚುನಾವಣೆಯು ಜು. 30ರಂದು ಯಶಸ್ವಿಯಾಗಿ ನಡೆಯಿತು. ಇದರ ಅಂಗವಾಗಿ ವಿಜೇತ ಪ್ರತಿನಿಧಿಗಳ ಪದಗ್ರಹಣ ಸಮಾರಂಭವನ್ನು ಕಾಲೇಜಿನಲ್ಲಿ ವಿಜೃಂಭಣೆಯಿAದ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಗೋ ಲಕ್ಷ್ಮಿ ಎಂಟರ್‌ಪ್ರೈಸಸ್‌ನ ಮಾಲಕರು ಹಾಗೂ ರಾಷ್ಟ್ರೀಯ ಜೆಸಿಐ (JCI) ತರಬೇತುದಾರ ಕೃಷ್ಣ ಮೋಹನ್ ಪಿ.ಎಸ್. ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ...

ಗುತ್ತಿಗಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಕಿಂಡಿ ಅಣೆಕಟ್ಟುಗಳ ಸ್ಪಚ್ಛತೆಯ ಕಾರ್ಯ

ಗುತ್ತಿಗಾರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮುತ್ಲಾಜೆ ಮತ್ತು ಕುಟ್ರುಮಕ್ಕಿ ಹಾಗೂ ಕಲ್ಟಾರು ನಲ್ಲಿರುವ ಕಿಂಡಿ ಅಣೆಕಟ್ಟುವಿನಲ್ಲಿ ಮರದ ದಿಮ್ಮಿಗಳು, ಬಿದಿರು, ಕಂಗು, ಬಾಳೆ ಹಾಗೂ ಇನ್ನಿತರ ಕಾಡುಗಳು ಸಿಲುಕಿ ಪಕ್ಕದ ತೋಟಕ್ಕೆ ನೀರು ನುಗ್ಗಿದ್ದನ್ನು ತಿಳಿದು ಗುತ್ತಿಗಾರಿನ ಶೌರ್ಯ ವಿಪತ್ತು ತಂಡದ ಸದಸ್ಯರು ಪಂಚಾಯತ್ ನ ನೋಡೆಲ್ ಅಧಿಕಾರಿಯಾದ ದೇವರಾಜ್ ಮುತ್ಲಾಜೆ ಹಾಗೂ ವಲಯ ಮೇಲ್ವಿಚಾರಕರಾದ...

ಅಜ್ಜಾವರ : ಅಡ್ಪಂಗಾಯ ಕಾಲೊನಿಯಲ್ಲಿ ತಡೆಗೋಡೆ ಕುಸಿತ ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು

ಅಜ್ಜಾವರ ಗ್ರಾಮದ ಅಡ್ಪಂಗಾಯ ಕಾಲೊನಿಯಲ್ಲಿ ಆ.01ರಂದು ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದಿದ್ದು, ಘಟನಾ ಸ್ಥಳಕ್ಕೆ ಆ.02ರಂದು ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ, ಅರ್.ಐ ಸಿಬ್ಬಂದಿ ನಾರಾಯಣ ಹಾಗೂ ಗ್ಯಾರೆಂಟಿ ಸಮಿತಿಯ ಸದಸ್ಯರಾದ ಅಬ್ಬಾಸ್.ಎ.ಬಿ ಉಪಸ್ಥಿತರಿದ್ದರು.

ಬೊಳ್ಳಾಜೆ : ಯಾಧವ ಸಭಾ ಕೇಂದ್ರದ ತಾಲೂಕು ಸಮಿತಿಯ ಸಭೆ

ಯಾದವ ಸಭಾ ಕರ್ನಾಟಕ(ರಿ.) ಕೇಂದ್ರ ಸಮಿತಿ, ಮಂಗಳೂರು ಪ್ರಾದೇಶಿಕ ಸಮಿತಿ ಬೆಟ್ಟ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆ.02ರಂದು ಗೋಪಾಲಕೃಷ್ಣ ಬೊಳ್ಳಾಜೆಯವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಕಿಲಾರ್ಕಜೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷರಾದ ಕರುಣಾಕರ ಹಾಸ್ಪರೆ, ತಾಲೂಕು ಯುವ...

ನಾಳೆ(ಆ.03) ದ.ಕ ಜಿಲ್ಲೆಯ ಮಂಗಳೂರು ಹಾಗೂ ಪುತ್ತೂರು ಉಪವಿಭಾಗದ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಹೊರಡಿಸಿರುವ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ(ಆ.03) ಮಂಗಳೂರು ಉಪವಿಭಾಗದ ತಾಲೂಕುಗಳಾದ ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ, ಉಳ್ಳಾಲದ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ...
Loading posts...

All posts loaded

No more posts

error: Content is protected !!