- Monday
- September 14th, 2026
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಮರಪಡ್ನೂರು ಚೊಕ್ಕಾಡಿ ಒಕ್ಕೂಟದ ಸದಸ್ಯರಿಂದ ಅ.11 ರಂದು ಅಜ್ಜನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಯಿತು. ಶ್ರಮದಾನ ಕಾರ್ಯದಲ್ಲಿ ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿ ಹಾಗೂ ಎಲ್ಲಾ ತಂಡದ ಸದಸ್ಯರು ಭಾಗವಹಿಸಿದರು.
ರಾಜ್ಯದಲ್ಲಿ ಶಿಕ್ಷಕರಿಗೆ ಮಕ್ಕಳಿಗೆ ಕೋವಿಡ್-19 ಹರಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಆದರಿಂದ ಶಿಕ್ಷಕರ ಮತ್ತು ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಅ. 12 ರಿಂದ 30 ವರೆಗೆ ಶಾಲೆ ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ತರಗತಿಗಳನ್ನು ಸ್ಥಗಿತಗೊಳಿಸಿ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ.
ಐವರ್ನಾಡು ಮುಖ್ಯರಸ್ತೆ ಸಮೀಪ ವಿನಯ್ ಕುಮಾರ್ ಉದ್ದಂಪಾಡಿ ಮಾಲಕತ್ವದ ಶ್ರೀ ಮಹಾಮ್ಮಾಯಿ ಅಟೋವರ್ಕ್ಸ್ ಅ.14 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ವಿಧದ ದ್ವಿಚಕ್ರ ವಾಹನಗಳ ರಿಪೇರಿ ಕೆಲಸಗಳನ್ನು ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಶಾಂತಿನಗರ ಪದ್ಮನಾಭ ಎಂಬವರ ಮನೆಯಲ್ಲಿ ಹತ್ಯೆಗೀಡಾದ ಸಂಪತ್ ಕೊಲೆ ಪ್ರಕರಣದಲ್ಲಿ ಆರೋಪಿಗಳು ಈಗಾಗಲೇ ಪೊಲೀಸರ ಬಲೆಗೆ ಸಿಕ್ಕಿ ರುವುದಾಗಿ ತಿಳಿದುಬಂದಿದೆ. ಅವರ ಮೇಲೆ ಕಾನೂನು ಕ್ರಮಗಳು , ವಿಚಾರಣೆಗಳು ಎಲ್ಲವೂ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ನಡೆಸಲಾಗುತ್ತದೆ. ಕೊಲೆ ನಡೆದ ಮನೆಯಲ್ಲಿ ಬಡ ದಂಪತಿಗಳು ತಮ್ಮ 4 ವರ್ಷದ ಪುಟ್ಟ ಮಗುವಿನೊಂದಿಗೆ...
ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಮಂಡೆಕೋಲು, ಕನಕಮಜಲು ಹಾಗೂ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ...
ವಿದ್ಯಾರ್ಥಿಗಳು ಹೊಸ ದೃಷ್ಟಿ ಕೋನವನ್ನು ಬೆಳೆಸಿಕೊಳ್ಳಬೇಕು.ಈಗ ತಮ್ಮ ಪ್ರತಿಭೆ ತೋರ್ಪಡಿಸಲು ಅಗಾಧ ಅವಕಾಶಗಳು ಸಿಗುತ್ತಿವೆ.ಅದನ್ನು ಉಪಯೋಗಿಸುವ ಚಾಣಾಕ್ಷತನ ವಿದ್ಯಾರ್ಥಿಗಳಿಗಿರಬೇಕು. ಕಂಫೋರ್ಟ್ ಜೋನ್ ನಿಂದ ನೀವೆಲ್ಲರೂ ಹೊರಬರಬೇಕು.ನಿಮ್ಮನ್ನು ಉಳಿದವರೊಂದಿಗೆ ಹೋಲಿಸಿಕೊಳ್ಳಬೇಡಿ. ಚರಿತ್ರೆಯಿಂದ ನಾವು ಪಾಠ ಕಲಿಯಬೇಕು. ನಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕುಎಂದು ಎಂ.ಬಿ.ಪೌಂಡೇಶನ್ ನ ಅಧ್ಯಕ್ಷ ಶ್ರೀ ಎಂ.ಬಿ.ಸದಾಶಿವ ಹೇಳಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ...
