ನೆಲ್ಲೂರು ಕೆಮ್ರಾಜೆ ಸೊಸೈಟಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ 2021-22 ಸಾಲಿನ ಸಮಗ್ರ ಕಾರ್ಯಚಟುವಟಿಕೆಗೆ ದ.ಕ. ಜಿಲ್ಲಾ ಡಿಸಿಸಿ ಬ್ಯಾಂಕ್ ಕೊಡಮಾಡುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರಶಸ್ತಿ ಲಭಿಸಿದೆ. ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ರವರು ಆ.05 ರಂದು ಮಂಗಳೂರಿನ ಜಿಲ್ಲಾ ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ...

ಅರಂತೋಡು: ಖುಷಿಯ ಚಿಕಿತ್ಸೆಗೆ ಧನ ಸಹಾಯ ನೀಡಿದ ಡಾ| ಕೆ.ವಿ. ರೇಣುಕಾಪ್ರಸಾದ್

ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ಪೇಲ್ತಡ್ಕ ಯೋಗೀಶ್ ರವರ ಪುತ್ರಿ ಖುಷಿ ಯವರ ಚಿಕಿತ್ಸಾ ವೆಚ್ಚಕ್ಕಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರು ಹಾಗೂ ಎ.ಓ.ಎಲ್.ಇ. ಪ್ರಧಾನ ಕಾರ್ಯದರ್ಶಿ ಡಾ| ಕೆ.ವಿ ರೇಣುಕಾಪ್ರಸಾದ್ ರವರು ಹತ್ತು ಸಾವಿರ ರೂಪಾಯಿ ನೀಡಿದರು. ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ಉಪಾಧ್ಯಕ್ಷ ದಯಾನಂದ ಕುರುಂಜಿಯವರು ಚೆಕ್ ಪಡೆದುಕೊಂಡರು.
Ad Widget

ಪೆರುವಾಜೆ ಭಾವೈಕ್ಯ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಪ್ರಮೀಳಾ ಶೆಟ್ಟಿ , ಕಾರ್ಯದರ್ಶಿ ಸುಮಲತಾ ಸುನಿಲ್

ಪೆರುವಾಜೆ ಗ್ರಾಮದ ಭಾವೈಕ್ಯ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆಯು ಆ.08 ರಂದು ನಡೆಯಿತು.ಮಹಿಳಾ ಮಂಡಲದ ಅಧ್ಯಕ್ಷರಾಗಿ ಪ್ರಮೀಳಾ ಶೆಟ್ಟಿ,ಉಪಾಧ್ಯಕ್ಷರಾಗಿ ಭಾಗ್ಯಲಕ್ಷ್ಮಿ ಅರ್ನಾಡಿ, ಕಾರ್ಯದರ್ಶಿಯಾಗಿ ಸುಮಲತಾ ಸುನಿಲ್, ಜತೆ ಕಾರ್ಯದರ್ಶಿಯಾಗಿ ಯಶೋಧಾ, ಕೋಶಾಧಿಕಾರಿಯಾಗಿ ರಾಗಿಣಿ ಆಯ್ಕೆಯಾದರು.ನಿರ್ದೇಶಕರಾಗಿ ಪ್ರೇಮ ಕೊಲ್ಯ, ವನಿತಾ ಸಾರಕೆರೆ, ಸುಜಾತ ಪದ್ಮನಾಭ, ವೀಣಾ ಕೊಲ್ಯ, ಸವಿತಾ, ಅಶ್ವಿನಿ ಆಯ್ಕೆಯಾದರು.

ಕು. ರಸಿಕ ಮುರುಳ್ಯ ಅಭಿನಯದ ಶ್ರೀ ರಕ್ಷೆ ಕನ್ನಡ ಆಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ

ಮುರುಳ್ಯದ ಕು. ರಸಿಕ ಅಭಿನಯನದ ಶ್ರೀರಕ್ಷೆ ಬಾಂಧವ್ಯದ ತೋಳಿನಲ್ಲಿ ಎಂಬ ಅಣ್ಣ ತಂಗಿಯ ಸಂಬಂಧವನ್ನು ಸಾರುವ ಕನ್ನಡ ಆಲ್ಬಮ್ ಸಾಂಗ್ ನ ಪೋಸ್ಟರ್ ವಿಟ್ಲ ಶ್ರಿ ಪಂಚಲಿಂಗೇಶ್ವರ ಸನ್ನಿದಿಯಲ್ಲಿ ಕೃಷ್ಣಯ್ಯ ಕೆ ಅರಮನೆ ವಿಟ್ಲ ಇವರ ಮಾರ್ಗದರ್ಶನದಲ್ಲಿ ಬಿಡುಗಡೆಗೊಂಡಿತು. ಕಾರ್ತಿಕ್ ಕುಮಾರ್ ಇವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಾಂಗ್ ಗೆ ಅಚಲ್ ವಿಟ್ಲ...

