Ad Widget

ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿರ; ಮಾಹಿತಿ ನೀಡಿದ ಮಗ ಅಭಿಜಿತ್​

ಬುಧವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಣಬ್​ ಆರೋಗ್ಯ ತುಂಬಾನೇ ಗಂಭೀರವಾಗಿದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಅಭಿಜಿತ್​ ತಂದೆಯ ಆರೋಗ್ಯ ಸ್ಥಿರವಾಗಿರುವ ಬಗ್ಗೆ ಮಾಹಿತಿ ಅವರ ಪುತ್ರ ಟ್ವೀಟರ್ ನಲ್ಲಿ ಸಂದೇಶ ನೀಡಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ದೇಶದ 13 ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಇಂದು ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್ 19 ಭಾದಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. 1935 ಡಿಸೆಂಬರ್ 11 ರಂದು ಪಶ್ಚಿಮ ಬಂಗಾಳದ ಬೀರ್ ಬೂಂ ನಲ್ಲಿ ಜನಿಸಿದ್ದರು. ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬಾಂಗ್ಲಾ ಕಾಂಗ್ರೆಸ್ ನಿಂದ ರಾಜಕೀಯಕ್ಕೆ ಬಂದ ಇವರು...
Ad Widget

ನಾಳೆ ಐವರ್ನಾಡು ಸಹಕಾರ ಸಂಘದ ವತಿಯಿಂದ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ

ಐವರ್ನಾಡು ಪ್ರಾ. ಕೃ. ಪ. ಸಹಕಾರ ಸಂಘದ ವತಿಯಿಂದ ಆ. 13 ರಂದು ಅಪರಾಹ್ನ 2 ಗಂಟೆಗೆ ಯಂತ್ರದ ಮೂಲಕ ಅಡಿಕೆ ಮರ ಏರುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರಿಕಾ ಪೂಜಾರಿಕೋಡಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 615 ಅಂಕ

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯ ದ ಕುಮಾರಸ್ವಾಮಿ ಪ್ರೌಢಶಾಲಾ ವಿದ್ಯಾರ್ಥಿನಿ ಸಾಗರಿಕಾ ಪಿ.ಎಚ್. ಪೂಜಾರಿಕೋಡಿ 615 ಅಂಕ ಪಡೆದು ಉತ್ತಮ ಸಾಧನೆ ಮಾಡಿರುತ್ತಾಳೆ.ಈಕೆ ನೋಟರಿ ಹಾಗೂ ವಕೀಲರಾಗಿರುವ ಗುತ್ತಿಗಾರು ಗ್ರಾಮದ ಹರೀಶ್ ಪೂಜಾರಿಕೋಡಿ ಮತ್ತು ಪ್ರೇಮ ದಂಪತಿಗಳ ಪುತ್ರಿ. ಇವರ ಇನ್ನೊಬ್ಬಳು ಪುತ್ರಿ ನಿಹಾರಿಕಾ ಪಿ.ಎಚ್. ಈ ಬಾರಿಯ ನವೋದಯ...

ಎಸ್.ಎಸ್.ಎಫ್ ಸುಳ್ಯ ಡಿವಿಷನ್ ವತಿಯಿಂದ ಅನುಷ್ ಎ.ಎಲ್ ರವರಿಗೆ ಸನ್ಮಾನ

ಎಸ್.ಎಸ್.ಎಲ್.ಸಿ 2019-20 ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನೀಯನಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನುಷ್ ಎ.ಎಲ್ ರವರ ಮನೆಗೆ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ನಿಯೋಗವು ಭೇಟಿ ನೀಡಿ ಸಮಿತಿಯ ವತಿಯಿಂದ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಅಭಿನಂದನಾ ಫಲಕ ಹಾಗೂ ಸಿಹಿತಿಂಡಿ ನೀಡಿ ಸನ್ಮಾನಿಸಲಾಯಿತು....

ಅಜ್ಜಾವರ ಮೂಲದ ವ್ಯಕ್ತಿಗೆ ಪಾಸಿಟಿವ್- ಇಂದು ಸುಳ್ಯದಲ್ಲಿ ಒಟ್ಟು 4 ಪ್ರಕರಣ ಪತ್ತೆ

ಅಜ್ಜಾವರ ಬಯಂಬು ಮೂಲದ ವ್ಯಕ್ತಿಗೆ ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ಆಗಿದ್ದಾರೆ. ಇಂದು ಒಟ್ಟು 4 ಪ್ರಕರಣ ಪತ್ತೆಯಾದಂತಾಗಿದೆ.