ಒಬ್ಬ ಮಹಾನ್ ಶಿಕ್ಷಣ ಪ್ರೇಮಿಯ ದೂರದೃಷ್ಟಿಯ ಫಲವನ್ನು ಇಂದು ಸುಳ್ಯ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. ತಮ್ಮ ಸಂಪತ್ತಿನ ಒಂದಂಶವನ್ನು ಶಿಕ್ಷಣ ಕ್ಕಾಗಿ ವಿನಿಯೋಗಿಸುತ್ತಿರುವ ಶ್ರೀಯುತರು ತಾಲೂಕಿನ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಇಂಥ ಮಹಾನುಭಾವರ ಸಂಖ್ಯೆ ಹೆಚ್ಚಬೇಕು ಎಂದು ಹಿರಿಯ ಸಹಕಾರಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ...
ಅರಂತೋಡು ಮರ್ಕಂಜ ರಸ್ತೆಯ ವೈ.ಎಂ.ಕೆ ಚಡಾವಿನಲ್ಲಿ ವಾಹವೊಂದು ಚಾಲಕನ ನಿಯಂತ್ರಣ ತಪ್ಪಿ, ಹಿಂದಕ್ಕೆ ಚಲಿಸಿ ಚರಂಡಿಗೆ ಹೋಗಿದೆ.ಹಾಸನದಿಂದ ಮಡಪ್ಪಾಡಿ ಗೆ ಹುಲ್ಲು ಹೇರಿಕೊಂಡು ಬರುತ್ತಿತ್ತು. ಈ ಚಡಾವು ಅವೈಜ್ಞಾನಿಕ ಸ್ಥಿತಿಯಲ್ಲಿದ್ದು, ಅದೆಷ್ಟೋ ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆ ಕೂಡ ಕಿರಿದಾಗಿದ್ದು ಲೋಡ್ ತುಂಬಿದ ವಾಹನ ಚಾಲನೆ ಮಾಡುವುದು ಸಾಹಸವೇ ಆಗಿದೆ. ನೂರಾರು ವಾಹನಗಳು...
ತಾಲೂಕಿನ ಗುತ್ತಿಗಾರು ಗ್ರಾಮದ ಮೊಟ್ಟೆಮನೆ- ಹೊಸೊಳಿಕೆ ಎಂಬಲ್ಲಿ ಅಕ್ರಮವಾಗಿ ಸರ್ಕಾರಿ ಸ್ಥಳದಿಂದ ಕಿರಾಲ್‌ಭೋಗಿ ಹಾಗು ಹೆಬ್ಬಲಸು ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ಯತ್ನಿಸಿರುವ ಪ್ರಕರಣ ದಿನಾಂಕ 07/10/2020 ರಂದು ದಾಖಲಾಗಿದೆ. ಪ್ರಕರಣವನ್ನು ಪಂಜ ವಲಯದ ಬಳ್ಪ ಶಾಖೆಯ ಸಿಬ್ಬಂದಿಗಳು ಪತ್ತೆ ಹಚ್ಚಿ ತಕ್ಷೀರು ದಾಖಲಿಸಿರುತ್ತಾರೆ. ಪ್ರಕರಣದಲ್ಲಿ ಒಳಗೊಂಡಿರುವ ಆಟೋರಿಕ್ಷಾ ನೊಂದಣಿ ಸಂಖ್ಯೆ ಕೆಎ21ಬಿ...
Loading posts...
All posts loaded
No more posts