ನಡುಗಲ್ಲು :- ವಿದ್ಯುತ್ ಲೈನ್ ಗೆ ತಾಗುವ ಗೆಲ್ಲು ಕಡಿಯುವ ಮೂಲಕ ಶ್ರಮದಾನ

ಆ.07 ರಂದು ನಡುಗಲ್ಲು ಶಾಲೆಯ ಹತ್ತಿರದಿಂದ ಅಂಬೆಕಲ್ಲು, ಹಲ್ಗುಜಿ, ಕಲ್ಲಾಜೆಯವರೆಗೆ ವಿದ್ಯುತ್ ಲೈನ್ ಗೆ ತಾಗುವ ಗೆಲ್ಲು ಕಡಿಯುವ ಮೂಲಕ ಶ್ರಮದಾನ ಮಾಡಲಾಯಿತು. ಊರಿನವರು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಹಾಗೂ ಮೆಸ್ಕಾಂ ನವರು ಸಹಕರಿಸಿದರು. ವರದಿ :- ಉಲ್ಲಾಸ್ ಕಜ್ಜೋಡಿ

ಜಟ್ಟಿಪಳ್ಳ :- ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ, ಪದಗ್ರಹಣ ಸಮಾರಂಭ

ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆ.07 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ಜರುಗಿತು. ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪುರುಷೋತ್ತಮ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆವಿಜಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಅರ್ಚನಾ ಆರ್ ರೈ ಆಗಮಿಸಿ ಪ್ರಮಾಣ ವಚನ ಭೋದಿಸಿದರು. ಮಹಿಳಾ...

ಪ್ರವೀಣ್ ಹತ್ಯೆ ಪ್ರಕರಣ – ಮತ್ತಿಬ್ಬರ ಬಂಧನ

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ ಆರಕ್ಕೇರಿದೆ.ಸುಳ್ಯದ ನಾವೂರು ಬಳಿಯ ನಿವಾಸಿ ಆಬಿದ್ (22) ಹಾಗೂ ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ (28) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ‌

ಅರಂತೋಡು : ಕಿಡಿಗೇಡಿಗಳು ಕಿತ್ತೆಸೆದ ಜಾಗದಲ್ಲಿ ಮತ್ತೆ ಚುನಾವಣಾ ಬಹಿಷ್ಕಾರದ ಬ್ಯಾನರ್

ಅರಂತೋಡು ಮರ್ಕಂಜ ಎಲಿಮಲೆ ರಸ್ತೆಯಲ್ಲಿ ವೈ.ಎಂ.ಕೆ.ಚಡಾವು ಬಳಿ ಅಡ್ತಲೆ ನಿವಾಸಿಗಳು ಅಳವಡಿಸಿದ್ದ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಕಿಡಿಗೇಡಿಗಳು ನದಿಗೆ ಎಸೆದಿದ್ದರು. ಅಂದೇ ಮುಖ್ಯಮಂತ್ರಿಗಳು ಅದೇ ರಸ್ತೆಯಲ್ಲಿ ಸುಳ್ಯಕ್ಕೆ ಬರುವವರಿದ್ದರು. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬ್ಯಾನರ್ ತೆಗಿದಿದ್ದಾರೆಂದು ಖಂಡಿಸಿ ಅಡ್ತಲೆಯ ನಾಗರಿಕರು ಬ್ಯಾನರ್ ಕಿತ್ತೆಸೆದವರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗಿದ್ದರು. ಆ.7 ರಂದು ಪುನಃ ರಸ್ತೆಯ...

ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗಗಳಲ್ಲಿ ಭಾರೀ ಮಳೆ.- ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರ ಜೊತೆಗೆ ಕೈ ಜೋಡಿಸುತ್ತಿರುವ ಶೌರ್ಯ ವಿಪತ್ತು ನಿರ್ವಹಣಾ ಘಟಕ.

ಕಳೆದ ಕೆಲವು ದಿನಗಳಿಂದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾರೀ ಹಾನಿಗಳಾಗುತ್ತಿರುವ ಘಟನೆಗಳು ಮುಂದುವರಿದಿವೆ. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಾಗುವ ಕಾರ್ಯ ಮಾಡುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

ಕಲ್ಮಡ್ಕ : ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ

ಮರಾಟಿ ಸಮಾಜ ಸೇವಾ ಸಂಘ ಕಲ್ಮಡ್ಕ ಇದರ ವಾರ್ಷಿಕ ಮಹಾಸಭೆ ಆ. 07ರಂದು ಸಂಘದ ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ ಉಡುವೆಕೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ತೀರ್ಥಾನಂದ ಕಲ್ಮಡ್ಕ ಲೆಕ್ಕಪತ್ರ ಮತ್ತು ವಾರ್ಷಿಕ ವರದಿಯನ್ನು ಮಂಡಿಸಿದರು.ನಂತರ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ವೆಂಕಪ್ಪ ನಾಯ್ಕ ಮಂಞನಕಾನ ಮರಾಟಿ ಸಮುದಾಯದ ಬಗ್ಗೆ ಮತ್ತು...
Loading posts...

All posts loaded

No more posts

error: Content is protected !!