ವಾಲ್ತಾಜೆ ಯುವ ಸೇವಾ ಮತ್ತು ಕ್ರೀಡಾ ಸಂಘ ವತಿಯಿಂದ ಸಹಾಯಧನ ವಿತರಣೆ

ದೇವಚಳ್ಳ ಗ್ರಾಮದ ವಾಲ್ತಾಜೆ ಯುವ ಸೇವಾ ಮತ್ತು ಕ್ರೀಡಾ ಸಂಘದ ಸಕ್ರಿಯ ಸದಸ್ಯರಾಗಿದ್ದ ಸೀತಾರಾಮ್ ಮೀನಾಜೆಯವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ಅವರಿಗೆ ಸಂತಾಪ ಸೂಚಿಸಿದ, ನಂತರ ಸಂಘದ ವತಿಯಿಂದ 50 ಕೆಜಿ ಅಕ್ಕಿ ಮತ್ತು 5000 ರೂ ಧನಸಹಾಯವನ್ನು ಅವರ ಮನೆಗೆ ತೆರಳಿ ಪತ್ನಿ ಲಲಿತ ಮಗಳು ರತಿಕ್ಷಾ ಅವರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ...

ಲಕ್ಷ್ಮಣ ಆಚಾರ್ಯ ಅಡ್ಡನಪಾರೆ ನಿಧನ

ಗುತ್ತಿಗಾರು ಗ್ರಾಮದ ಅಡ್ಡನಪಾರೆ ಲಕ್ಷ್ಮಣ ಆಚಾರ್ಯ ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಆ. 5 ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೋಭಾವತಿ, ಪುತ್ರರಾದ ಮಾಜಿ ಗ್ರಾ.ಪಂ.ಸದಸ್ಯರುಗಳಾದ ಗಂಗಾಧರ, ಭವಾನಿಶಂಕರ, ಪುತ್ರಿ ಚಂದ್ರಕಲಾ ಅಳಿಯ,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಶಾ ಡಿ.ಕೆ. 601 ಅಂಕ

ವಿಟ್ಲ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಇಶಾ ಡಿ.ಕೆ., ಎಸ್ ಎಸ್ ಎಲ್.ಸಿ.ಪರಿಕ್ಷೆಯಲ್ಲಿ 601 ಅಂಕ (ಶೇ 96.16) ಗಳಿಸಿರುತ್ತಾಳೆ. ಈಕೆ ಸುಳ್ಯ ತಾಲೂಕು ಎಣ್ಮೂರು ಗ್ರಾಮದ ಗುತ್ತಿಗೆ ಮನೆ ದಿ.ಇಸ್ಮಾಯಿಲ್ ಮತ್ತು ಖದೀಜ ದಂಪತಿಗಳ ಪುತ್ರಿ.

ಐವರ್ನಾಡು ಮನೆ ಕುಸಿತ,ಸಂಪೂರ್ಣ ಹಾನಿ

ಐವರ್ನಾಡು ಗ್ರಾಮದ ಬಾಂಜಿಕೋಡಿ ಪ್ರಭಾಕರ ನಾಯಕ್ ಇವರ ಮನೆ ಇಂದು ಕುಸಿದು ಬಿದ್ದಿದೆ. ಮನೆಯ ಮಾಡು ಸಂಪೂರ್ಣ ಕುಸಿದಿದ್ದು, ಗೋಡೆ ಶಿಥಿಲಗೊಂಡಿದೆ. ಸ್ಥಳಕ್ಕೆ ಪಿಡಿಓ, ಗ್ರಾಮಲೆಕ್ಕಾಧಿಕಾರಿ, ಹಾಗೂ ಪಂಚಾಯತ್ ಮಾಜಿ ಸದಸ್ಯರು ಭೇಟಿ ನೀಡಿದ್ದಾರೆ. ಸ್ಥಳೀಯರು ಹಾಗೂ ಹಿತೈಷಿಗಳು ಕುಸಿದಿರುವ ಮನೆಯ ಸಾಮಾಗ್ರಿ ತೆರವುಗೊಳಿಸುವ ಕಾರ್ಯನಡೆಸಿದ್ದಾರೆ. ಕೂಡಲೇ ಸ್ಪಂದಿಸಿದ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ...
Loading posts...

All posts loaded

No more posts

error: Content is protected !!